ಪಾಲೇಸ್ತಿನ್, ಗಾಝಾದಲ್ಲಿ ಇಸ್ರೇಲ್ ದೌರ್ಜನ್ಯ : ಮುಸ್ಲಿಂ ಬಾಂಧವರಿಂದ ಬೃಹತ್ ಪ್ರತಿಭಟನೆ

0
20
loading...

Isrel dourjanya khanhdisi muslimarinda pratibhatane1

ಮುದ್ದೇಬಿಹಾಳ : 22 ಮಾನವೀಯತೆಯನ್ನು ಕಳೆದುಕೊಂಡಿರುವ ಇಸ್ರೇಲ್‍ನ ಉಗ್ರರು ಪ್ಯಾಲೇಸ್ತಿನ ಹಾಗೂ ಗಾಝಾದಲ್ಲಿರುವ ಅಮಾಯಕರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಮಾಜ ಬಾಂಧವರು ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ಪಟ್ಟಣದ ಜಾಮೀಯಾ ಮಸೀದಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾಯ್ದು ಬಸವೇಶ್ವರ ವೃತ್ತದ ಮೂಲಕ ತಹಸೀಲ್ದಾರ್ ಕಛೇರಿಗೆ ಬಂದು ತಲುಪಿತು.ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಘಟಕದ ಅಧ್ಯಕ್ಷ ಕೆ.ಎಂ.ರಿಸಲ್ದಾರ್, ಮುಸ್ಲಿಂ ಮುತ್ತಹಿದ್ ಕೌನ್ಸಿಲ್‍ನ ಸಂಚಾಲಕ ಅಬ್ದುಲರಜಾಕ್ ಘಾಟಿ,ಎಚ್.ಆರ್.ಬಾಗವಾನ,ವಕೀಲರ ಸಂಗದ ಅಧ್ಯಕ್ಷ ಎಂ.ಎಚ್.ಹಾಲಣ್ಣವರ ಅವರು, ಪ್ಯಾಲೇಸ್ತಿಯನ್ ಹಾಗೂ ಗಾಜಾದ ನಿರಾಶ್ತರಿರ ಶಿಬಿರ, ಶಾಲೆಗಳ ಮೇಲೆ ದಾಳಿ ನಡೆಸಿ ಮಹಿಳೆಯರು, ಮುಗ್ಧ ಮಕ್ಕಳನ್ನು ಅತ್ಯಂತ ಕ್ರೂರವಾಗಿ ಹಲ್ಲೆ,ಪ್ರಾಣ ತೆಗೆಯುತ್ತಿರುವ ಇಸ್ರೇಲಿ ಬಂಡುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಈಗಾಗಲೇ 2300ಕ್ಕೂ ಹೆಚ್ಚು ಅಮಾಯಕರು ಇಸ್ರೇಲಿ ದಾಳಿಯಿಂದ ಜೀವ ಬಿಟ್ಟಿದ್ದಾರೆ. ವಿಶ್ವ ಸಂಸ್ಥೆ ಕೂಡಲೇ ಮಧ್ಯಪ್ರವೇಶಿಸಿ ಇಸ್ರೇಲ್‍ನ ದಾಲಿ ತಡೆಗಟ್ಟಲು ಕ್ರಮಕ್ಕು ಮುಂದಾಗಬೇಕು ಎಂದು ಆಗ್ರಹಿಸಿದರು.
ಜೀವದ ರಕ್ಷಣೆಗೆ ಮೊರೆಯಿಡುತ್ತಿರುವ ಪ್ಯಾಲೇಸ್ತಿನ್ ಹಾಗೂ ಗಾಜಾದಲಿರುವ ಅಮಾಯಕ ಮಕ್ಕಳು,ಮಹಿಳೆಯರುನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ,ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರು ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿ ಅಮಾಯಕರ ಕಗ್ಗೊಲೆಯನ್ನು ತಡೆಯಬೇಕು ಎಂದು ಆಗ್ರಹಿಸಿದರು. ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಿ ಕೂಡಲೇ ಅಲ್ಲಿ ಶಾಂತಿ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ.ಮೂನ್ ಅವರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ತಿಲವಾತ ಖಾರಿ ಇಸಾಕ,ಮಹ್ಮದ ಇಸ್ಮಾಯಿಲ್, ಅಲ್ಲಾಭಕ್ಷ್ಯ ಢವಳಗಿ, ರಸೂಲ ದೇಸಾಯಿ, ಎಂ.ಆರ್.ಮುಲ್ಲಾ, ಅಯೂಬ ಮನಿಯಾರ್, ಇಸಾಕ ಮಾಗಿ, ನೂರೇನಬಿ ನದಾಫ,ಸಾಯಬ ಮೋದಿನ ಮೋಮಿನ, ಎಂ.ಎಚ್.ಹಳ್ಳಿ. ಡಾ.ಎ.ಎಂ.ಮುಲ್ಲಾ, ಎಂ.ಎಂ.ಅವಟಿ, ಎನ್.ಬಿ.ಮುದ್ನಾಳ, ಎ.ಎ.ಮೋಮಿನ, ಅಲ್ಲಾಭಕ್ಷ್ಯ ಖಾಜಿ, ಕೆ.ಎನ್.ನದಾಫ, ಮೈನೂದ್ದೀನ ನಾಯ್ಕೋಡಿ, ಎ.ಎಲ್.ಮೋಮಿನ, ಅಲ್ಲಾಭಕ್ಷ್ಯ ದೇಸಾಯಿ, ಕಾಸೀಂಪಟೇಲ್ ಪಟೇಲ್ ಮೂಕಿಹಾಳ, ಮಹಿಬೂಬ ಕುಂಟೋಜಿ ಮತ್ತಿತರರು ಇದ್ದರು. ಪ್ಯಾಲೇಸ್ತಿನ್ ಹಾಗೂ ಗಾಜಾದಲ್ಲಿ ಹತರಾದ ಅಮಾಯಕರ ಸಾವಿಗೆ ಒಂದು ನಿಮಿಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

loading...

LEAVE A REPLY

Please enter your comment!
Please enter your name here