ಮದ್ಯದಂಗಡಿ ತೆರವಿಗೆ ಮನವಿ

0
7
loading...

MADYADANGADI TERAVIGE MANAVI

ಬೆಳಗಾವಿ : 30 ಸಾರ್ವಜನಿಕ ಬಸ್ ನಿಲ್ದಾಣಗಳಲ್ಲಿ ಮಧ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದೆಂದು ಆಗ್ರಹಿಸಿ ಅಶೋಕ ನಗರದ ರಹವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಕಾರಿಗಳಿಗೆ ಮನವಿಸಲ್ಲಿಸಿದರು.

ಅಶೋಕ ನಗರದ ಬಸ್ ನಿಲ್ದಾಣದ ಪಕ್ಕ ಮನೆಗಳು, ದರ್ಗಾ, ಮಹಿಳೆಯರು, ಓಡಾಡುವ ಸ್ಥಳದಲ್ಲಿ ಮಧ್ಯದಂಗಡಿಯನ್ನು ತೆರಯಲು ಕೆಲವರು ಪ್ರಯತ್ನ ನಡೆಸಿದ್ದಾರೆ ಅವರಿಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದ್ದಾರೆ.
ಇದರಿಂದ ಸಾರ್ವಜನಿಕರು, ಮಕ್ಕಳು ಬಸ್ಗಾಗಿ ಕಾಯುತ್ತ ನಿಲ್ಲುವುದಾದರು ಹೇಗೆ ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತದೆ. ಅಲ್ಲದೆ ಇಲ್ಲಿಜ ಜನರು ಕುಡಿತ ಚಟಕ್ಕೆ ಬಲಿಯಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ನಗರದ ಶಾಂತಿಯತೆಗೆ ಭಂಗ ತರುವುದಕ್ಕೆ ಅನುಮನಿ ನೀಡಿದರೇ ಬರುವ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಮನವಿಯಲ್ಲಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಇಮ್ರಾನ್ ಮುಲ್ಲಾ, ಮಹಬೂಬ ಬಾಗೇವಾಡಿ, ರವಿ ನಾಯಕ, ರೇಷ್ಮಾ ಮುಲ್ಲಾ, ಸುರಜ ತಳವಾರ, ಯಲ್ಲಪ್ಪ ಪವಾರ, ಅಜಿಮ ನದಾಫ, ರೇಖಾ ಪಾಟೀಲ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here