ಸಕ್ಕರೆ ಕಾರ್ಖಾನೆಗೆ ಅವಿರೋಧ ಆಯ್ಕೆ

0
20
loading...

ಕಾಗವಾಡ (ತಾ: ಅಥಣಿ) : 26 ನೇರೆಯ ಮಹಾರಾಷ್ಟ್ರದ ಶಿರೋಳದ ಶ್ರೀ ದತ್ತ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಗವಾಡದ ಶಿದ್ಧಗೌಡಾ ಪಾಟೀಲ 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರನ್ನು ಗ್ರಾಮದ ಪ್ರಮುಖರಿಂದ ಸನ್ಮಾನಿಸಲಾಯಿತು.
ಶುಕ್ರವಾರ ಮಧ್ಯಾನ್ಹ ಕಾಗವಾಡದ ಶ್ರೀ ಸಿದ್ಧಗೌಡಾ ಪಾಟೀಲ ಅವರ ನಿವಾಸದಲ್ಲಿ ಗ್ರಾಮದ ಮುಖಂಡರಾದ ಎಮ್.ಬಿ.ಉದಗಾವಿ, ಪ್ರಭಾಕರ ರುಗೆ, ಬಸಗೌಡಾ ಉಪ್ಪಾರ ಸೇರಿದಂತೆ ಅನೇಕರು ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಸಿದ್ಧಗೌಡಾ ಪಾಟೀಲ ಇವರು ಸಕ್ಕರೆ ಕಾರ್ಖಾನೆ ಸಂಸ್ಥಾಪಕ ಶಾಸಕ ಅಪ್ಪಾಸಾಹೇಬಾ ಉಫ ಎಸ್.ಆರ್.ಪಾಟೀಲ ಇವರ ನಿಷ್ಠಾವಂತಾರಿದ್ದರು. ಕಳೆದ 22 ವರ್ಷಗಳಿಂದ ಸತತ ನಿರ್ದೇಶಕರು, ಕಾರ್ಖಾನೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 5 ವರ್ಷಕ್ಕಾಗಿ ಪುಣರಾಯ್ಕೆಯಾಗಿದ್ದಾರೆ. ಇದರಿಂದ ಕಾಗವಾಡ, ಶೇಡಬಾಳ, ಶಿರಗುಪ್ಪಿ, ಉಗಾರ ಮುಂತಾದ ಗ್ರಾಮಗಳಿಂದ ಅವರನ್ನು ಅಭಿನಂದುಸಿತ್ತಿದ್ದಾರೆ.
ಮಾಜಿ ತಾ.ಪಂ. ಉಪಾಧ್ಯಕ್ಷ ಬಸಗೌಡಾ ಪಾಟೀಲ ಸ್ವಾಗತಿಸಿದರು, ಜ್ಯೋತಿಕುಮಾರ ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here