ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡಿ : ಜಿ.ಎಸ್.ನ್ಯಾಮಗೌಡ

0
27
loading...

ಜಮಖಂಡಿ : 22 ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾ ಮೀಸಲಾತಿ ಯೋಜನೆ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ ಇಂದಿಲ್ಲಿ ಹೇಳಿದರು.
ಅವರು ತಾಲ್ಲೂಕಿನ ಸಾವಳಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ಮೇಲಿನಂತೆ ಮಾತನಾಡಿದರು.
ಕ್ರೀಡೆಗಳಲ್ಲಿ ಮುಂದಿರುವ ರಾಷ್ಟ್ರಗಳು ಇತರ ಎಲ್ಲ ಕ್ಷೇತ್ರಗಳಲ್ಲಿ ಮುಂದಿರುತ್ತವೆ ಎಂಬುದು ಈಗಾಗಲೇ ಸಾಬೀತಾಗಿದೆ. ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬೇಕಾದರೆ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಬಿಎಲ್‍ಡಿಇ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಟಿ.ಪಿ. ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಕ್ರೀಡಾಪಟುಗಳನ್ನು ಹಿಡಿದು ತರುವ ಹಾಗೂ ಕ್ರೀಡಾಪ್ರೇಮಿಗಳನ್ನು ಹುಡುಕಿ ತರುವ ಸಂದರ್ಭ ಬರಬಾರದು. ಸ್ವಯಂ ಪ್ರೇರಣೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡಾಪಟುಗಳು ಇತರರಿಗಿಂತ ವಿಭಿನ್ನ ಎಂದು ಜಗತ್ತಿಗೆ ತೋರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಗ್ರಾಮ ಪಂಚಾಯತ್ ಸದಸ್ಯ ರಾಮು ಬಂಡಿವಡ್ಡರ, ಜನಕರಾಜ ನಾಂದ್ರೇಕರ ಮಾತನಾಡಿದರು. ಪ್ರಾಚಾರ್ಯ ಡಿ.ಕೆ. ಮಾನೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತರರರಾಷ್ಟ್ರೀಯ ಖ್ಯಾತಿಯ ಮಾಜಿ ಸೈಕ್ಲಿಸ್ಟ್, ಸೈಕ್ಲಿಂಗ್ ತರಬೇತುದಾರ ಚಂದ್ರಪ್ಪ ಕುರಣಿ, ಏಕಲವ್ಯ ಪ್ರಶಸ್ತಿ ವಿಜೇತ ಸೈಕ್ಲಿಸ್ಟ್ ಸವಿತಾ ಗೌಡರ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನುಭವ ಹಂಚಿಕೊಂಡರು.
ತುಕಾರಾಮ ಬಾಪಕರ, ಚಂದ್ರಶೇಖರ ಮಾದರ, ಮಲ್ಲು ನ್ಯಾಮಗೌಡ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಲ್ಲನಗೌಡ ಬುಲಗೌಡ, ಐನುದ್ದೀನ್ ಆಲಗೂರ, ಸದಾಶಿವ ಚವಾಣ, ಭರತೇಶ ಜಮಖಂಡಿ, ಕಲ್ಲಪ್ಪ ಹುನ್ನೂರ ಮತ್ತಿತರು ವೇದಿಕೆಯಲ್ಲಿದ್ದರು.
ಪ್ರಾರಂಭದಲ್ಲಿ ವಿದ್ಯಾರ್ಥಿನಿ ಎ.ಕೆ. ನವಲ್ದಾರ್ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ನದಿಯಾ ಕನಾಳ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಡಾ.ವಿ.ಆರ್. ಮುಂಜಿ ಸ್ವಾಗತಿಸಿದರು. ಪ್ರೊ.ಎಚ್.ಟಿ. ಗಿರಡ್ಡಿ ಅತಿಥಿಗಳನ್ನು ಪರಿಚಯಿಸಿದರು. ಕೊನೆಯಲ್ಲಿ ಪ್ರೊ.ಜಿ.ಕೆ. ಹತ್ತೆನವರ ವಂದಿಸಿದರು. ಪ್ರೊ.ಎಂ.ಎಸ್. ಮುದಕನ್ನವರ, ಪ್ರೊ.ಎಂ.ಎಂ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here