ಸಂಸದ ಅಂಗಡಿಗೆ ಸಚಿವ ಸ್ಥಾನ ನೀಡಿ : ಒತ್ತಾಯ

0
14
loading...

ಬೆಳಗಾವಿ : 22 ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 3 ಬಾರಿ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿರುವ ಸಂಸದ ಸುರೇಶ ಅಂಗಡಿ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸುವಂತೆ ನಗರದ ನಾಗರಿಕ ರಕ್ಷಣಾವೇದಿಕೆಯ ಅಧ್ಯಕ್ಷ ಆರ್.ಎ. ಬಾಳೇಕುಂದ್ರಿ ಅವರು ಬಿಜೆಪಿ, ಆರ್ಎಸ್ಎಸ್ ವರಿಷ್ಠರನ್ನು ಹಾಗೂ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿರುವ ಸುರೇಶ ಅಂಗಡಿ ಅವರು ಸಚಿವ ಸ್ಥಾನಕ್ಕೆ ಯೋಗ್ಯರಾಗಿದ್ದು ಇವರಿಗೆ ಕೇಂದ್ರದಲ್ಲಿ ಸ್ವತಂತ್ರ್ಯ ಸಚಿವ ಕಾತೆ ನೀಡುವ ಮೂಲಕ ಗಡಿ ಜಿಲ್ಲೆ ಬೆಳಗಾವಿ ಹಾಗೂ ಉತ್ತರ ಕರ್ನಾಟಕ್ಕೆ ನ್ಯಾಯ ಕಲ್ಪಿಸಬೇಕೆಂದು ಬಾಳೇಕುಂದ್ರಿ ಒತ್ತಾಯಿಸಿದ್ದಾರೆ. ಈಗಾಗಲೇ ಬಿಜೆಪಿ, ಆರ್ಎಸ್ಎಸ್ ಮತ್ತು ಮೋದಿ ಅವರಿಗೆ ಫ್ಯಾಕ್ಸ್ಗಳ ಮೂಲಕ ಮನವಿಯನ್ನು ರವಾನಿಸಿದ್ದಾರೆ.

loading...

LEAVE A REPLY

Please enter your comment!
Please enter your name here