ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

0
27
loading...

Taluka mattada dasara kreedakuta udgatane1

ಭಟ್ಕಳ : 19 ತಾಲೂಕಾ ಪಂಚಾಯತ್ ಹಾಗೂ ಯುವ ಜನ ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಂತಹ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ ಮಂಗಳವಾರ ಬೆಳ್ಕೆ ಪ್ರೌಢಶಾಲಾ ಆವರಣದಲ್ಲಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಈ ದೇಶದಲ್ಲಿ ಮೊದಲು ಕ್ರೀಡಾಪಟುಗಳ ಕೊರತೆ ಇತ್ತು ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕ್ರೀಡಾಪಟುಗಳು ಹೆಸರು ಮಾಡುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಎಂದರು. ರಾಜ್ಯ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುವ ದೃಷ್ಠಿಯಿಂದ ಜಿಲ್ಲಾ ಮಟ್ಟದಲ್ಲಿ ಒಂದೊಂದು ಕ್ರೀಡಾ ಶಾಲೆಯನ್ನು ತೆರೆದಿದೆ. ಭಟ್ಕಳದಲ್ಲಿಯೂ ಕೂಡ ಕ್ರೀಡೆಗೆ ಉತ್ತಮ ಪ್ರೋತ್ಸಾಹ ದೋರಕುತ್ತಿದ್ದು, ಭಟ್ಕಳದಿಂದ ಕ್ರೀಡಾಪಟುಗಳು ಕೆ.ಪಿ.ಎಲ್‍ಗೆ ಹಾಗೂ ರಾಜ್ಯಮಟ್ಟದ ಕಬ್ಬಡಿ ತಂಡಕ್ಕೆ ಆಯ್ಕೆಯಾಗಿರುವುದೇ ಉತ್ತಮ ಉದಾರಹಣೆ ಎಂದರು. ಭಟ್ಕಳ ಶಾಸಕನಾದ ನಾನು ಕ್ರೀಡಾಭಿಮಾನಿಯಾಗಿದ್ದು, ಪ್ರತಿವರ್ಷ ಮಕ್ಕಳಿಗೆ ಟ್ರ್ಯಾಕ್ ಶೂಟಗಳನ್ನು ನೀಡುತ್ತಿದೇನೆ. ಶಿಕ್ಷಣ ಇಲಾಖೆಯಲ್ಲಿ ಇರುವ ಕೊರತೆಗಳನ್ನು ನಿಗಿಸುವುದು ನನ್ನ ಪ್ರಥಮ ಆಧ್ಯತೆ ಆಗಿದ್ದು, ಅದರ ಜೋತೆಯಲ್ಲಿ ಕ್ರೀಡಗೂ ಉತ್ತೇಜನ ನೀಡುತ್ತಿದ್ದೇನೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ಫಂಚಾಯತ್ ಅಧ್ಯಕ್ಷೆ ಶಾಂತು ಸುಕ್ರನಮನೆ ಮಾತನಾಡಿ ಸಂಘತನಾತ್ಮಕವಾಗಿ ಕ್ರೀಡೆಯನ್ನು ಬೆಳೆಸಿದರೆ ಉತ್ತಮವಾಗಿ ಹೆಸರು ಗಳಿಸಲು ಸಾಧ್ಯವಿದ್ದು,ಕ್ರೀಡೆಯನ್ನು ಫೋಷಿಸಿ ಬೆಳೆಸಬೇಕಾದ ಕರ್ತವ್ಯ ನಮ್ಮೆಲ್ಲರದು ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಡಿ ನಾಯ್ಕ ಸದಸ್ಯರಾದ ಹನುಮಂತ ನಾಯ್ಕ, ಮೋಹನ ನಾಯ್ಕ, ಲಕ್ಷ್ಮೀ ನಾರಾಯಣ ನಾಯ್ಕ, ಬೆಳ್ಕೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮಂಜುನಾಥ ನಾಯ್ಕ ಉಪಾಧ್ಯಕ್ಷ ಕರಾವಳಿ ಮಂಜುನಾಥ ಹಾಗು ಯುವಕ ಸಂಘದ ಅಧ್ಯಕ್ಷ ವಾಸು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥೀತಿರಿದ್ದರು. ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಿ.ಟಿ.ನಾಯ್ಕ ಸ್ವಾಗತಿಸಿದರೆ, ಶ್ರೀಧರ ಶೇಟ್ ನಿರೂಪಿಸಿದರು. ಕೊನೆಯಲ್ಲಿ ಯುವ ಜನ ಸೇವಾ ಕ್ರೀಡಾಧಿಕಾರಿ ಪ್ರಕಾಶ ಶಿರಾಲಿ ವಂದಿಸಿದರು.

loading...

LEAVE A REPLY

Please enter your comment!
Please enter your name here