ಗರಸಂಗಿ ಕೊಲೆ ಪ್ರಕರಣ : 5 ನೇ ದಿನಕ್ಕೆ ಮುಂದುವರೆದ ಧರಣಿ

0
18
loading...

ಮುದ್ದೇಬಿಹಾಳ : 22 ತಾಲೂಕಿನ ಗರಸಂಗಿ ಗ್ರಾಮದ ಹನಮಂತ್ರಾಯ ಬಿರಾದಾರನನ್ನು ಕೊಲೆಗೈದ ಆರೋಪಿಗಳನ್ನು ಬಂಧಿಸಿ ಸಂತ್ರಸ್ಥೆಯ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶುಕ್ರವಾರ ಡಿವೈಎಸ್‍ಪಿ, ತಹಸೀಲ್ದಾರ್, ಸಿಪಿಐ ಭೇಟಿ ನೀಡಿ ನಡೆಸಿದ ಮಾತುಕತೆ ವಿಫಲಗೊಂಡಿದೆ.
ಧರಣಿ ನಿರತರನ್ನು ಭೇಟಿ ಮಾಡಿದ ಡಿವೈಎಸ್‍ಪಿ ಎಂ.ವೈ. ಬಾಲದಂಡಿ ಮಾತನಾಡಿ, ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಇಂದು ಬಂಧಿಸಲಾಗುತ್ತದೆ. ಇನ್ನುಳಿದ ಆರೋಪಿಗಳನ್ನು ಪ್ರಕರಣದಲ್ಲಿ ಅವರ ಪಾತ್ರದ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಧರಣಿ ಹಿಂದಕ್ಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.ಆದರೆ ಇದಕ್ಕೊಪ್ಪದ ಗ್ರಾಮಸ್ಥರು, ಪ್ರಕರಣದಲ್ಲಿ ಹೆಸರಿಸಲಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಮೃತಪಟ್ಟ ಹನಮಂತ್ರಾಯ ಬಿರಾದಾರನ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು.ಬೀದಿಪಾಲಾಗಿರುವ ಕುಟುಂಬದವರಿಗೆ ಜೀವಬೆದರಿಕೆ ಹಾಕುತ್ತಿದ್ದು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕೆ.ಮಲ್ಲಿನಾಥ ಅವರು,ಮನೆಯ ಯಜಮಾನನನ್ನು ಕಳೆದುಕೊಂಡಿರುವ ಸಂತ್ರಸ್ಥೆಗೆ ಸರ್ಕಾರದಿಂದ ಮಾಶಾಸನ ದೊರಕಿಸಿಕೊಡಲಾಗುತ್ತದೆ ಧರಣಿ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದರು. ಗ್ರಾಮಸ್ಥರು ಪ್ರಕರಣದಲ್ಲಿಯ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರಲ್ಲದೇ ಧರಣಿಯನ್ನು ಮುಂದುವರೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಗರಸಂಗಿ ಗ್ರಾಮಸ್ಥರು, ಧರಣಿ ಮುಂದುವರೆಸುವ ಅಥವಾ ಕೈ ಬಿಡುವ ಬಗ್ಗೆ ಶನಿವಾರ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here