ಬೆಳೆ ಪರಿಹಾರ ನೀಡುವ ಭರವಸೆ : ಪಾಟೀಲ

0
169
loading...

bele parihara niduva baravase1

ಬಸವನಬಾಗೇವಾಡಿ : 05 ರೈತರ ಬೇಡಿಕೆಯನ್ನು ಇಡೇರಿಸಲು ತಾವೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ರೈತರು ಕೃಷ್ಣಾ ನದಿ ನೀರು ಬಳಕೆಯಿಂದ ಅನ್ಯಾಯವಾಗುತ್ತದೆ 5ವರ್ಷದ ಬೆಳೆ ಪರಿಹಾರ ನೀಡಬೇಕೆಂದರೆ ತಾವೂ 7ವರ್ಷದವರೆಗೆ ಬೆಳೆ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ತಾಲೂಕಿ ಕೂಡಗಿ ಎನ್ಟಿಪಿಸಿ ಕೇಂದ್ರದಲ್ಲಿ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯೋಜನೆಯನ್ನು ಜಾರಿಗೊಳಿಸಲು ಕೇಲವು ರೈತರು ಸ್ವಯಂಪ್ರೇರಿತರಾಗಿ ಮುಂದೆ ಬಂದರು ಆದರೇ ಇನ್ನುಳಿದ ಕೇಲವರು ಯೋಜನೆಯನ್ನು ಅನುಷ್ಠಾನಗೊಳಿಸಬಾರದು ಎಂದು ವಿರೋಧಿಸಿದರು ಯೋಜನೆಯನ್ನು ಈಗಾಗಲೇ ಹಿಂದಿನ ಸರ್ಕಾರ ಜಾರಿಗೊಳಿಸಿದ್ದು ಇನ್ನು ಹೆಚ್ಚಿನ ಪರಿಹಾರ ಬೇಡಿಕೆ ಇದ್ದರೆ ಇಡೇರಸಲು ಶ್ರಮಿಸುತ್ತೇನೆ ಅಲ್ಲದೆ ಘಟನೆಯು ಏಕಾಏಕಾಯಾಗಿದ್ದು ಯಾರ ಪ್ರಚೋದನೆಯಿಂದ ನಡೆದಿದೆ ಗೊತ್ತಿಲ್ಲ ತಾವೂ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಿ ಮರಳಿರುವೆ, ಜಮೀನ ನೀಡಿದ ಕುಟುಂಬಗಳಿಗೆ ಉದ್ಯೋಗ ಒದಗಿಸಲು ಪ್ರಯತ್ನಿಸುತ್ತೇನೆ ಅಲ್ಲದೆ ಎನ್ಟಿಪಿಸಿಯವರು ಗ್ರಾಮಸ್ಥರೊಂದಿಗೆ ಸರಿಯಾದ ಸ್ಪಂದನೆ ಮಾಡುತ್ತಿಲ್ಲ ಎಂಬ ಆರೋಪಗಳು ತಮ್ಮ ಗಮನಕ್ಕೆ ಬಂದಿದ್ದು ಕಂಪನಿ ಅಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಹೇಳಿದರು.
ಪ್ರತಿಭಟನಾನಿರತರು ಏಕಾಏಕಾಯಾಗಿ ಪೋಲಿಸ್ರತ್ತ ಕಲ್ಲು ತೂರಾಟಕ್ಕೆ ಮುಂದಾದರು ಇದರಿಂದ ಸಿಬ್ಬಂದಿ ಗಾಯಗೊಳ್ಳುವ ಜೊತೆಗೆ ವಾಹನಗಳು ಜಕಂಗೊಂಡವು ಅಲ್ಲದೆ ಎನ್ಟಿಪಿಸಿಗೆ ಸೇರಿದ ಇತರೆ ಶೇಡ್ಗಳಿಗೆ ಬೆಂಕಿ ಹಚ್ಚಿದರಿಂದ ಪರಿಸ್ಥಿತಿ ಕೈಮೀರಿ ಹೋಯಿತು ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಈ ಡಿವೈಎಸ್ಪಿ ಎಂ.ವೈ.ಬಾಲದಂಡಿ ಶಾಸಕರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಣಧೀಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮಪ್ರಸಾದನಿವಾಸ ಸೆಫಟ್, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ವೈ.ಬೆಳ್ಳುಬ್ಬಿ, ವಿಭಾಗಾಧಿಕಾರಿ ಡಾ: ಬೂದೆಪ್ಪ, ತಹಶೀಲ್ದಾರ ವಿನಯ ಕುಲಕರ್ಣಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಮುತ್ತಗಿ ಗ್ರಾಪಂ ಸದಸ್ಯ ಪ್ರೇಮಕುಮಾರ ಮ್ಯಾಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಪೋಲಿಸ್ ಅಧಿಕಾರಿಗಳು ಸೇರಿದಂತೆ ಎನ್ಟಿಪಿಸಿ ಅಧಿಕಾರಿಗಳು ಹಾಜರಿದ್ದರು.
ಪ್ರಯಾಣ ಕೈಗೊಂಡ ಕಾರ್ಮಿಕರು: ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ವಿವಿಧ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ವೇಳೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದನ್ನು ಕಣ್ಣಾರೆ ಕಂಡಿರುವ ಆಸ್ಸಾಂ, ಬಿಹಾರ, ಪಂ.ಬಂಗಾಳ ಸೇರಿದಂತೆ ವಿವಿಧ ರಾಜ್ಯದ ಕಾರ್ಮಿಕರ ಕೂಲಿ ಕೆಲಸಕ್ಕಾಗಿ ಆಗಮಿಸಿದ ಜೀವದ ರಕ್ಷಣೆಗಾಗಿ ತಂಡೋಪತಂಡವಾಗಿ ನೂರಾರು ಸಂಖ್ಯೆಗಳಲ್ಲಿ ಸರದಿ ಪ್ರಕಾರದಲ್ಲಿ ತಮ್ಮ ತಮ್ಮ ಸ್ವಗ್ರಾಮಗಳಿಗೆ ಪ್ರಯಾಣ ಬೆಳೆಸಿದ್ದು ಕಂಡು ಬಂತು.
ಭಯದ ನೆರಳಲ್ಲಿ ವರದಿಗಾಗಿ ಹೆಣಗಾಡಿದ ಪತ್ರಕರ್ತರು: ಸಿವ್ಹಿಲ್ ಡ್ರೇಸ್ನಲ್ಲಿರುವ ಪೋಲಿಸ್ ಸಿಬ್ಬಂದಿ ಎಂದು ಭಾವಿಸಿದ ರೈತರು ಪ್ರತಿಭಟನಾನಿರತರೆಂದು ಭಾವಿಸಿದ ಪೋಲಿಸ್ ಇಲಾಖೆ ಬಂದೂಕ ತೋರಿಸುತ್ತಾ ತೆರಳುವಂತೆ ಸೂಚಿಸಿದ ಬೇದರಿಕೆಯಿಂದ ಅಲ್ಲದೆ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿದರೇ ಇಲ್ಲವೆ ರೈತರು ಪೋಲಿಸರನ್ನು ಗುರಿಯಾಗಿಸಿ ಹೊಡೆಯುವ ಕಲ್ಲು ಬಡಿದರೇ ಸುದ್ದಿ ಮಾಡಲು ತೆರಳಿದವರೇ ಸುದ್ದಿಯಾಗುವ ವಿಷಮ ಪರಿಸ್ಥಿತಿಯಿಂದ ಭಯಕ್ಕೊಳಗಾದ ಪೋಲಿಸ್ರ ಬಂದೂಕಿಗೆ ಭಯದಲ್ಲಿ ಪತ್ರಕರ್ತರು ತಂದಿರುವ ವಾಹನಗಳನ್ನು ಬಿಟ್ಟು ಎರಡು ಕಿಮೀವರೆಗೆ ಓಡಾಡಿದ ಘಟನೆಯು ನಡೆಯಿತು ಆದರೇ ಪೋಲಿಸ್ ಅಧಿಕಾರಿಗಳು ಆಗಾಗ ಪತ್ರಕರ್ತರನ್ನು ಪ್ರಶ್ನಿಸಿ ವಿಚಾರಿಸುವದು ಸರ್ವೇ ಸಾಮಾನ್ಯವಾಗಿ ಭಯವನ್ನು ಇಮ್ಮಡಿಗೊಳಿಸಿತ್ತು.

loading...

LEAVE A REPLY

Please enter your comment!
Please enter your name here