ಶಾಲಾ ಬಾಲಕಿ ದೃಷ್ಟಿ ಕಳೆದಕೊಂಡ ಪ್ರಕರಣ : ಪೊಲೀಸ್ ಅಧಿಕಾರಿಗಳಿಂದ ಕಾನೂನು ಕ್ರಮದ ಭರವಸೆ

0
21
loading...

ಮುದ್ದೇಬಿಹಾಳ : 22 ಖಾಸಗಿ ಶಾಲೆಯೊಂದರಲ್ಲಿ ಬಾಲಕಿ ತನ್ನ ಸಹಪಾಠಿಯಿಂದ ಕಣ್ಣಿಗೆ ಪೆನ್ಸಿಲ್ ಚುಚ್ಚಿಕೊಂಡು ದೃಷ್ಟಿ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿಯವರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಡಿವೈಎಸ್‍ಪಿ ಎಂ.ವೈ.ಬಾಲದಂಡಿ ಸೂಚಿಸಿದ್ದಾರೆ.
ಪಟ್ಟಣದ ತಹಸೀಲ್ದಾರ್ ಕಛೇರಿಯ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದ ಕೋಳೂರ ಗ್ರಾಮದ ಶಾಲಾ ಬಾಲಕಿ ದೃಷ್ಟಿ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಕರೊಂದಿಗೆ ಮಾತುಕತೆ ನಡೆಸಿದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪಾಲಕರೊಂದಿಗೆ ಮಾತಕತೆ ನಡೆಸಿದ ಅವರು,ಕಾನೂನು ಪ್ರಕಾರ ಶಾಲೆಯವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಲಕಿಯ ಪಾಲಕರು,ಶಾಲೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ತಮಗೆ ಜೀವ ಬೆದರಿಕೆ ಹಾಕಲಾಗುತ್ತಿದೆ.ಕುಡಿದು ಬಂದು ಮನೆಯ ಮುಂದೆ ಕೆಲವರನ್ನು ಬಿಡುತ್ತಿದ್ದಾರೆ.ಇದರಿಂದ ತಮಗೆ ಭಯವಾಗಿದೆ.ನ್ಯಾಯಕೋರಿ ಶಾಂತಿಯುತ ಧರಣಿ ನಡೆಸುತ್ತಿದ್ದರೂ ಜೀವ ಭಯ ಒಡ್ಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.ಇದಕ್ಕೆ ಪ್ರತಿಕ್ರಯಿಸಿದ ಡಿವೈಎಸ್‍ಪಿ ಬಾಲದಂಡಿ ಅವರು, ಶಾಲೆಯವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಅಲ್ಲದೇ ಪೊಲೀಸ ರಕ್ಷಣೆಯನ್ನು ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಮಲ್ಲಿನಾಥ.ಸಿಪಿಐ ಸುದರ್ಶನ ಪಟ್ಟಣಕುಡೆ,ಪಿಎಸ್‍ಐ ಬಿ.ವಿ.ನ್ಯಾಮಗೌಡ,ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಹಾಲಣ್ಣವರ,ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ,ದೃಷ್ಟಿ ಹಾನಿಗೊಳಗಾದ ಬಾಲಕಿ ರೇಣುಕಾ,ತಾಯಿ ಹುಲಗವ್ವ ಹರನಾಳ,ಸಿರಿವಂತ ಹರನಾಳ,ಗದಿಗೆಪ್ಪ ಹರನಾಳ,ಬೀರಪ್ಪ ನಾಗರಾಳ,ನೀಲಪ್ಪ ಕೋಳೂರ ಮತ್ತಿತರರು ಇದ್ದರು.
ಏತನ್ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕಿಯ ತಂದೆ ಕೊಟ್ರಪ್ಪ ಹರನಾಳ, ಮಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಪೊಲೀಸರನ್ನು ಕೋರಿದ್ದು ಇದಕ್ಕೆ ಸರಿಯಾಗಿ ಸ್ಪಂದಿಸದ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ.ಜೀವರಾಜ ಕುಲಕರ್ಣಿ ಹಾಗೂ ಬಸವರಾಜ ಮ್ಯಾಗೇರಿ ಹಾಗೂ ಅನಧಿಕೃತವಾಗಿ ನಡೆಸುತ್ತಿರುವ ಕೋಳೂರಿನ ಜಗಜ್ಯೋತಿ ಬಸವೇಶ್ವರ ಕೋಚಿಂಗ್ ಸ್ಕೂಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತದೆ.ಆರೋಪಿಗಳನ್ನು ಬಂಧಿಸುವವರಿಗೆ ಧರಣಿ ಮುಂದುವರೆಸುವುದಾಗಿ ತಿಳಿಸಿದರು.

loading...

LEAVE A REPLY

Please enter your comment!
Please enter your name here