ಬೀದಿ ಹಸುವಿನ ಕಾಲುಬೇನೆಗೆ ಔಷದೋಪಚಾರ ಮಾಡಿ ಮಾನವಿಯತೆ ಮೆರೆದ ನಾಗರಿಕರು

0
28
loading...

ರಬಕವಿ/ಬನಹಟ್ಟಿ : 12 ಕಳೆದ ಹಲವು ದಿನಗಳಿಂದ ರಬಕವಿ ನಗರದ ಅನೇಕ ದನಕರುಗಳಿಗೆ ಕಾಲುಬೇನೆ ರೋಗ ಬಂದು ಹಲವು ಜವಾರಿ ಆಕಳು ಮತ್ತು ಎತ್ತುಗಳು ಸಾವನ್ನಪ್ಪಿವೆ.
ಆದರೆ ಬುಧವಾರ ಬೆಳಗ್ಗೆ ರಬಕವಿ ನಗರದ ದೇವರ ಹೆಸರಿನಲ್ಲಿ ಬಿಟ್ಟ ಜವಾರಿ ತಳಿಯ ಬೀದಿ ಹಸುವಿಗೆ ಹಲವು ದಿನಗಳಿಂದ ಕಾಲು ಬೇನೆ ಬಂದು ಕಾಲಿನಲ್ಲಿ ಹುಳುಗಳು ಕೂಡಾ ಆಗಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಪಟ್ಟಣ ಗಲ್ಲಿಯ ಹಲವಾರು ಯುವಕರು ಮತ್ತು ಹಿರಿಯರು ತಮ್ಮ ಕೈಯಿಂದ ಹಣ ಸಂಗ್ರಹಿಸಿ ಆಕಳಿಗೆ ಬೇಕಾಗುವ ಓಷಧಿ ತಂದರು. ನಂತರ ಅದನ್ನು ಮಲಗಿಸಿ ಔಷದೋಪಚಾರ ಮಾಡಿ ಕಾಲಲ್ಲಿನ ಹುಳುಗಳನ್ನು ಸ್ವಚ್ಛಗೊಳಿಸಿ ಅದಕ್ಕೆ ಡ್ರೇಸಿಂಗ್ ಮಾಡಿ ತಿರುಗಾಡಲು ಅನುವು ಮಾಡಿಕೊಟ್ಟು ಈ ಗಲ್ಲಿಯ ಜನ ಮಾನವೀಯತೆ ಮೆರೆದರು.
ಈ ಸೇವೆಯಲ್ಲಿ ಹಿರಿಯರಾದ ವಲ್ಲಿಸಾಬ ಹುಡೇದಮನಿ, ಅಶೋಕ ಪರೀಟ, ನಂದೆಪ್ಪ ಕುಂಬಾರ, ಶಿವಾನಂದ ಚೌಲಗಿ, ರವಿ ರಾವಳ, ಎನ್. ಎಂ. ಮದುರಖಂಡಿ ಸೇರಿದಂತೆ ಅನೇಕರಿದ್ದರು.
ರಬಕವಿ ಪಟ್ಟಣ ಗಲ್ಲಿಯಲ್ಲಿ ಹಸುವು ಒಂದು ಕಾಲುಬೇನೆಯಿಂದ ನರಳುವುದನ್ನು ನೋಡಲಾಗದೇ ಇಲ್ಲಿಯ ಜನರು ಅದಕ್ಕೆ ಔಷಧೋಪಚಾರ ಮಾಡುತ್ತಿರುವುದು.

loading...

LEAVE A REPLY

Please enter your comment!
Please enter your name here