ತುಳಸಿಯವರ ಜನ್ಮ ಜನ್ಮಶತಾಬ್ದಿ

0
13
loading...

ಧಾರವಾಡ : 22 ಆಚಾರ್ಯ ಶ್ರೀ ತುಳಸಿ ಅವರ ಜನ್ಮಶತಾಬ್ದಿ ಅಂಗವಾಗಿ ಅನುರತ ಆಂತೋಲನದ ಜನಜಾಗೃತಿ ನಿಮಿತ್ತ ಶ್ರಮಣಜಿ ಕಂಚನ್ಪ್ರಜ್ಞಾಜಿ, ಶ್ರಮಣಜಿ ಗೌತಮ್ಪ್ರಜ್ಞಾಜಿ, ಶ್ರಮಣಜಿ ರಸನೀಯಪ್ರಜ್ಞಾಜಿ ನೇತೃತ್ವದಲ್ಲಿ ಧಾರವಾಡದಲ್ಲಿ ಶೋಭಾಯಾತ್ರೆ ನಡೆಯಿತು.
ಜೈನ್ ಸಮಾಜದ ವತಿಯಿಂದ ಕಡಪಾ ಮೈದಾನದಿಂದ ಹೊರಟ ಶೋಭಾ ಯಾತ್ರೆ, ಪಾಲಿಕೆ ವೃತ್ತ, ಹಳೇ ಬಸ್ ನಿಲ್ದಾಣ, ಸುಭಾಸ ರಸ್ತೆ, ಗಾಂಧಿಚೌಕ್ ಮೂಲಕ ಹಾಯ್ದು ರವಿವಾರಪೇಟೆ ಜೈನ್ ಮಂದಿರಕ್ಕೆ ಹೋಗಿ ಸಮಾಪ್ತಿಯಾಯಿತು.
ಈ ಕಾರ್ಯಕ್ರಮದಲ್ಲಿ ಅನುರತ ಆಂದೋಲನದ ಮಹತ್ವವನ್ನು ವಿಡಿಯೋಚಿತ್ರದ ಮೂಲಕ ಪ್ರದರ್ಶಿಸಲಾಯಿತು.
ಸಮಾಜದ ಮುಖಂಡರಾದ ಮಾಣಿಕ ರಾಠೋಡ, ಚಂಪಾಲಾಲ್ ಸೇಮಲಾನಿ, ರಾಯಚಂದ್ರ ಛೋಪ್ರಾ, ಲಲಿತ ಭಂಡಾರಿ, ನಿಲೇಶ ಪಾಲ್ಗೌತಾ, ಸತೀಶ ಮೆಹ್ತಾ, ಅಮರಚಂದ ಜೈನ್, ಮದನ್ ಪೋರವಾಲ್, ಮಹಿಳಾ ಮಂಡಳಿಗಳಿ ಸದಸ್ಯರು ಹಾಗೂ ಮೊದಲಾದವರು ಇದ್ದರು.

loading...

LEAVE A REPLY

Please enter your comment!
Please enter your name here