ಶಾಲಾ ಮಕ್ಕಳಿಂದ ವಿಶ್ವಪರಿಸರ ದಿನಾಚರಣೆ

0
91
loading...

ಬೈಲಹೊಂಗಲ : 12 ಪಟ್ಟಣದ ಮತ್ತು ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶಿಕ್ಷಕರು, ಮಕ್ಕಳು ಅರ್ಥಪೂರ್ಣವಾಗಿ ಆಚರಿಸಿದರು.
ಲವಲವಿಕೆಯಿಂದ ಓಡಾಡಿ ಮಕ್ಕಳನ್ನು ಶಾಲಗೆ ಬರಮಾಡಿಕೊಳ್ಳುತ್ತಿದ್ದ ಶಿಕ್ಷಕರು ಮಕ್ಕಳೊಂದಿಗೆ ವಿಶ್ವಪರಿಸರ ದಿನಾಚರಣೆ ಆಚರಿಸಿದರು. ತಮ್ಮ ತಮ್ಮ ಶಾಲಾ ಆವರಣದಲ್ಲಿ ಸಸಿ ನೆಟ್ಟು ಪೋಷಿಸಿದರು. ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ಮುಖ್ಯಾದ್ಯಾಪಕ ಎಸ್.ಬಿ.ಬೋರಕನವರ, ಶಿಕ್ಷಕರುಗಳಾದ ವಿಠ್ಠಲ ಹೊಸೂರ, ಬಿ.ಆರ್.ಬೋರಗಲ್ಲ,ಆರ್.ಯು.ಹೊಂಗಲಮಠ ಮತ್ತು ಮಕ್ಕಳು ಸಸಿ ನೆಟ್ಟು ವಿಶ್ವಪರಿಸರ ದಿನಾಚರಣೆ ಸವಿ ಸವೆದರು. ಸ್ಥಳೀಯ ಶ್ರೀ ಬಿ.ಬಿ.ಗಣಾಚಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಮರಕುಂಬಿಯಲ್ಲಿ ಸಂಸ್ಥೆ ಅಧ್ಯಕ್ಷ ಬಿ.ಬಿ.ಗಣಾಚಾರಿ ನೇತೃತ್ವದಲ್ಲಿ ಮಕ್ಕಳು, ಶಿಕ್ಷಕರು ಸಸಿ ನೆಟ್ಟರು. ಸ್ವಚ್ಚಂದ ಪರಿಸರಕ್ಕಾಗಿ ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಮನೆಯ ಅಂಗಳದಲ್ಲಿ ಒಂದೊಂದು ಸಸಿ ನೆಡುವಂತೆ ತಿಳಿಸಲಾಯಿತು. ಮುಖ್ಯಾಧ್ಯಾಪಕ ಎಸ್.ಎಂ.ಅಂಬರಶೆಟ್ಟಿ, ಶಿಕ್ಷಕ, ಶಿಕ್ಷಿಯರು ಉಪಸ್ಥಿತರಿದ್ದರು. ಅಲ್ಲದೆ ಶಾಸಕರ ಮಾದರಿ ಮತಕ್ಷೇತ್ರ ಶಾಲೆ ನಂ.4ರಲ್ಲಿ ಮತ್ತು ಸರಕಾರಿ ಕಚೇರಿಗಳಲ್ಲಿ ಶ್ರೀ ಮಲಪ್ರಭಾ ಸ್ವ ಸಹಾಯ ಮತ್ತು ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಸಕರ ಮಾದರಿ ಮತಕ್ಷೇತ್ರ ಶಾಲೆಯಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಳವಪ್ಪ ಬಡ್ಡಿಮನಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಆರ್.ಪಾಟೀಲ, ವಲಯ ಅರಣ್ಯಾಧಿಕಾರಿ ಸಿ.ಜಿ.ಮಿರ್ಜಿ, ಮುಖ್ಯಾಧ್ಯಾಪಕ ಎನ್.ವಿ.ಚೇಗರೆಡ್ಡಿ, ನೌಕರರ ಸಂಘದ ನಿರ್ದೇಶಕ ಎಸ್.ವಿ.ಯರಡ್ಡಿ, ಡಿಸಿಸಿ ಬ್ಯಾಂಕ್ ಮ್ಯಾನೇಜರ ಎ.ಎಂ.ಬೆಟಗೇರಿ, ದೈಹಿಕ ಶಿಕ್ಷಕ ಬಸವರಾಜ ಭರಮನ್ನವರ, ಸಂಘದ ಅಧ್ಯಕ್ಷ ದುಂಡಪ್ಪ ಗಿರನ್ನವರ, ನ್ಯಾಯವಾದಿ ಆನಂದ ಮೂಗಿ, ಈಶ್ವರ ಶಿಲ್ಲೇದಾರ, ಬಸವರಾಜ ಮಾಟೊಳ್ಳಿ, ರಾಜು ಚಿತ್ರಗಾರ ಉಪಸ್ಥಿತರಿದ್ದರು.
ಬೈಲಹೊಂಗಲ ಎಂಸ್ಸೆಸ್ಸೆಆರ್ ಪ್ರೌಢಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿ ನೆಟ್ಟು ವಿಶ್ವಪರಿಸರ ದಿನಾಚರಣೆ ಆಚರಿಸಿದರು

loading...

LEAVE A REPLY

Please enter your comment!
Please enter your name here