ಫಲಾನುಭವಿಗಳಿಗೆ ನಿವೇಶನ ಮಂಜುರು ಮಾಡಲು ಒತ್ತಾಯಿಸಿ ಮನವಿ

0
22
loading...

ಬೆಳಗಾವಿ : 30 ಆಶ್ರಯ ಯೋಜನೆಯಡಿ ರಾಜ್ಯ ಸರಕಾರ 31,7485 ಮನೆಗಳನ್ನು ಹಂಚಿಕೆ ಮಾಡಿದೆ ಆದರೆ ಇದು ವಡಗಾವಿ ಬಡ ಜನರಿಗೆ ಇಲ್ಲದ್ದಂತಾಗಿದೆ. ಕೂಡಲೇ ಫಲಾನುಭವಿಗಳಿಗೆ ನಿವೇಶನ ಮಂಜುರು ಮಾಡುವಂತೆ ಒತ್ತಾಯಿಸಿ ಸೋಮವಾರ ಜೇಡರ ದಾಸಿಮಯ್ಯ ಕೂಲಿ ನೇಕಾರರ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಸಿತು.
ಬಾಡಿಗೆ ರಹವಾಸಿಗಳನ್ನು ಗುರುತಿಸಿ ಅವರಿಗೆ ಬಸವ ವಸತಿ ಯೋಜನೆ, ಇಂದಿರಾ ಆವಾಸ ಯೋಜನೆ, ವಾಜಪೇ ವಸತಿ ಯೋಜನೆ, ಅಂಬೇಡ್ಕರ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ ಅಧಿಕಾರಿಗಳು ಇಲ್ಲಿಯ ವರೆಗೂ ಕೂಲಿ ನೇಕಾರರಿಗೆ ನೆ ನೀಡಲು ಸರಕಾರ ವಿಫಲವಾಗಿದೆ.
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಬಡ ಕೂಲಿ ಕಾರ್ಮಿಕರ ಕಷ್ಟ ಹೇಳತೀರದು. ಸಂಪಾದನೆ ಮಾಡಿದ ಹಣವನ್ನು ಬಾಡಿಗೆ ಮನೆ ಮಾಲೀಕರಿಗೆ ಕಟ್ಟುವುದಾಗಿದೆ. ಹೀಗೆ ಮುಂದುವರೆದರೆ ನೇಕಾರ ಕೂಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬಿಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಬಡವರ ಮೇಲೆ ಕಾಳಜಿ ಇರುವ ರಾಜ್ಯ ಸರಕಾರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನೇಕಾರ ಕೂಲಿ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡುವಂತೆ ಆದೇಶ ನೀಡಬೇಕು ಇಲ್ಲದಿದ್ದಲ್ಲಿ ಉಗ್ರಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಗುರುನಾಥ ಸವದತ್ತಿ, ಸಾವಿತ್ರಿ ಢವಳಿ, ಕಾವೇರಿ ಧರೆನ್ನವರ, ಭಾರತಿ ತಾವರಿ, ಗೌರವ್ವ ಸೊಂಟಕ್ಕಿ, ಶೋಭಾ ಬುಚಡಿ, ಜ್ಯೋತಿ ಉಪ್ಪಾರಿ, ಶಿದ್ದವ್ವಾ ಗೌಡರ, ಯಶೋಧಾ ಸೊಂಟಕ್ಕಿ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here