ಬೆಳಗಾವಿ ತಾಪಂ ಸಭೆಯಲ್ಲಿ ಅಧಿಕಾರಿ ನಿಡೋಣಿ ವರ್ಗಾವಣೆಗೆ ಗೊತ್ತುವಳಿ ತಾಲೂಕಿನ ಸಮಗ್ರ ಅಭಿವೃದ್ದಿಯ ಚರ್ಚೆ ಅಧಿಕಾರಿಗಳಿಗೆ ತಾಕೀತು

0
23
loading...

ಬೆಳಗಾವಿ : 17 ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ನಿಡೋಣಿ ಅವರು ತಮ್ಮದೇ ಕಚೇರಿಯ ಸಿಬ್ಬಂದಿ ಮೇಲೆ ಹಿಡಿತ ಹೊಂದಿಲ್ಲ. ಚುನಾಯಿತ ಸದಸ್ಯರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡುವಂತೆ ಮಂಗಳವಾರ ನಡೆದ ತಾಪಂ ಸಭೆಯಲ್ಲಿ ಗೊತ್ತುವಳಿ ನಿರ್ಣಯ ಮಂಡಿಸಲಾಯಿತು.
ಮಂಗಳವಾರ ನಗರದ ತಾಪಂ ಕಚೇರಿಯ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಸರ್ವ ಸದಸ್ಯರು ಒಮ್ಮತದಿಂದ ಕೈಗೊಂಡರು.
ಈ ಹಿಂದಿನ ಸಾಮಾನ್ಯ ಸಭೆಗಳು ನಡೆಯುವ ಕುರಿತಾದ ಯಾವುದೇ ನೋಟಿಸ್ ತಾಪಂನ 40 ಸದಸ್ಯರಿಗೂ ತಲುಪುತ್ತಿಲ್ಲ. ಸಭೆಯ ಹಿಂದಿನ ದಿನ ದೂರವಾಣಿ ಕರೆ ಮಾಡಿ ಸಭೆ ಇರುವುದಾಗಿ ಸದಸ್ಯರಿಗೆ ತಿಳಿಸಲಾಗುತ್ತದೆ. ಸಾಮಾನ್ಯ ಸಭೆಯ ಬಗ್ಗೆ 8 ದಿನ ಮುಂಚಿತವಾಗಿ ಸದಸ್ಯರಿಗೆ ನೋಟಿಸ್ ತಲುಪಬೇಕು. ಪದೇ ಪದೇ ತಾಪಂ ಕಚೇರಿಯಿಂದ ಸಿಬ್ಬಂದಿಯಿಂದ ಈ ಪ್ರಮಾದ ನಡೆಯುತ್ತಿದೆ ಎಂದು ಸದಸ್ಯರೇಲ್ಲರೂ ತಾಪಂ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಿಡೋಣಿ ಅವರ ವಿರುದ್ಧ ವರ್ಗಾವಣೆಯ ಠರಾವು ಪಾಸ್ ಮಾಡಿದರು.
ತಾಪಂ ಸದಸ್ಯರಿಗೆ ಒಂದು ದಿನ ಮುಂಚಿತವಾಗಿ ಸಭೆ ಇರುವುದನ್ನು- ತಿಳಿಸಲಾಗುತ್ತದೆ. ಇದರಿಂದ ಸದಸ್ಯರು ಸಭೆಯಲ್ಲಿ ಯಾವ ವಿಷಯದ ಮೇಲೆ ಚರ್ಚಿಸಬೇಕು. ಯಾವುದೇ ಸಿದ್ಧತೆ ಇಲ್ಲದೇ ಸಭೆ ನಡೆಸಿಯು ಪ್ರಯೋಜನವಿಲ್ಲ. ಹೀಗಾಗಿ ಅವರು ವಿರುದ್ಧ ಠರಾವು ಪಾಸ್ ಮಾಡುವಂತೆ ಹಾಗೂ ಇದಕ್ಕೆ ಅಧ್ಯಕ್ಷರೇ ಉತ್ತರಿಸಿಬೇಕೆಂದು ಸದಸ್ಯರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಕಾರ್ಯನಿವಾರ್ಹಕ ಅಧಿಕಾರಿ ಆರ್.ವಿ. ನಿಡೋಣಿ ಮಾತನಾಡಿ, ಸರಿಯಾದ ಸಮಯಕ್ಕೆ ನೋಟಿಸ್ ಕಳುಹಿಸಲಾಗಿದೆ. ಕರೆ ಮಾಡಿಕೂಡ ಸಭೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸರ್ವ ಸದಸ್ಯರ ಸಮಸ್ಯೆಗಳನು- ಸ್ಪಂದಿಸುತ್ತಿರುವುದಾಗಿ ಸಭೆಯಲ್ಲಿ ಉತ್ತರಿಸಿದರು. ಅನಂತರ ಸಭೆಯಲ್ಲಿ 2014-15ನೇ ಸಾಲಿನ ಬೆಳಗಾವಿ ತಾಲೂಕು ಪಂಚಾಯಿತಿ ಒಟ್ಟು 44,37,820 ಕೋಟಿ ಯೋಜನಾ ಕಾರ್ಯಕ್ರಮಕ್ಕೆ ಅನುಮೋದನೆ ನೀಡಲಾಯಿತು.
ಇದರಲ್ಲಿ ಶಿಕ್ಷಣ ಇಲಾಖೆ- 1077.840 ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳ ಗ್ರಾಮೀಣ ಆರೋಗ್ಯ- 1.000 ಲಕ್ಷ, ಪರಿಶಿಷ್ಟ ಜಾತಿಯವರ ಕಲ್ಯಾಣ- 237.590 ಲಕ್ಷ, ಪರಿಶಿಷ್ಟ ಪಂಗಡಗಳ ಕಲ್ಯಾಣ- 217.890 ಲಕ್ಷ, ವಿಶೇಷ ಘಟಕ ಯೋಜನೆ- 16.170 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ- 76.600 ಲಕ್ಷ, ಮಹಿಳಾ ಮತ್ತ ಮಕ್ಕಳ ಕಲ್ಯಾಣ- 1288.580 ಲಕ್ಷ, ಪೌಷ್ಟಿಕ ಆಹಾರ- 1194.540 ಲಕ್ಷ, ಕೃಷಿ ಇಲಾಖೆ- 2.540 ಲಕ್ಷ, ತೋಟಗಾರಿಗೆ ಇಲಾಖೆ- 0.630 ಸಾವಿರ, ಪಶುಸಂಗೋಪನೆ – 213.720 ಲಕ್ಷ, ಸಹಕಾರ- 0.570 ಸಾವಿರ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ-103.500 ಲಕ್ಷ, ರೇಷ್ಮೆ- 23 ಸಾವಿರ , ರಸ್ತೆ ಮತ್ತು ಸೇತುವೆ- 3.57 ಲಕ್ಷ, ಗಿರಿಜನ ಉಪಯೋಜನೆ- 2.50 ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ- 80 ಸಾವಿರ ಮೊತ್ತದ ಕ್ರೀಯಾಯೋಜನೆಯನು- ಸಭೆ ಅನುಮೋದಿಸಿತು.
ಸಭೆಯಲ್ಲಿ ವಿವಿಧ ಇಲಾಖೆಯ ಪ್ರಗತಿ ಪರೀಶೀಲನೆ ನಡೆಸಲಾಯಿತು. ಜನಸಮಾನ್ಯರ ಯೋಜನೆಗಳನ್ನು ತಲುಪಿಸುವಲ್ಲಿ ತಾಪಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದಂತೆ ಸರ್ವ ಸದಸ್ಯರು ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಗಜಾನನ ನಾಯಕ, ಉಪಾಧ್ಯಕ್ಷೆ ರೀಟಾ ಬೆಳಗಾವಂಕರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ನಿಡೋಣಿ ಹಾಗೂ ವಿವಿಧ ಇಲಾಖೆಗಳ ತಾಲೂಕಾಧಿಕಾರಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here