30 ಅಂಧರಿಗೆ ನೇತ್ರ ಚಿಕಿತ್ಸೆ

0
28
loading...

ಇಳಕಲ್ಲ : 12 ಇಲ್ಲಿಯ ಲೀಲಾವತಿ ಕಾಖಂಡಕಿ ಸ್ಮಾರಕ ಸಂಸ್ಥೆಯ ವತಿಯಿಂದ 30 ಅಂಧರಿಗೆ ನೇತ್ರ ಚಿಕಿತ್ಸೆಯನ್ನು ಡಾ. ಅಭಿಜಿತ್ ಕಾಖಂಡಕಿ ಬುಧವಾರದಂದು ಮಾಡಿದರು.
ರಾಷ್ಟ್ರೀಯ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಪ್ರತಿ ಬುಧವಾರದಂದು ತಮ್ಮ ಆಸ್ಪತ್ರೆಯಲ್ಲಿ ಅಂಧರಿಗೆ ಶಸ್ತ್ತ್ರ ಚಿಕಿತ್ಸೆಯನ್ನು ಮಾಡುತ್ತಿರುವ ಅಭಿಜಿತ್ ಕಾಖಂಡಕಿ ಈಗಾಗಲೇ ಹಲವಾರು ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ ತಮ್ಮ ಅಜ್ಜಿಯ ನೆನಪಿನಲ್ಲಿ ನಡೆಸುತ್ತಿರುವ ಈ ನೇತ್ರ ಚಿಕಿತ್ಸಾ ಶಿಬಿರ ವಾರದಿಂದ ವಾರಕ್ಕೆ ಜನಪ್ರಿಯವಾಗುತ್ತ ನಡೆದಿದ್ದು ಅಭಿಜಿತ ಅಂಧರ ಬಾಳಿನಲ್ಲಿ ಬೆಳಕಾಗಿ ನಿಲ್ಲುತ್ತಿದ್ದಾರೆ ಎಂದು ಅವರ ತಂದೆ ಖ್ಯಾತ ಹೆರಿಗೆ ತಜ್ಞ ಡಾ. ಗುರುರಾಜ ಕಾಖಂಡಕಿ ಹೆಮ್ಮೆಯಿಂದ ಹೇಳುತ್ತಾರೆ.
ಇಳಕಲ್ಲದ ಲೀಲಾವತಿ ಕಾಖಂಡಕಿ ಸ್ಮಾರಕ ಸಂಸ್ಥೆಯ ವತಿಯಿಂದ 30 ಅಂಧರಿಗೆ ನೇತ್ರ ಚಿಕಿತ್ಸೆಯನ್ನು ಡಾ. ಅಭಿಜಿತ್ ಕಾಖಂಡಕಿ ಮಾಡಿದರು.

loading...

LEAVE A REPLY

Please enter your comment!
Please enter your name here