27ರಂದು ವಧು-ವರರ ಸಮಾವೇಶ

0
16
loading...

ವಿಜಾಪುರ : 25 ನಗರದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿ ವತಿಯಿಂದ ಇದೇ ದಿ.27 ರಂದು ಬೆಳಿಗ್ಗೆ10ಕ್ಕೆ ಶಾಸ್ತ್ರೀ ನಗರದಲ್ಲಿರುವ ಜೆ.ಎಂ. ಮ್ಯಾರೇಜ್ ಹಾಲನಲ್ಲಿ ಸಂಘದ ಸದಸ್ಯರಿಗೆ ಹಾಗೂ ಅವರ ಮಕ್ಕಳಿಗಾಗಿ ವಧು-ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಶ್ರೀ ಬುದ್ದಿಯೋಗಾನಂದ ಸ್ವಾಮೀಜಿ ಕಾರ್ಯಕ್ರಮ ಸಮಾವೇಶವನ್ನು ಉದ್ಘಾಟಿಸುವರು.
ಡಾ.ಸದಾಶಿವ. ಪವಾರ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಮಹಾನಗರ ಪಾಲಿಕೆಯ ಉಪಮೇಯರ ಆನಂದ ದುಮಾಳೆ, ಸದಸ್ಯ ರಾಹುಲ ಜಾಧವ ಹಾಗೂ ವಿಜಾಪುರ ಮರಾಠಾ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಆಗಮಿಸುವರು.
ಸಂಘದ ಸದಸ್ಯರು ಹಾಗೂ ಸಮಾಜದ ಬಾಂಧವರು ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ವ್ಯವಸ್ಥಾಪಕ
ಸಂಜಯ ಜಾಧವ ಪ್ರಕಟಣೆಯಲ್ಲಿ ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here