ಬಸವಧರ್ಮ ಸಮಾನತೆಯ ಸಂಕೇತ-ನಿಡುಮಾಮಿಡಿ ಶ್ರೀಗಳು

0
13
loading...

ವಿಜಾಪುರ : 05 ಸಮಾನತೆಯ ಸಿದ್ದಾಂತವನ್ನು ಪ್ರತಿಪಾದಿಸಿದ ವಿಶ್ವಗುರು ಬಸವಣ್ಣನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರಚನ್ನಮಲ್ಲ ಸ್ವಾಮೀಜಿ ಹೇಳಿದರು.
ನಗರ ಹೊರವಲಯದ ಗುರುಪಾದೇಶ್ವರ ನಗರದಲ್ಲಿರುವ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆಯುತ್ತಿರುವ ವಚನ ಸಂಸ್ಕೃತಿ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಧರ್ಮ ಸಮಾನತೆಯ ಸಂಕೇತ. ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದ ವಿಶ್ವ ಗುರು ಬಸವಣ್ಣ ವಿಶ್ವದ ಮಹಾಪುರುಷರ ಸಾಲಿನಲ್ಲಿದ್ದರೂ ಇನ್ನೂ ನಮ್ಮ ಜನ ಚಿಕ್ಕ ಚಿಕ್ಕ ವರ್ಗಗಳನ್ನು ತಿರಸ್ಕರಿಸುತ್ತಿರುವುದು ನೋವಿನ ಸಂಗತಿ ಎಂದರು.
ಶರಣ ಸಂಸ್ಕೃತಿ ಹಂಚಿಕೊಂಡು ಜೀವಿಸುವ ಸಂಸ್ಕೃತಿಯಾಗಿದೆ. ದಾಸೋಹ, ಕಾಯಕ, ಮಹಾಮನೆ ಕಾರ್ಯಕ್ರಮಗಳನ್ನು ರೂಪಿಸಿದ ಬಸವಾದಿ ಶರಣರು ಈ ದೇಶದಲ್ಲಿ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿದರು. ನೂರಾರು ವರ್ಗಗಳನ್ನು ಸೇರಿಸಿ ಲಿಂಗವಂತ ಪರಂಪರೆಯ ಸಂಸ್ಕøತಿಯನ್ನು ಪ್ರಾರಂಭಿಸಿದ್ದು ಅರ್ಥಪೂರ್ಣ. ವರ್ಣಾಶ್ರಮ ಧರ್ಮ ಎಲ್ಲರನ್ನು ಪ್ರೀತಿಸುವಲ್ಲಿ ವಿಫಲವಾಗಿದೆ. ಅದು ಮಾನವ ಧರ್ಮವನ್ನು ಅಖಂಡವಾಗಿ ಕಂಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ನಿಡುಮಾಮಿಡಿ ಶ್ರೀಗಳು ಜಗಜ್ಯೋತಿ ಶ್ರೀ ಬಸವೇಶ್ವರರ ಮೂರ್ತಿ ಅನಾವರಣಗೊಳಿಸಿದರು.
ಪ್ರವಚನಕಾರರಾದ ನಾಗನೂರಿನ ಕುಮಾರದೇವರು ಮಾತನಾಡಿ ವರ್ಣಭೇದ, ಲಿಂಗಭೇದ ಮಾಡಕೂಡದು. ಬಸವ ಧರ್ಮ ವಿಶ್ವಧರ್ಮವಾಗಿದೆ. ಮತ್ತು ಮಾನವ ಧರ್ಮವಾಗಿದೆ. ಎಲ್ಲರನ್ನೂ ಪ್ರೀತಿಸುವ ಧರ್ಮವನ್ನು ಬಸವಾದಿ ಶರಣರು ನಮಗೆ ನೀಡಿದ್ದಾರೆ. ಮೇಲು, ಕೀಳು, ಬಡವ, ಶ್ರೀಮಂತ ಎನ್ನದೆ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ಬಸವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲಿಕಾರ, ಎಸ್.ಎಸ್. ನಾಡಗೌಡ, ಎನ್.ಎಸ್. ರುದ್ರಗೌಡ, ಎನ್.ಕೆ. ಕುಂಬಾರ, ಗಂಗಾಧರ ಜೋಗೂರ, ಸೋಮನಗೌಡ ಪಾಟೀಲ, ಸುಭಾಸ ಇಂಗಳೇಶ್ವರ, ವಿ.ಎಸ್. ಹೇರಲಗಿ, ಉಮೇಶ ಕಾರಜೋಳ, ಸಿ.ಎಸ್. ಪಾಟೀಲ, ಎಸ್.ಜಿ. ಗಡಗಿ, ಆರ್.ಸಿ. ಹಿರೇಮಠ, ರಾಜಶೇಖರ ಗದಗ, ಸಂಜೀವ ಪಾಟೀಲ ಮಲ್ಲಪ್ಪ ಬುರಣಾಪೂರ, ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here