ಉಮಾದೇವಿ ಟೋಪಣ್ಣವರ ನಿಧನಕ್ಕೆ ಗಣ್ಯರಿಂದ ಸಂತಾಪ

0
37
loading...

ಪೂಜ್ಯರಿಂದ ಸಂತಾಪ

ಬೆಳಗಾವಿ : 27  ನಾಡು ನುಡಿಗೆ ಬದ್ಧರಾಗಿ, ಕನ್ನಡಮ್ಮ ಪತ್ರಿಕೆಯ ಸಂಪಾದಕರಾಗಿ ಉಮಾದೇವಿ ಟೋಪಣ್ಣವರ ಅವರು ನೀಡಿದ ಕೊಡುಗೆ ಅವಿಸ್ಮರಣೀಯ. ಅವರಂಥ ದಿಟ್ಟ ಹೋರಾಟಗಾರರ ಅಗಲಿಕೆ ನಾಡಿಗೆ ತುಂಬಲಾರದ ಹಾನಿ ತಂದಿದೆ. ಭಗವಂತ ಉಮಾದೇವಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನಾಗನೂರು ರುದ್ರಾಕ್ಷಿ ಮಠದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಕಾರಮಜಿ ಮಠದ ಗುರುಸಿದ್ದ ಮಹಾಸ್ವಾಮಿಗಳು ಸದಾಶಿವ ನಗರ ಉಮಾಮಹಾದೇವ ನಿವಾಸಕ್ಕೆ ತೆರಳಿ ಉಮಾದೇವಿ ಅವರಿಗೆ ಶೃದ್ದಾಂಜಲಿ ಸಲ್ಲಿಸಿ ಶೋಕ ಸಂದೇಶ ತಿಳಿಸಿದರು.

ಸಂಸದ ಸುರೇಶ ಅಂಗಡಿ ಸಂತಾಪ

ಬೆಳಗಾವಿ : 27 ನಾಡು-ನುಡಿ, ನೆಲ-ಜಲಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದ ಕನ್ನಡಮ್ಮ ದಿನ ಪತ್ರಿಕೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಉಮಾದೇವಿ ಟೋಪಣ್ಣವರ ನಿಧನಕ್ಕೆ ಸಂಸದ ಸುರೇಶ ಅಂಗಡಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡಮ್ಮ ಪತ್ರಿಕೆ ಮೂಲಕ ಕನ್ನಡಕ್ಕಾಗಿ ಅವರು ಸಲ್ಲಿಸಿದ ಕೊಡುಗೆ
ಅನುಪಮ. ಸದಾ ಹೋರಾಟಪರವಾಗಿ ಗುರುತಿಸಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಂಡು ನಾಡು-ನುಡಿಗಾಗಿ ತಮ್ಮನ್ನು ಅವರು ಸಮರ್ಪಿಸಿಕೊಂಡಿದ್ದರು. ಮಹಿಳಾ ಪರ ಹೋರಾಟಗಾರ್ತಿಯಾಗಿ ಗಡಿಭಾಗದಲ್ಲಿ ಕನ್ನಡಮ್ಮ ಪತ್ರಿಕೆಯನ್ನು ಕಟ್ಟಿ ಬೆಳೆಸಿ ಯುವ ಪೀಳಿಗೆಗೆ ಸದಾ ಮಾರ್ಗದರ್ಶನ ನೀಡುತ್ತಿದ್ದ ಅವರ ಸೇವೆ ಮೌಲಿಕವಾಗಿದೆ. ಅವರ ನಿಧನದಿಂದ ಕನ್ನಡ ನಾಡು ಓರ್ವ ದೀಮಂತ ಮಹಿಳಾ ಹೋರಾಟಗಾರ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.

Suresh angadi

ಜಿಲ್ಲಾ ಉಸ್ತುವಾರಿ ಸಚಿವರ ಶೋಕ
ಬೆಳಗಾವಿ : 27 ಕಳೆದ 2 ದಶಕಗಳಿಂದ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾಗಿ ಪತ್ರಿಕೋದ್ಯಮಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಶ್ರೀಮತಿ. ಉಮಾದೇವಿ ಟೋಪಣ್ಣವರ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಖಾತೆ ಸಚಿವರಾದ ಸತೀಶ ಜಾರಕಿಹೊಳಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಗಡಿಭಾಗದಲ್ಲಿ ಕನ್ನಡಮ್ಮ ಪತ್ರಿಕೆಯನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದ ಶ್ರೇಯಸ್ಸು ಶ್ರೀಮತಿ. ಉಮಾದೇವಿ ಟೋಪಣ್ಣವರ ಅವರಿಗೆ ಸಲ್ಲುತ್ತದೆ ಎಂದು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Satish jaraki holi
ವಾರ್ತಾ ಸಚಿವರ ಸಂತಾಪ
ಬೆಳಗಾವಿ : 27 ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾಗಿದ್ದ ಶ್ರೀಮತಿ.ಉಮಾದೇವಿ ಟೋಪಣ್ಣವರ ನಿಧನಕ್ಕೆ ವಾರ್ತಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವರಾದ ರೋಷನ್ ಬೇಗ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಗಡಿಭಾಗದಲ್ಲಿ ಕನ್ನಡಮ್ಮ ದಿನಪತ್ರಿಕೆಯ ಮುಖಾಂತರ ಕನ್ನಡದ ಹೋರಾಟಗಾರ್ತಿಯಾಗಿ ದುಡಿದ ಅವರ ಸೇವೆ ಸ್ಮರಣೀಯ ಎಂದು ಅವರು ಕಂಬನಿ ಮಿಡಿಸಿದ್ದಾರೆ.

ROSHAN BEG

ವಾರ್ತಾ ಇಲಾಖೆ ನಿರ್ದೇಶಕರ ಶೋಕ
ಬೆಳಗಾವಿ : 27 ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾಗಿದ್ದ ಶ್ರೀಮತಿ. ಉಮಾದೇವಿ ಟೋಪಣ್ಣವರ ಅವರ ನಿಧನಕ್ಕೆ ವಾರ್ತಾ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದಿ. ಎಂ.ಎಸ್. ಟೋಪಣ್ಣವರ ಅವರ ನಿಧನದ ನಂತರ ಗಡಿ ಭಾಗದಲ್ಲಿ ಕನ್ನಡಮ್ಮ ದಿನಪತ್ರಿಕೆಯನ್ನು ಉಳಿಸಿ ಬೆಳೆಸಿ ಪ್ರಾದೇಶಿಕ ಪತ್ರಿಕೆಯನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಶಾಸಕ ಸಂಭಾಜಿ ಪಾಟೀಲ ಶೋಕ
ಬೆಳಗಾವಿ : 27  ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ಶ್ರೀಮತಿ. ಉಮಾದೇವಿ.ಟೋಪಣ್ಣವರ ಅವರು ದೈವಾಧೀನರಾಗಿರುವುದು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಹಾನಿಯನ್ನು ಭರಿಸುವ ಶಕ್ತಿ ನೀಡಲೆಂದು ಶಾಸಕ
ಸಂಭಾಜಿ ಪಾಟೀಲ ಅವರು ಶೋಕ ವ್ಯಕ್ತಪಡಿಸಿದರು. ಅವರು ಸದಾಶಿವ ನಗರದ ಉಮಾಮಹಾದೇವ ನಿವಾಸಕ್ಕೆ ಭೇಟಿ ನೀಡಿ ಉಮಾದೇವಿಯವರಿಗೆ ಶೃದ್ದಾಂಜಲಿ ಸಲ್ಲಿಸಿದರು. ಟೋಪಣ್ಣವರ ಮನೆತನ ನಾಡುನುಡಿಯ ಪರವಾಗಿ ನಿಂತು ಯಾವತ್ತೂ ಹೋರಾಟ ಮಾಡಿದ ಮನೆತನವಾಗಿದೆ. ದಿ. ಎಂ.ಎಸ್.ಟೋಪಣ್ಣವರ ಅವರ ನಿಧನದ ನಂತರ ಉಮಾದೇವಿಯವರು ಕನ್ನಡಮ್ಮ ಪತ್ರಿಕೆಯನ್ನು ರಾಜ್ಯ ಮಟ್ಟಕ್ಕೆ ತಂದು ನಿಲ್ಲಿಸಿದರಲ್ಲದೇ, ಕನ್ನಡ ಭಾಷೆ, ನೆಲ ಜಲಕ್ಕೆ ಕುತ್ತು ಬಂದಾಗ ದಿಟ್ಟತನದಿಂದ ಹೋರಾಟ ನಡೆಸಿದ್ದಾರೆ. ಉಮಾದೇವಿಯವರ ಹೋರಾಟದ ಬದುಕು ಮೆಚ್ಚುವಂಥದ್ದು ಎಂದು ಅಭಿಮಾನದಿಂದ ಉಮಾದೇವಿಯವರ ಕಾರ್ಯ ಕ್ಷಮತೆಯನ್ನು ಶ್ಲಾಘಿಸಿದರು.

SAMABAJI PATIALA

ಮಾಜಿ ಶಾಸಕ ಅಭಯ ಪಾಟೀಲ ಸಂತಾಪ 

ಬೆಳಗಾವಿ : 27 ಸದಾಶಿವ ನಗರದ ಉಮಾದೇವಿಯವರ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ಮಾಜಿ ಶಾಸಕ ಅಭಯ ಪಾಟೀಲ ಉಮಾದೇವಿ ಟೋಪಣ್ಣವರ ಅವರಿಗೆ ಶೃದ್ದಾಂಜಲಿ ಸಲ್ಲಿಸಿದರು. ಅವರ ನಿಧನ ಬೆಳಗಾವಿ ಹಾಗೂ ನಾಡಿನ ಜನತೆಗೆ ತುಂಬಲಾರದ ಹಾನಿ ತಂದಿದೆ. ಇವರ ಅಗಲಿಕೆ ಹೋರಾಟದ ಕೊಂಡಿ ಕಳಚಿಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಅಭಯ ಪಾಟೀಲ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದರು.

ABHAYA PATILA
ಜಿಲ್ಲಾಡಳಿತದಿಂದ ಶ್ರದ್ದಾಂಜಲಿ
ಬೆಳಗಾವಿ : .27 ಗುರುವಾರ ರಾತ್ರಿ ನಿಧನರಾದ ಕನ್ನಡಮ್ಮ ಪತ್ರಿಕೆಯ ಸಂಪಾದಕರಾದ ಉಮದೇವಿ ಟೋಪಣ್ಣವರ ಅವರ ನಿವಾಸಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಎನ್.ಜಯರಾಮ್ ಆಗಮಿಸಿ ಮುಖ್ಯಮಂತ್ರಿಗಳ ಶೋಕ ಸಂದೇಶದ ಪತ್ರವನ್ನು ಉಮಾದೇವಿಯವರ ಪುತ್ರ ರಾಜೀವ ಟೋಪಣ್ಣವರ ಅವರಿಗೆ ನೀಡಿ ಸರಕಾರದ ಶೋಕ ಸಂದೇಶ ತಲುಪಿಸಿದರು. ಬೆಳಗಾವಿ ಜಿಲ್ಲಾಡಳಿತದ ಪರವಾಗಿ ಉಮಾದೇವಿಯವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಉಮಾದೇವಿಯವರು ಅಪ್ರತಿಮ ಹೋರಾಟಗಾರರು ಹಾಗೂ ವಸ್ತು ನಿಷ್ಠ ಸಂಪಾದಕರಾಗಿದ್ದಾರೆ. ಇವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ಹಾನಿ ತಂದಿದೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಸಿದ ಅವರು, ತಾವು ನಗರ ವ್ಯಾಪ್ತಿಯಲ್ಲಿ ಆಟೋಗಳಿಗೆ ಕಡ್ಡಾಯ ಮೀಟರ್ ಅಳವಡಿಕೆಯ ಆದೇಶ ಹೊರಡಿಸಿದ ಸಂದರ್ಭದಲ್ಲಿ ಉಮಾದೇವಿಯವರು ತಾವೇ ಖುದ್ದಾಗಿ ಕಚೇರಿಗೆ ಆಗಮಿಸಿ ಮೀಟರ್ ಅಳವಡಿಕೆಯ ಆದೇಶಕ್ಕೆ ಬೆಂಬಲ ಸೂಚಿಸಿ ತಮ್ಮ ಬೆನ್ನು ತಟ್ಟಿದರು. ಅಂದು ಅವರೊಂದಿಗೆ ಮಾತನಾಡಿದ ಮಾತುಗಳು ಇಂದಿಗೂ ನನಗೆ ನೆನಪಿವೆ. ಅವರೊಬ್ಬ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿಯಾಗಿದ್ದರು ಎಂದರು.

Jilladikari Jayaram
ಬಸವರಾಜ ಕಂಬಿ ಸಂತಾಪ
ಬೆಳಗಾವಿ : 27 ಕನ್ನಡಮ್ಮ ಪತ್ರಿಕೆಯ ಸಂಪಾದಕರಾದ ಉಮಾದೇವಿ ಟೋಪಣ್ಣವರ ಅವರ ಅಗಲಿಕೆ ಪತ್ರಿಕಾ ಕ್ಷೇತ್ರದ ತುಂಬಲು ಬಾರದ ಹಾನಿ ತಂದಿದೆ.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಜಿಲ್ಲಾ ವಾರ್ತಾ ನಿರ್ದೇಶಕ ಬಸವರಾಜ ಕಂಬಿ ಉಮಾದೇವಿ ಯವರಿಗೆ ಶ್ರದ್ದಾಂಜಲಿ ಸಲ್ಲಿಸಿ ವಾರ್ತಾ ಇಲಾಖೆಯ ಪರವಾಗಿ ಸಂತಾಪ ಸೂಚಿಸಿದರು.

BASAVARAJA KAMBI

ಶಾಸಕ ಅರವಿಂದ ಪಾಟೀಲ ಸಂತಾಪ

ಬೆಳಗಾವಿ : 27  ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ಶ್ರೀಮತಿ. ಉಮಾದೇವಿ.ಟೋಪಣ್ಣವರ ಅವರು ದೈವಾಧೀನರಾಗಿರುವುದು ರಾಜ್ಯಕ್ಕೆ ತುಂಬಲಾರದ
ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಹಾಗೂ ಅವರ ಕುಟುಂಬದ ಸದಸ್ಯರಿಗೆ ಈ ಹಾನಿಯನ್ನು ಭರಿಸುವ ಶಕ್ತಿ ನೀಡಲೆಂದು ಖಾನಾಪೂರ
ಶಾಸಕ ಅರವಿಂದ ಪಾಟೀಲ ಅವರು ಸದಾಶಿವ ನಗರದ ಉಮಾಮಹಾದೇವ ನಿವಾಸಕ್ಕೆ ಭೇಟಿ ನೀಡಿ ಉಮಾದೇವಿಯವರಿಗೆ ಶೃದ್ದಾಂಜಲಿ ಸಲ್ಲಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಸಂತಾಪ
ಬೆಳಗಾವಿ : 27 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ, ಕನ್ನಡಪರ ಹೋರಾಟಗಾರ್ತಿ ಕನ್ನಡಮ್ಮ ದಿನಪತ್ರಿಕೆ ಸಂಪಾದಕಿಯಾದ ಉಮಾದೇವಿ ಟೋಪಣ್ಣವರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಾ.ಭೀಮಶಿ ಜಾರಕಿಹೊಳಿಯವರು ಪತ್ರಕರ್ತೆ ಉಮಾದೇವಿ ಟೋಪಣ್ಣವರ ಅಗಲಿಕೆಗೆ ಸಂತಾಪ ಸೂಚಿಸಿ ಮಾತನಾಡಿ, ಪತ್ರಿಕಾ ರಂಗದಲ್ಲಿ ಮಹಿಳೆಯಾಗಿದ್ದುಕೊಂಡು ಜನಪರವಾದಂತ  ಹೋರಾಟದಲ್ಲಿ ತಮ್ಮನ್ನೆ ತಾವು ಗುರುತಿಸಿಕೊಳ್ಳುವದರೊಂದಿಗೆ ಜಿಲ್ಲೆಯಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದರು. ಇವರ ಅಗಲಿಕೆಯಿಂದ ಪತ್ರಿಕಾರಂಗ ಸೇರಿದಂತೆ ಇನ್ನುಳಿದ ಸಂಘಟನೆಗಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಶೋಕ ಜೋಶಿ, ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ಪ್ರಧಾನ ಕಾರ್ಯದರ್ಶಿ ದೀಲೀಪ ಕುರಂದವಾಡಿ, ಕಾರ್ಯದರ್ಶಿಗಳಾದ ಶ್ರೀಕಾಂತ ಕುಬಕಡ್ಡಿ, ಚಂದ್ರು ಶ್ರೀರಾಮುಡು, ಮಹಾಂತೇಶ ಬಾಳಿಕಾಯಿ, ಖಜಾಂಚಿ ಬಸವಣೆಪ್ಪ ಉಳ್ಳೇಗಡ್ಡಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪುಂಡಲೀಕ ಬಾಳೋಜಿ ಸೇರಿದಂತೆ ಜಿಲ್ಲೆಯ ಎಲ್ಲ ಪತ್ರಕರ್ತರು ಉಮಾದೇವಿ ಟೋಪಣ್ಣವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಸಂಪಾದಕರ ಸಂಘದಿಂದ ಸಂತಾಪ

ಬೆಳಗಾವಿ : 27 ಬೆಳಗಾವಿಯಂತಹ ಗಡಿಭಾಗದಲ್ಲಿ ಕನ್ನಡ ದಿನಪತ್ರಿಕೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿಕೊಂಡ ಧೀಮಂತ ಪತ್ರಕರ್ತರು ಶ್ರೀಮತಿ. ಉಮಾದೇವಿ ಟೋಪಣ್ಣವರ ಆಗಿದ್ದರು. ಜಿಲ್ಲಾ ಕನ್ನಡ ದಿನಪತ್ರಿಕೆಗಳ ಸಂಪಾದಕರ ಸಂಘದ ಗೌರವಾಧ್ಯಕ್ಷರು ಆಗಿದ್ದು, ಅವರು ಇಲ್ಲಿನ ಗಡಿ ಭಾಗದಲ್ಲಿನ ಕನ್ನಡ ದಿನಪತ್ರಿಕೆಗಳ ಹಿಸಾಸಕ್ತಿಗಾಗಿ ಸರ್ಕಾರದೊಂದಿಗೆ ಹೋರಾಡಿದರು. ಗಡಿ ಭಾಗದಲ್ಲಿ ಕನ್ನಡಪರ ವಾತಾವರಣ ನಿರ್ಮಾಣಕ್ಕಾಗಿ ಹಾಗೂ ಕನ್ನಡದ ಹಿತಸಕ್ತಿಗಾಗಿ ನಡೆಯುವಂತಹ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಶ್ರೀಮತಿ ಟೋಪಣ್ಣನವರ್ ಅವರ ಆತ್ಮಕ್ಕೆ ಶಾಂತಿ ದೊರಕಲೆಂದೂ, ಅವರ ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದೂ ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಲೋಕ ದರ್ಶನ ಪತ್ರಿಕೆಯ ಸಂಪಾದಕ ಎಂ.ಬಿ.ದೇಸಾಯಿ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ ಮುಚಳಂಬಿ. ನಾಡೋಜ ಸಂಪಾದಕ ಸಲೀಮ ಧಾರವಾಡಕರ, ಸಿರಿನಾಡು ಪತ್ರಿಕೆ ಸಂಪಾದಕ ಸುರೇಶ ಟೋಪಣ್ಣವರ, ಸಮದರ್ಶಿ ಪತ್ರಿಕೆಯ ಸಂಪಾದಕ ಅಶ್ರಫ್ ಧಾರವಾಡಕರ ಗಡಿಕನ್ನಡಿಗ ಪತ್ರಿಕೆಯ ಸಂಪಾದಕ ಮುರಗೇಶ ಶಿವಪೂಜಿ, ಹಳ್ಳಿ ಸಂದೇಶ ಪತ್ರಿಕೆಯ ಸಂಪಾದಕ ಕುಂತಿನಾಥ ಕಲಮನಿ ಮೊದಲಾದವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕಸಾಪ ಕಂಬನಿ
ಬೆಳಗಾವಿ :  27 ಗುರುವಾರ ರಾತ್ರಿ ನಿಧನರಾದ ಶ್ರೀಮತಿ ಉಮಾದೇವಿ ಟೋಪಣ್ಣವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶೋಕ ವ್ಯಕ್ತಪಡಿಸಿದೆ. ಬೆಳಗಾವಿ ನಗರದ ಕನ್ನಡ ಹೋರಾಟಗಾರರು, ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ನೀಡಿದ ಶ್ರೀಮತಿ ಉಮಾದೇವಿ ಟೋಪಣ್ಣವರ ತಮ್ಮ `ಕನ್ನಡಮ್ಮಳಿ ಪತ್ರಿಕೆ ಮೂಲಕ ಬೆಳಗಾವಿಯಂತಹ ಗಡಿ ಭಾಗದಲ್ಲಿ ಕನ್ನಡಿಗರಲ್ಲಿ ಸದಾ ಜಾಗೃತಿ. ಮೂಡಿಸುತ್ತಿದ್ದರಲ್ಲದೇ ಕನ್ನಡಪರ ಕಾರ್ಯಕ್ರಮಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದರು. ಇವರ ಅಗಲಿಕೆಯಿಂದ ಬೆಳಗಾವಿ ಅದರಲ್ಲಿಯೂ ಗಡಿಭಾಗದಲ್ಲಿ ಸಾಂಸ್ಕ್ಕತಿಕ ಸಾಹಿತ್ಯಿಕ ಕ್ಷೇತ್ರ ಬಡವಾಗಿದೆ.
ಇವರ ನಿಧನಕ್ಕೆ ಪ್ರೊ. ಎಂ.ಎಸ್. ಇಂಚಲ, ಬಿ.ಎಸ್. ಗವಿಮಠ, ಡಾ. ಬಸವರಾಜ ಜಗಜಂಪಿ,ಏಣಗಿ ಸುಭಾಷ, ರವಿ ಉಪಾಧ್ಯೆ, ಡಾ. ರಾಮಕೃಷ್ಣ ಮರಾಠೆ, ಡಿ.ಎಸ್. ಚೌಗಲಾ, ಬಸವರಾಜ ನರೇಗಲ್ಲ, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ನೀಲಗಂಗಾ ಚರಂತಿಮಠ, ಕಸಾಪ ಜಿಲ್ಲಾಧ್ಯಕ್ಷ ಯ.ರು.ಪಾಟೀಲ, ಗೌ. ಕಾರ್ಯದರ್ಶಿಗಳಾದ ಬಸವರಾಜ ಗಾರ್ಗಿ, ಅ.ಬ.ಕೊರಬು, ತಾಲೂಕಾಧ್ಯಕ್ಷ ಬಸವರಾಜ ಸಸಾಲಟ್ಟಿ, ಪ್ರಕಾಶ ಗಿರಿಮಲ್ಲಣ್ಣವರ, ಮಾಜಿ ಮಹಾಪೌರರಾದ ಸಿದ್ಧನಗೌಡ ಪಾಟೀಲ,ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ, ಹಿರಿಯ ಸಾಹಿತಿಗಳಾದ ಚಂದ್ರಕಾಂತ ಕೂಸುನೂರ, ಜಿನದತ್ತ ದೇಸಾಯಿ, ಪತ್ರಕರ್ತ ಸಾಹಿತಿಗಳಾದ ಡಾ. ಸರಜೂ ಕಾಟ್ಕರ್, ರಾಘವೇಂದ್ರ ಜೋಷಿ, ರಾಮಕೃಷ್ಣ ಮರಾಠೆ, ಪ್ರೊ. ಡಿ.ಎಸ್.ಚೌಗಲಾ, ಶೀರೀಷ ಜೋಷಿ, ಏಣಗಿ ಬಾಳಪ್ಪ, ಎಲ್.ಎಸ್. ಶಾಸ್ತ್ತ್ರಿ, ಪ್ರೊ. ಜ್ಯೌತಿ ಹೊಸೂರ ಮುಂತಾದ ಗಣ್ಯರು ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. ನಾಗನೂರ ರುದ್ರಾಕ್ಷಿಮಠ, ಪೂಜ್ಯಶ್ರೀಗಳಾದ ಸಿದ್ಧರಾಮ ಮಹಾಸ್ವಾಮಿಗಳು, ಕಾರಂಜಿಮಠದ ಪೂಜ್ಯಶ್ರೀಗಳಾದ ಗುರುಸಿದ್ದ ಮಹಾಸ್ವಾಮಿಗಳು, ಕಿತ್ತೂರ ರಾಜಗುರುಗಳಾದ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು, ನಿಡಸೋಸಿಯ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲ ಪೂಜ್ಯರು ಶ್ರೀಮತಿ ಉಮಾದೇವಿ ಟೋಪಣ್ಣವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಕನ್ನಡ ಸಾಹಿತ್ಯ ಸಂಘ ವತಿಯಿಂದ ಸಂತಾಪ
ಯಮಕನಮರಡಿ : 27 ಕನ್ನಡದ ಹೋರಾಟಗಾರತಿ ಹಾಗೂ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕಿಯಾದ ಉಮಾದೇವಿ ಟೋಪಣ್ಣವರ ನಿಧನಕ್ಕೆ ಗಡಿನಾಡು ಅಭಿವೃದ್ದಿ ಹಾಗೂ ಕನ್ನಡ ಸಾಹಿತ್ಯ ಸಂಘ ಯಮಕನಮರಡಿ-ಹತ್ತರಗಿ ಇದರ ಪದಾಧಿಕಾರಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಸಂಘದ ಅಧ್ಯಕ್ಷ ಎ.ಜಿ.ವಾಘ ಉಪಾಧ್ಯಕ್ಷ ಪಿ.ಬಿ.ಅವಲಕ್ಕಿ, ಪ್ರಧಾನ ಕಾರ್ಯದರ್ಶಿ ಎ.ಎಂ. ಕರ್ನಾಚಿ, ನಿರ್ದೇಶಕರಾದ ಎ.ಬಿ.ನಾಯಿಕ, ಗೋಪಾಲ ಚಪಣಿ, ವಿಜಯ ಮೇದಾರ, ಸುರೇಶ ಮಂಜರಗಿ, ಜಿ.ಜಿ.ದೀಕ್ಷಿತ, ಮಹೇಶ ದೇಶಪಾಂಡೆ, ಪ್ರಕಾಶ ಹೊಸಮನಿ, ಶೀಲಾ ದಬಾಡೆ ಹಾಗೂ ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಶಶಿರೇಕಾ ಪಿ.ಕೆ., ಸಿದ್ಧಣ್ಣ ಹಾಲದೇವರಮಠ, ಈರಣ್ಣ ಕದಂ, ನ್ಯಾಯವಾದಿಗಳಾದ ವಿ.ಎಸ್.ವಾಗರಾಳಿ, ಕುಮಾರಿ ಎಂ.ಜಿ.ಸರವರ, ಮಾಣಿಕ್ಯ ಕಳ್ಳಿಮನಿ, ರಮೇಶ ನಾಯಿಕ ಇನ್ನುಳಿದ ಸದಸ್ಯರು ಸಂತಾಪ ಸೂಚಿಸಿ ಉಮಾದೇವಿ ಟೋಪಣ್ಣವರ ನಿಧನದಿಂದ ಕನ್ನಡದ ಹೋರಾಟಕ್ಕೆ ಹಾಗೂ ಪತ್ರಿಕಾ ರಂಗಕ್ಕೆ ತುಂಬಲಾರದ ಹಾನಿಯುಂಟಾಗಿದೆ ಎಂದರು.
ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಶೋಕ
ಬೆಳಗಾವಿ : 27 ಕನ್ನಡಪರ ಹೋರಾಟಗಾರ್ತಿ ಹಾಗೂ ಕನ್ನಡಮ್ಮ ದಿನಪತ್ರಿಕೆಯ ಸಂಪಾದಕರಾದ ಉಮಾದೇವಿ ಟೋಪಣ್ಣವರ ಅವರ ನಿಧನಕ್ಕೆ ಸಿರಿಗನ್ನಡ ರಾಷ್ಟ್ತ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ತೀವ್ರ ಶೋಕ ವ್ಯಕ್ತ ಪಡಿಸಿದ್ದಾರೆ. ಶ್ರೀಮತಿ ಉಮಾದೇವಿ ಟೋಪಣ್ಣವರ ಅವರ ನಿಧನದಿಂದ ಬೆಳಗಾವಿ ಪತ್ರಿಕಾರಂಗಕ್ಕೆ ಹಾಗೂ ಕನ್ನಡ ಚಳುವಳಿಗೆ ತುಂಬಲಾರದ ನಷ್ಟವಾಗಿದೆ. ಅವರ ಕನ್ನಡ ಸೇವೆ ಸ್ಮರಣೀಯವಾದದ್ದು ಎಂದು ಸಿರಿಗನ್ನಡ ಪ್ರತಿಷ್ಠಾನ ಶೋಕ ವ್ಯಕ್ತಪಡಿಸಿದೆ.

loading...

LEAVE A REPLY

Please enter your comment!
Please enter your name here