ಬಿಎಸ್ಪಿ ಜಿಲ್ಲಾ ಮಟ್ಟದ ಸಮಾವೇಶ

0
34
loading...

ಚಿಕ್ಕೋಡಿ : 01 ಬಿಎಸ್ಪಿ ಪಕ್ಷ ಒಂದು ರಾಜಕೀಯ ಪಕ್ಷವೆಂದು ಗೃಹಿಕೆ ಮಾಡಿಕೊಳ್ಳುವವರೆಗೂ ಗೆಲುವು ಇಲ್ಲ. ಆದ್ದರಿಂದ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಸಂಘದ ಪರಿಕಲ್ಪನೆಯಿಂದ ಹೊರತಂದು ಭೂತ ಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡಲು ಮುಂದಾಗಬೇಕು ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್.ಮಹೇಶ ಹೇಳಿದರು.
ಇಲ್ಲಿನ ಮಹಾಲಕ್ಷ್ಮೀ ಸಭಾಭವನದಲ್ಲಿ ಸೋಮವಾರ ನಡೆದ ಬಿಎಸ್ಪಿ ಪಕ್ಷದ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲು ನಮ್ಮ ನಡುವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡು ಮುನ್ನಡೆದರೆ ಬರುವ ನಾಲ್ಕು ವರ್ಷದಲ್ಲಿ ಅದರ ನಿಜವಾದ ಫಲಿತಾಂಶ ಬರುತ್ತಿದೆ ಎಂದು ತಿಳಿಸಿದ ಅವರು, ಡಾ. ಬಿ.ಆರ್.ಅಂಬೇಡ್ಕರ ಅವರ ಹೆಸರಿನಲ್ಲಿ ನಾಯಿಕೊಡೆಯಂತೆ ಸಂಘಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಯಾವ ಸಂಘದವರಿಗೂ ಅಂಬೇಡ್ಕರರ ವಿಚಾರ ಮತ್ತು ತತ್ವ ಸಿದ್ದಾಂತಗಳು ಗೊತ್ತಿಲ್ಲ. ಜೈ ಭೀಮ ಎನ್ನುವುದೊಂದೆ ಗೊತ್ತು ಎಂದ ಅವರು, ಅವರು ಅನುಭವಿಸಿದ ಕಷ್ಟಗಳನ್ನಷ್ಟೆ ನಾವು ತಿಳಿದುಕೊಂಡಿದ್ದೇವೆ. ಪ್ರತಿಯೊಬ್ಬರು ಅಂಬೇಡ್ಕರರ ತತ್ವ ಸಿದ್ದಾಂತಗಳನ್ನು ತಿಳಿದುಕೊಳ್ಳಬೇಕು. ಅದನ್ನು ಮನೆ ಮನೆಗೂ ಮುಟ್ಟಿಸುವ ಕೆಲಸ ಮಾಡಿ ಪಕ್ಷವನ್ನು ಸಂಘಟಿಸಲು ಮುಂದಾಗಬೇಕು ಎಂದರು
ಕರ್ನಾಟಕದಲ್ಲಿ ರಾಜ್ಯದಲ್ಲಿ ಬಿಎಸ್ಪಿ ಪಕ್ಷ ಪ್ರಾರಂಭವಾಗಿ 25 ವರ್ಷಗಳು ಕಳೆದರೂ ಇನ್ನೂವರೆಗೂ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ಮತಗಳಿಕೆಯಲ್ಲಿಯೂ ಹಿನ್ನೆಡೆಯಾಗುತ್ತಿದೆ ಏಕೆ ಎಂಬುದರ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಗಿಸಿಕೊಂಡಿರುವ ರಾಜ್ಯದಲ್ಲಿನ ಬಿಎಸ್ಪಿ ಕಾರ್ಯಕರ್ತರು ಬಿಎಸ್ಪಿ ಪಕ್ಷ ಒಂದು ಸಂಘಟನೆ ಎಂದು ಗೃಹಿಸಿಕೊಂಡಿರುವ ಪಕ್ಷದ ಕಾರ್ಯಕರ್ತರು ಸಂಘದ ಪರಿಕಲ್ಪನೆಯಿಂದ ಹೊರಬರಲು ಸಾಧ್ಯವಾಗಿಲ್ಲ. , ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಕಿವಡ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹೋಟ್ ಬ್ಯಾಂಕ್ ಆಗಿರುವ ಜನರಲ್ಲಿ ಅರಿವು ಮೂಡಿಸುವ ಕೆಲಸ ಕೂಡ ನಡೆಯಬೇಕಾಗಿದೆ. ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡುವ ಮುಖಾಂತರ ಬಿಎಸ್ಪಿ ಪಕ್ಷದ ಸಂಘಟನೆ ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಬಿಎಸ್ಪಿ ಪಕ್ಷದ ರಾಜ್ಯ ಖಜಾಂಚಿ ಕಮಲನಾಭನ್, ಸಾಹುಕಾರ ಕಾಂಬಳೆ, ಬಿ.ಐ.ವಡೇಯರ, ಕಾಡಾಪೂರ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಮಾಜಿ ಜಿಲ್ಲಾ ಅಧ್ಯಕ್ಷ ಮಚ್ಚೇಂದ್ರ ಕಾಡಾಪೂರೆ ಸ್ವಾಗತಿಸಿದರು. ಸುಧಾಕರ ಮದರಖಂಡಿ ನಿರೂಪಿಸಿದರು. ದಿವಾಕರ ಬಡಿಗೇರ ವಂದಿಸಿದರು.
ಚಿಕ್ಕೋಡಿಯಲ್ಲಿ ನಡೆದ ಬಹುಜನ ಸಮಾಜ ಪಾರ್ಟಿ ಪಕ್ಷ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎನ್.ಮಹೇಶ ಮಾತನಾಡಿದರು.

loading...

LEAVE A REPLY

Please enter your comment!
Please enter your name here