ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಜಾಗೃತಿ ಜಾತಾ ಕಾರ್ಯಕ್ರಮ

0
34
loading...

ಕೊಕಟನೂರ : 11 ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾತಾ ಕಾರ್ಯಕ್ರಮಕ್ಕೆ ಚಾಲನೆ ಜಿ.ಪಂ ಸದಸ್ಯೆ ಡಾ. ಸವಿತಾ ಪೂಜಾರಿ ನೀಡಿದರು.
ನಂತರ ಕೊಕಟನೂರ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ಯ ವೈಧ್ಯಾಧಿಕಾರಿ ಸುಕನ್ಯಾ ಹಂಡಗಿ ಮಾತನಾಡಿ. ಸರಕಾರ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಅಪೌಷ್ಟಿಕ ಮಕ್ಕಳಿಗೆ ಹಲವಾರು ಸವಲತ್ತುಗಳನ್ನು ನೀಡುತ್ತಿದೆ. ಹೀಗಾಗಿ ಅಂತಹ ಮಕ್ಕಳಿರುವ ಕುಟುಂಬದವರು ಹತ್ತಿರದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಚಿಕಿತ್ಸೆ ಪಡೆಯಬೇಕೆಂದರು.
ಶಾಲಾ ಮಕ್ಕಳಿಂದ ಗ್ರಾಮದ ಪ್ರಮುಖ ಬಿದಿಗಳಲ್ಲಿ ಜೈಘೋಷದೊಂದಿಗೆ ಗ್ರಾಮಸ್ಥರಲ್ಲಿ ಜಾಗೃತಿ ಜಾತಾ ಮೂಲಕ ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಈ ವೇಳೆ. ತಾ ಪಂ ಸದಸ್ಯ ಸುಭಾಷ ಕಾಂಬಳೆ, ಶ್ರೀಶೈಲ ದೊಡಮನಿ, ಮುರೆಪ್ಪ ಬಣಜ, ಬಾಹುಸಾಹೇಬ ಭೋಸಲೆ, ಮಹಾವೀರ ಹಳಕಿ, ಅನೀಲ ಮುಳಿಕ, ಪಪ್ಪು ಚವ್ಹಾಣ, ರಾಜು ಕತ್ತಿ, ಮಹೇಷ ಕಾಡದೇವರಮಠ, ಸದಾಶಿವ ಚವ್ಹಾಣ, ಭೀಮಶಿ ಬಜಂತ್ರಿ, ಅಶೋಕ ಕಾಂಬಳೆ, ಮೋಶಿನ್ ಮುಜಾವರ ಎ.ಎನ್ ಹವಾಲ್ದಾರ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here