ಬಿ.ಜೆ.ಪಿಯ ಪ್ರತಿಭಟನೆಯ ಬಗ್ಗೆ ವಾಗ್ದಾಳಿ ನಡೆಸಿದ ಭಟ್ಕಳ ಶಾಸಕ ಮಂಕಾಳ ವೈದ್ಯ

0
26
loading...

BJP pratibhataneya virudda batkala shasakarinda vagdali1

ಭಟ್ಕಳ : 22 ಭಟ್ಕಳ ಶಾಸಕರು ಮರಳು ಮಾಫಿಯಾದಲ್ಲಿ ನಡೆಸುತ್ತಿದ್ದಾರೆ ಎಂದು ಆರೋಪಿಸುವ ಶಿವಾನಂದ ನಾಯ್ಕರೇ ? ನಿಮ್ಮ ಅಧಿಕಾರವಧಿಯಲ್ಲಿ ಪರವಾನಿಗೆ ನೀಡಿದ 41 ಜನರೇ ಮರಳು ಮಾಫಿಯಾ ನಡೆಸುತ್ತಿದ್ದಾರೆಯೇ ಹೊರತು ನನ್ನ ಆಧಿಕಾರವಧಿಯಲ್ಲಿ ಯಾರಿಗೂ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಿಲ್ಲ ಎಂದು ಭಟ್ಕಳ ಶಾಸಕ ಮಂಕಾಳ ಎಸ್ ವೈದ್ಯ ತಿಳಿಸಿದರು.
ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡುತ್ತಿದ್ದರು. ಅ.15ರಂದು ನಾನು ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನಡೆಸಿ ಮನೆಗೆ ತೆರಳುತ್ತಿರುವಾಗ ಶಿರಾಲಿ ಚೆಕ್ ಪೋಸ್ಟ ಬಳಿ ನಿಂತಿರುವ ಮರಳು ಗಾಡಿಯನ್ನು ನೋಡಿ ಪೊಲೀಸರಿಗೆ ಮರಳು ಗಾಡಿಯನ್ನು ಪೊಲೀಸ್ ಸ್ಟೇಷನ್‍ಗೆ ಕೊಂಡ್ಯೂಯುವ ಬದಲಾಗಿ ಇಲ್ಲಿ ನಿಲ್ಲಿಸಿಕೊಂಡಿದ್ಯಾಕೆ ಎಂದು ಪ್ರಶ್ನೀಸಿದ್ದು ನಿಜ, ಲಕ್ಷಾಂತರ ರೂಪಾಯಿ ವ್ಯಯಿಸಿ ಲಾರಿಯನ್ನು ತಂದ ಮಾಲಕರು ಈ ರೀತಿ 3-4 ದಿವಸ ಗಾಡಿಯನ್ನು ರಸ್ತೆಯಲ್ಲೆ ನಿಲ್ಲಿಸಿಕೊಂಡಿದ್ದರೆ ಹೊಟ್ಟೆಪಾಡಿನ ಗತಿ ಎನು ಎಂದು ಪ್ರಶ್ನೀಸಿದೆ ಎಂದರು. ಅಲ್ಲದೇ ಈ ಚೆಕ್ ಪೋಸ್ಟ ಮುಖಾಂತರ ನನ್ನ ಹೆಸರು ಹೇಳಿಕೊಂಡು ಅಧಿಕಾರಿಗಳು ಹಣ ಮಾಡುತ್ತಿದ್ದಾರೆ ಎಂಬ ವಿಷಯ ನನ್ನ ಗಮನಕ್ಕೆ ಬಂದ ಕಾರಣ ಇಂತಹ ಚೆಕ್ ಪೋಸ್ ಎಕೆ ಬೇಕು ಅದನ್ನು ಒಡೆದುಹಾಕವಾ ಎಂದು ಹೇಳಿದ್ದು ನಿಜ ಎಂದ ಶಾಸಕರು ನಾನು ನನ್ನ ಕ್ಷೇತ್ರದ ಯಾವುದೇ ಅಧಿಕಾರಿಯಿಂದ ಒಂದು ರೂಪಾಯಿ ಹಣ ಪಡೆದುಕೊಂಡಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರು. ನಾನು ಧ್ವನಿ ಎತ್ತಿದ್ದು ಜನ ಸಮಾನ್ಯರಿಗೆ ಮರಳು ದೊರಕುವಂತಾಗಲಿ ಎಂದೆ ವಿನಃ ಮರಳು ಮಾಫಿಯಾ ನಡೆಸಲು ಅಲ್ಲ. ಅಷ್ಠಕ್ಕೂ ನನ್ನ ಹೆಸರಿನಲ್ಲಿ ಯಾವುದೇ ಮರಳು ಸೈಟ್ ಕೂಡ ಇಲ್ಲ ಎಂದು ಸ್ಪಷ್ಠ ಪಡಿಸಿದರು. ಕಳೆದ ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರು ಭಟ್ಕಳಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರು ಮರಳು ದೋರಕದ ಬಗ್ಗೆ ಸಚಿವರಲ್ಲಿ ದೂರಿಕೊಂಡಾಗ ಸಚಿವರೇ ಅಧಿಕಾರಿಗಳಿಗೆ ಜನಸಾಮಾನ್ಯರಿಗೆ ತೊಂದರೆಯಾಗದ ಮರಳು ಸಾಗಾಟ ಮಾಡಲು ಅವಕಾಶ ಕೋಡಿ ಎಂದು ಆಧೇಶಿಸಿದ್ದು, ಅದರಂತೆ ನಾನು ಜನ ಸಾಮನ್ಯರ ಪರವಾಗಿ ಧ್ವನಿ ಎತ್ತಿದೇನೆ ಹೊರತು ನನ್ನ ಹಾಗೂ ನನ್ನ ಬೆಂಬಲಿಗರ ಪರವಾಗಿ ಅಲ್ಲ ಎಂದು ಸ್ಪಷ್ಠಪಡಿಸಿದರು.
ಈ ಹಿಂದೆ ಶರವಾತಿ ನದಿಯಲ್ಲಿ ಮರಳಿಗಾರಿಕೆ ನಡೆಸಲು 7 ಜನರಿಗೆ ಮಾತ್ರ ಪರವಾನಿಗೆ ಇತ್ತು, ಕಳೆದ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 41 ಜನರಿಗೆ ಪರವಾನಿಗೆ ನೀಡಿತ್ತು. ಆ 41 ಜನರೇ ಓರಿಸ್ಸಾ ಮೂಲದವರನ್ನು ಕರೆಯಿಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಂದು ಪರವಾನಿಗೆ ನೀಡಿದ ಬಿ.ಜೆ.ಪಿ ಸರ್ಕಾರಕ್ಕೆ ಶರವಾತಿ ನದಿ ಹಿನ್ನಿರು ಇಂಗಿ ತೊಂದರೆಯಾಗುತ್ತದೆ ಎಂಬ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು. ಇಲ್ಲಿ ಮರಳುಗಾರಿಕೆ ನಡೆಸುವ ಶೇಕಡಾ 50 ಕ್ಕಿಂತ ಹೆಚ್ಚಿನವರು ಬಿ.ಜೆ.ಪಿಯವರೇ ಆಗಿದ್ದು, ಮಾಜಿ ಸಚಿವ ಶಿವಾನಂದ ನಾಯ್ಕರ ಆಪ್ತರು ಅದರಲ್ಲಿದ್ದಾರೆ ಎಂದು ತಿಳಿಸಿದರು. ಬಿ.ಜೆ.ಪಿಯ ಬಳ್ಕೂರು ಕೇಶವ ನಾಯ್ಕ ತನ್ನ ಪಂಚಾಯತ್ ವ್ಯಾಪ್ತಿಯಲ್ಲಿ ತನ್ನ ದೊಡ್ಡಪ್ಪನ ಮಗನ ಹೆಸರಿನಲ್ಲಿ ಮರಳುಗಾರಿಕೆ ಮಾಡುತ್ತಿದ್ದಾರೆ. ಅದಲ್ಲದೇ ಇನ್ನೂ ಮೂವರಿಗೆ ಮರಳುಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ. ಇದರಿಂದ ಆ ಪಂಚಾಯತ್‍ನ ರಸ್ತೆ ಸಂಪೂರ್ಣ ಹಾಳಾಗಿದ್ದು ಜನ ಪ್ರತಿಭಟನೆ ನಡೆಸುತ್ತಿರುವ ವರದಿ ಪೇಪರನಲ್ಲಿ ಬರುತ್ತಿದೆ ಇದಕ್ಕೆ ಬಿ.ಜೆ.ಪಿ.ಯವರು ಎನನ್ನುತ್ತಾರೆ ಎಂದು ಪ್ರಶ್ನೀಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕರ ಮೇಲೆ ಹರಿಹಾಯ್ದ ಅವರು ಡಾ! ಚಿತ್ತರಂಜನ್ ಹೆಣದ ಮೇಲೆ ರಾಜಕೀಯ ಮಾಡಿದ ತಾವು ಬಳ್ಳಾರಿ ಮಾದರಿಯಲ್ಲಿ ಮರಳುಗಾರಿಕೆ ಮಾಪಿಯಾ ಹುಟ್ಟು ಹಾಕಿದ್ದೀರಿ ಇದರಿಂದ ಇಂದು ಜನಮಸಾಮನ್ಯರಿಗೆ ಮರಳು ಸೀಗದೇ ಪರದಾಡುತ್ತಿದ್ದಾರೆ. ನಮ್ಮ ಕ್ಷೇತ್ರದ ಮರಳು ಇಂದು ದೂರದ ಜಿಲ್ಲೆಗಳಿಗೆ ದುಪ್ಪಟ್ಟು ಬೆಲೆಗೆ ಸಾಗಾಟವಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಮರಳುಗಾರಿಗೆ ನಡೆಸುವವರ ಸಂಘಟನೆಯ ಅಧ್ಯಕ್ಷ ಕೂಡ ನಿಮ್ಮ ಆಪ್ತನೆ ಆಗಿದ್ದಾನೆ ಎಂದು ಆರೋಪಸಿದರು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದೀ ಕಾರ್ಯ ಬಾಕಿ ಇದ್ದು ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಪ್ರತಿಭಟನೆ ನಡೆಸಿ ಆಗ ಒಪ್ಪುತ್ತೇನೆ ಅದು ಬಿಟ್ಟು ವಿನಃ ಕಾರಣ ಕ್ಷುಲಕ ಕಾರಣಕ್ಕೆ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬಲು ನಾವು ಬಂದಿದ್ದೇವೆ ಎಂದು ಹೇಳುವ ತಾವು ಅಂಧು ಮುಡೇಶ್ವರದ ಮಠದ ಹಿತ್ಲುವಿನಲ್ಲಿ ನಡೆದ ಹೊಡೆದಾಟದ ಘಟನೆಯಲ್ಲಿ ನಾನು ಆ ಘಟನಾ ಸಮಯದಲ್ಲಿ ಅಲ್ಲಿ ಇಲ್ಲದಿದ್ದರೂ ನನ್ನ ಮೇಲೆ ಕ್ರೀಮಿನಲ್ ಕೇಸ್ ದಾಕಲು ಮಾಡಿಲ್ಲ ಎನ್ನುವ ಕಾರಣಕ್ಕೆ ಅಲ್ಲಿನ ಪಿ.ಎಸ್.ಐಯನ್ನೆ ಅಮಾನತ್ತು ಮಾಡಿದ್ದಿರಲ್ಲಾ ಅವಾಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕ ಸ್ಥೈರ್ಯ ತುಂಬವ ಕಾರ್ಯ ಎಂದು ಪ್ರಶ್ನೀಸಿದರು. ಭಟ್ಕಳ ಶಾಸಕ ಗುಂಡಾ ಎಂದು ಕರೆಯುವ ತಾವುಗಳು ತಮ್ಮ ಅಧಿಕಾರವಧಿಯಲ್ಲಿ ಕೆಲಸ ಆಗದಿದ್ದಾಗ ಸಮ್ಮನೆ ಕೂಳಿತ್ತಿದ್ದಿರಾ ? ಜನಸಾಮಾನ್ಯರ ಕೆಲಸ ಆಗಬೇಕಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬೇಕಾದ ಅನೀವಾರ್ಯತೆ ಎದುರಾದಾಗ ಒಬ್ಬ ಶಾಸಕನಾಗಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವೆ ? ಅದನ್ನೆ ನಾನು ಮಾಡಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಶರಾವತಿ ನದಿ ಮರಳು ಗುತ್ತಿಗೆದಾರರ ಸಂಘ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಅದರಲ್ಲಿ ಈ ಮಾಫಿಯಾದಲ್ಲಿ ನಮ್ಮದಾಗಲಿ ಜಿಲ್ಲಾ ಉಸ್ತುವಾರಿ ಸಚಿವರದಾಗಲಿ ಎನೂ ಪಾತ್ರವಿಲ್ಲವೆಂಉಧು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದು, ನಮ್ಮ ಸರ್ಕಾರವಾಗಲಿ ನಾನಗಲಿ ಎಂದಿಗೂ ಅಕ್ರಮ ಮರಳುಗಾರಿಕೆಗೆ ಪರವಾನಿಗೆ ನೀಡುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಫಂಚಾಯತ್ ಸದಸ್ಯ ಅಬ್ದುರ್ ರಹೀಂ, ಸುರೇಶ ನಾಯ್ಕ ಹೊಸ್ಮನೆ, ಮಂಜುನಾಥ ನಾಯ್ಕ, ಭಾಸ್ಕರ ಮೊಗೇರ ಮುಂತಾದವರು ಸುದ್ದೀಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here