ಅಕ್ರಮ ಸಾರಾಯಿ ಮಾರಾಟ : ಓರ್ವನಿಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ

0
20
loading...

ಅಥಣಿ : 17 ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಓರ್ವನಿಗೆ ಒಂದು ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ನ್ಯಾಯಾಧೀಶೆ ಹೇಮಾ ಪಾಸ್ತಾಪೂರೆ ಬುಧವಾರ ಆದೇಶಿಸಿದ್ದಾರೆ.
ತಾಲೂಕಿನ ಜಕ್ಕಾರಟ್ಟಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಸನ್ 2009 ರಲ್ಲಿ ಅಕ್ರವಾಗಿ ಮಹಾರಾಷ್ಟ್ರ ದೇಶಿದಾರು ಸಂತ್ರಾ ಮಾರಾಟ ಮಾಡುತ್ತಿದ್ದ ವೇಳೆ ಹಣಮಂತ ರಾಮು ಸಾಳುಂಕೆ ಎಂಬಾತನನ್ನು ಅಬಕಾರಿ ಉಪ ನೀರೀಕ್ಷಕ ಎಂ.ಆರ್. ದೇಸಾಯಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಈತನನ್ನು ಬಂಧಿಸಿ, ದೇಶಿದಾರು ಸಂತ್ರಾ ಬಾಟ್ಲಿಗಳನ್ನು ವಶಪಡಿಸಿಕೊಂಡಿದ್ದರು, ಅಬಕಾರಿ ಉಪ ನೀರೀಕ್ಷ ಎ.ಎ. ಮುಜಾವರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಆಬಿಯೋಜಕ ವ ಸಹಾಯಕ ಸರ್ಕಾರಿ ವಕೀಲ ಆರ್.ಆರ್. ಪರಾಸ್ ಇವರು ವಾದ ಮಂಡಿಸಿದ್ದರು.

loading...

LEAVE A REPLY

Please enter your comment!
Please enter your name here