ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ : ಝಿರಲಿ

0
11
loading...

Karyakrtarige sukta stana mana1

ಬೆಳಗಾವಿ : 21 ಸುಮಾರು ವರ್ಷಗಳಿಂದ ಬಿಜೆಪಿ ಪಕ್ಷ ಎಷ್ಟೇ ಶ್ರಮದಿಂದ ಕಾರ್ಯ ಮಾಡಿದರೂ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಗೆಲುವು ಪಡೆಯಲು ಸಾಧ್ಯವಾಗಿಲ್ಲ ಎಂದು ಎಮ್.ಬಿ.ಝಿಲಿ ಇಂದಿಲ್ಲಿ ವಿಷಾದ ವ್ಯಕ್ತ ಪಡೆಸಿದರು.
ಅವರು ಶನಿವಾರ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತ, ವ್ಯಕ್ತಿಗಿಂತ ಪಕ್ಷ ಮುಖ್ಯ, ಬಡವರು ಎಲ್ಲೆಡೆ ಇದ್ದಾರೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರು ಗಾಂಧಿ ನಗರದ ಅತಿಕ್ರಮಣ ಕಾರ್ಯ ನಡೆಸಿದಾಗ ಮಧ್ಯಸ್ಥಿಕೆ ವಹಿಸಿ ತಮ್ಮ ವರ್ಚಸ್ಸನ್ನು ತೊರಿಸಿಕೊಳ್ಳುವದು ಸೂಕ್ತವಲ್ಲ. ಸರಕಾರಿ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.
ಪಕ್ಷಕ್ಕಿಂತ ದೇಶ ಮುಖ್ಯವೆಂದು ಕೆಲಸ ಮಾಡುತ್ತಿರುವ ಕಾರ್ಯಕರ್ತರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಗಳಿಸುವಲ್ಲಿ ಮೋರ್ಚಾ ಕಾರ್ಯಕರ್ತರು ಶ್ರಮವಹಿಸಿದ್ದಾರೆ.
ಜಿಲ್ಲೆಯಲ್ಲಿ ಮೊದಲು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಪಕ್ಷದ ಗುರುತನ್ನು ಇಡುವ ಕಾರ್ಯಮಾಡಬೇಕಿದೆ. ಪಾಲಿಕೆಯಲ್ಲಿ 58 ಕಾರ್ಪೋರೇಟರ ಹೊಂದಿದ್ದರೂ ಬಿಜೆಪಿ ಪಕ್ಷದ ಗುರುತನ್ನು ಇಡಲು ವಿಫಲವಾಗಿದ್ದೇವೆ. ಆದ್ದರಿಂದ ಇನ್ನಷ್ಟು ಶ್ರಮವಹಿಸಿ ಕಾರ್ಯ ಮಾಡಿದರೆ ಬರುವ ದಿನಗಳಲ್ಲಿ ಪಾಲಿಕೆಯಲ್ಲಿ ಬಿಜೆಪಿ ಗುರುತನ್ನು ಇಡುಬಹುದು ಎಂದು ಅವರು ಹೇಳಿದರು.
ಬೆಳಗಾವಿ ಯುವ ಮೋರ್ಚಾ ಕಾರ್ಯಕರ್ತರಿಗೆ ಯುವಕರಿಗೆ ಹಾಗೂ ಹಿರಿಯರಿಗೆ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ ಎಂಬ ನೋವು ಇದೆ. ಬರುವ ದಿನಗಳಲ್ಲಿ ಹಿರಿಯ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ಮಾನ ಸಿಗುವಂತೆ ಕಾರ್ಯ ಮಾಡುವುದಾಗಿ ಝಿಲಿ ತಿಳಿಸಿದರು.
ಸಭೆಯಲ್ಲಿ ಉಜ್ವಲಾ ಬಡವನಾಚೆ, ರಾಜು ಚಿಕ್ಕನಗೌಡ್ರ, ರಾಜೀವ ಟೋಪಣ್ಣವರ, ಆರ್.ಎಸ್.ಮುತಾಲಿಕ, ಅನಿಲ ಬೆನಕೆ, ಶಂಕರ ವಿಜಾಪೂರ, ಬಾವು ಕುಲಕರ್ಣಿ, ಎಲ್.ಬಿ.ಪಾಟೀಲ, ಆನಂದ ದೇಸಾಯಿ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here