ತೇರದಾಳ : 12 ಮಣ್ಣಿನಿಂದ ಸಕಲ ವಸ್ತುಗಳೆಲ್ಲ, ಮಣ್ಣು ಬಿಟ್ಟರೇ ಆಧಾರವಿಲ್ಲ ಎನ್ನುವಂತೆ ಭಾರತೀಯ ಸಂಸ್ಕ್ಕತಿಯಲ್ಲಿ ಭೂತಾಯಿಗೆ, ಭೂಮಿಯ ಫಲವತ್ತಾದ ಮಣ್ಣಿಗೆ, ಮಣ್ಣಿನಲ್ಲಿ ಊಳುವಾಗ ಎತ್ತುಗಳಿಗೆ ನಮ್ಮ ಜನರು ಹೆಚ್ಚಿನ ಪ್ರಾಶಸ್ತ್ಯ ಕೊಟ್ಟು ಪೂಜ್ಯನೀಯವಾಗಿ ಕಾಣುತ್ತಾರೆ. ಭೂಮಿಯನ್ನು ದೇವರಿಗೆ ಹೋಲಿಸುತ್ತಾರೆ. ಪಂಚದೇವತೆಗಳಲ್ಲಿ ಭೂಮಿಗೂ ದೇವತಾ ಸ್ವರೂಪ ಕಲ್ಪಿಸಲಾಗಿದೆಯೆಂದು ಇಲ್ಲಿಯ ರೈತರು, ಹಿರಿಯರನೇಕರು ಹೇಳುತ್ತಾರೆ.
ಜೂನ್13 ಶುಕ್ರವಾರ ಕಾರಹುಣ್ಣಿವೆ ಪ್ರಯುಕ್ತ ಜೂನ್12 ಗುರುವಾರ ಹೊನ್ನುಗ್ಗಿಯಂದು ಮನೆ-ಮನೆಗೆ ಕುಂಬಾರರು ಹೊತ್ತು ತಂದ ಮಣ್ಣಿನ ಎತ್ತುಗಳನ್ನು ಮಹಿಳೆಯರು, ಮಕ್ಕಳು, ಮನೆಯ ಯಜಮಾನರು ಪಡೆದು ಪೂಜಿಸಿದರು.
ಕೆಲವರು ಕುಂಬಾರರ ಮನೆಗಳಿಗೆ ಹೋಗಿ ದುಡ್ಡು ಕೊಟ್ಟು ಪಡೆದುಕೊಂಡರು. ಭೂಮಿಯಲ್ಲಿ ಊಳಲು ಎತ್ತುಗಳು ಬೇಕು. ಆದ್ದರಿಂದ ಈ ಮಣ್ಣಿನ ಎತ್ತುಗಳನ್ನು ಪೂಜಿಸಿ, ಜನರು ಕೃತಜ್ಞತೆ ಸಲ್ಲಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕುಂಬಾರ ಮಹಿಳೆಯರು ಹೇಳಿದರು. ಕಾರುಹುಣ್ಣಿವೆ ಎತ್ತುಗಳ ಸಿಂಗಾರಕ್ಕೆ ಪೇಟೆಯಲ್ಲಿ ಬಣ್ಣ ಬಣ್ಣದ ಹಗ್ಗಗಳು, ಜತ್ತಿಗೆ, ಎತ್ತಿಗೆ ಕಟ್ಟಲು ಬಳಸುವ ಸಾಧನಗಳ ಭರ್ಜರಿ ಮಾರಾಟಕ್ಕೆ ಬೆಳಿಗ್ಗೆ ವ್ಯಾಪಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿತು.
ನಾಳೆ ಶುಕ್ರವಾರ ಕಾರಹುಣ್ಣಿವೆ ದಿನದಂದು ಕೋಡಬಳಿಗೆ, ಹೋಳಿಗೆ ಸಿಹಿ ಆಹಾರ ತಯಾರಿಸಿ ಬಸವಣ್ಣನಿಗೆ ನೈವೇದ್ಯ ಅರ್ಪಿಸುತ್ತಾರೆ. ಕಾರಹುಣ್ಣಿವೆ ಕರಿದಿನದಂದು ಎತ್ತುಗಳನ್ನು ಓಡಿಸಿ, ಕರಿಹರಿಯುವ ದೃಶ್ಯ ಕಣ್ಣು ಕಟ್ಟುವದು. ಮಕ್ಕಳು, ಯುವಕರು ಇದರಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ.
ತೇರದಾಳದಲ್ಲಿ ಕಾರಹುಣ್ಣಿವೆ ಮುನ್ನಾದಿನ ಗುರುವಾರ ಕುಂಬಾರರ ಮಹಿಳೆಯರು ಮಣ್ಣಿನಿಂದ ತಯಾರಿಸಿದ ಬಸವಣ್ಣ ಮೂರ್ತಿಗಳನ್ನು ಹೊತ್ತು ತಂದು ಮಾರಾಟ ಮಾಡಿದರು.
ಎತ್ತುಗಳ ಸಿಂಗಾರಕ್ಕೆ ಪೇಟೆಯಲ್ಲಿ ಬಣ್ಣ ಬಣ್ಣದ ಹಗ್ಗಗಳು, ಜತ್ತಿಗೆ, ಎತ್ತಿಗೆ ಕಟ್ಟಲು ಬಳಸುವ ಸಾಧನಗಳ ಭರ್ಜರಿ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು.
ತೇರದಾಳದಲ್ಲಿ ಕಾರಹುಣ್ಣಿವೆ ಮುನ್ನಾದಿನ ಗುರುವಾರ ಕುಂಬಾರರ ಮಹಿಳೆಯರು ಮಣ್ಣಿನಿಂದ ತಯಾರಿಸಿದ ಬಸವಣ್ಣ ಮೂರ್ತಿಗಳನ್ನು ಮಾರಾಟ ಮಾಡಿದರು.
ಮ.ಕೃ.ಮೇಗಾಡಿ, ತೇರದಾಳ.
ತೇರದಾಳ ಕಾರಹುಣ್ಣಿಮೆ ಸಂಭ್ರಮ : ಮನೆ-ಮನೆಗೆ ಬಂದ ಬಸವಣ್ಣ!!
loading...
loading...