ಪ್ರಕಾಶ ಹುಕ್ಕೇರಿ ಸಾಧನೆ : ಬಿಜೆಪಿಯವರಿಗೆ ಸವಾಲು

0
50
loading...

ಚಿಕ್ಕೋಡಿ : 02 ಪ್ರಕಾಶ ಹುಕ್ಕೇರಿ ಅವರು ಶಾಸಕರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಬಿಜೆಪಿ ಪಕ್ಷದವರು ದೇಶದ ಯವುದೇ ಕ್ಷೇತ್ರದಲ್ಲಿ ಮಾಡಿ ತೋರಿಸಲಿ ಎಂದು ಪಂಚಾಯತ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ ಎಚಿವ ಎಚ್.ಕೆ. ಪಾಟೀಲ ಸವಾಲು ಹಾಕಿದರು.
ಅವರು ಶನಿವಾರ ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ ಚಿಕ್ಕೋಡಿ-ಸದಲಗಾ ಉಪಚುನಾವಣೆಗೆ ನಾಮನಿರ್ದೇಶನ ಪೂರ್ವದಲ್ಲಿ ನಡೆದ ಕಾಂಗ್ರೇಸ್ ಸಭೆಯಲ್ಲಿ ಮಾತನಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬೆಲೆ ಎರಿಕೆ ನಿಯಂತ್ರಣ ಮಾಡುವುದರ ಜೋತೆಗೆ ಗುಜರಾತ ಮಾದರಿ ಅಧಿಕಾರ ನೀಡುತ್ತೆವೆ, ರಸೆ, ನೀರಾವರಿ ಯೋಜನೆಗಳನ್ನು ಅಭಿವೃದ್ದಿ ಮಾಡುತ್ತೆವೆಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಜನರಿಗೆ ನರೇಂದ್ರ ಮೊದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಬಿಸಿ ಮುಟ್ಟಿಸಿದೆಂದು ತ್ರೀವ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯಾ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನತೆಗೆ ನೀಡಿದ ಆಶ್ವಾಷನೆ ಇಡಿರಿಸುವುದರ ಮೂಲಕ ರಾಜ್ಯದಲ್ಲಿ ದೊಡ್ಡ ಬದಲಾವಣೆ ಮಾಡಿದೇವೆಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ ತಮ್ಮ ಮೇಲೆ ಆರೋಪ ಮಾಡಿರುವ ಬಿಜೆಪಿ ನಾಯಕರುಗಳು ಚುನಾವಣೆಯಲ್ಲಿ ನೇರವಾಗಿ ಸ್ಪರ್ದಿಸಿ ಜನರಿಂದ ಆಯ್ಕೆಯಾಗಿ ಬರದೆ ಹಿಂದಿನ ಬಾಗಿಲನಿಂದ ಬಂದು ಅಧಿಕರ ನಡೆಸುತ್ತಿದ್ದಾರೆ ಅಂತವರ ಆರೋಪಕ್ಕೆ ತಾವು ಪ್ರತ್ಯಾರೋಪ ಮಾಡುವ ಅಗತ್ಯವಿಲ್ಲವೆಂದು ಹೇಳಿದರು.
ಬೃಹತ ನೀರಾವರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ ಉಪ ಚುನಾವಣೆಯಲ್ಲಿ ಗಣೇಶ ಹುಕ್ಕೇರಿ ಅವರನ್ನು ಗೆಲ್ಲಿಸುವುದರ ಮೂಲಕ ಯುವ ಶಕ್ತಿ ಎನೆಂಬುದನ್ನು ತೋರಿಸಬೇಕೆಂದು ಕರೆ ನೀಡಿದರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಮತನಾಡಿ ದೇಶದಲ್ಲಿ ಮೋದಿ ಅಲ್ಲೆಯಿಂದಾಗ ನಾವು ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಲ್ಲಿ ಗೆಲ್ಲವು ಸಾಧಿಸಿದ್ದೆವೆ ಚಿಕ್ಕೋಡಿಯಲ್ಲಿ ಮೋದಿ ಅಲೆಯಿಲ್ಲ ಇಲ್ಲಿರುವುದು ಪ್ರಕಾಶ ಹುಕ್ಕೇರಿ ಅವರ ಅಲೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ, ಮಾಜಿ ಶಾಸಕರಾದ ಬಾಳಾಸಹೇಬ ವಡ್ಡರ, ಕಲ್ಲಪ್ಪಣ್ಣಾ ಮಗೇನ್ನವರ, ಕಾಕಾಸಹೇಬ ಪಾಟೀಲ, ಶ್ಯಾಮ ಘಾಟಗೆ, ಪುರಭೆ ಅಧ್ಯಕ್ಷ ನರೇಂದ್ರ ನೇರ್ಲಿಕರ, ಉಪಾಧ್ಯಕ್ಷ ಗುಲಾಬಹುಸೇನ ಬಾಗವಾನ, ಸದಸ್ಯರಾದ ಶ್ಯಾಮ ರೆವಡೆ, ಸಂದೀಪ ಶೇರಖಾನೆ, ವಿನೋದ ಮಾಳಗೆ, ರವಿ ಪಾಟೀಲ, ಮುದ್ದುಸರ ಜಮಾದಾರ, ರಾಮಾ ಮಾನೆ, ಸಾಭಿರ ಜಮಾದಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸತೀಶ ಕುಲಕರ್ಣಿ, ರಾಜು ಮಿರಜೆ ಮಹಾವೀರ ಮೊಹಿತೆ, ರವಿ ಮಾಳಿ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಮಲಗೌಡಾ ನೇರ್ಲಿ ಪೀರೊಜ ಕಳಾವಂತ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here