ಪಶ್ಚಿಮ ಘಟ್ಟ ದಿನಾಚರಣೆ ಅಂಗವಾಗಿ ಕಾರ್ಯಾಗಾರ

0
8
loading...

 ಬೆಳಗಾವಿ : 30 ಇಕೋ ವಾಚ್ ಬೆಂಗಳೂರು, ಪರಿಸರ ಮಿತ್ರ ಸಂಘ (ರಿ) ಬೆಳಗಾವಿ, ಬೆಳಗಾವಿ ಬುಲೆಟ್ ಗುರುಜ ಬೆಳಗಾವಿ ಹಾಗೂ ಡಾ|| ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಜುಲೈ 1 ರಂದು ಪಶ್ಚಿಮ ಘಟ್ಟ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಶಿವಬಸವನಗರದ ಡಾ.ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಅಂದು ಮುಂಜಾನೆ 10 ಗಂಟೆಗೆ ಪರಿಸರವಾದಿಗಳು, ನಟ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ.ಸುರೇಶ ಹೆಬ್ಳಿಕರ್ ಅವರು ಈ ಕಾರ್ಯಾಗಾರವನ್ನು ಉದ್ಘಾಟಿಸುವರು. ಪರಿಸರ ಮಿತ್ರ ಸಂಘದ ಅಧ್ಯಕ್ಷರಾದ ಪ್ರೊ. ಬಿ.ಕೆ.  ಖಡಬಡಿ ಅವರು ಸಮಾರಂಭದ ಅಧ್ಯಕ್ಷತೆವಹಿಸುವರು. ಧರಣಿ ಮಂಡಳ ಸಂಪಾದಕರು ಹಾಗೂ ತುಮಕೂರ ನಿವೃತ್ತ ಪ್ರಾಚಾರ್ಯರಾದ ಪ್ರೊ. ಸಿ. ಯತಿರಾಜು, ಪಶ್ಚಿಮ ಘಟ್ಟ ಸಂರಕ್ಷಣಾ ಒಕ್ಕೂಟದ ಸಂಚಾಲಕರಾದ ಶ್ರೀ. ಕೆ.ಎಸ್. ಸೋಮಶೇಖರ ಹಾಗೂ ಗ್ರೀನ್ ಇಂಡಿಯಾ ಫೌಂಡೇಶನ್ ಸಂಚಾಲಕರಾದ ಶ್ರೀ. ಮಹೇಂದ್ರ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

loading...

LEAVE A REPLY

Please enter your comment!
Please enter your name here