ಪತ್ರಕರ್ತರ ರಕ್ಷಣಾ ಸಮಿತಿ ರಚಿಸಿ : ಗವಿಸಿದ್ದಯ್ಯ ಹಳ್ಳಿಕೇರಿಮಠ

0
23
loading...

ಗದಗ : ತಮ್ಮ ಜೀವನವನ್ನೆ ಪಣಕ್ಕಿಟ್ಟು ಸಮಾಜದ ಸರ್ವಾಂಗೀಣ ಶ್ರೇಯೋ ಸದಾ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಸಾವು ಬದುಕಿನಮಧ್ಯೆ ಹೋರಾಡುತ್ತ ಸಮಾಜದ ಏಳ್ಗೇಗಾಗಿ ದುಡಿಯುವ ಪತ್ರಕರ್ತರ ಸೇವೆ ಅನನ್ಯವಾದದ್ದು. ಪತ್ರಕರ್ತರೆಂದರೆ ಇತಿಹಾಸದ ಆಧಾರ ಸ್ಥಂಬವಿದ್ದಂತೆ ನ್ಯಾಯ ಸಂಮ್ಮತವಾದ ಅವರ ರಕ್ಷಣೆ ಸರಕಾರ ಹಾಗೂ ಸಮಾಜದ ಹೊಣೆಯಾಗಿದ್ದು ಕೂಡಲೇ ಬಹುದಿನಗಳಿಂದ ಬೇಡಿಕೆಯಾಗಿರುವ ಪತ್ರಕರ್ತರ ರಕ್ಷಣಾ ಸಮಿತಿ ರಚನೆ ಮಾಡಬೇಕೆಂದು ಜನಪದ ಕಲಾವಿದ ಜಂತ್ಲಿ ಶಿರೂರಿನ ಗವಿಸಿದ್ದಯ್ಯ ಹಳ್ಳಿಕೇರಿಮಠ ಸರಕಾರಕ್ಕೆ ಆಗ್ರಹಿಸಿದರು.
ಅವರು ಜಿಲ್ಲೆಯ ರೋಣ ನಗರದ ಶ್ರೀ ರಾಜೀವ ಗಾಂಧಿ ಬಿ.ಎಡ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ 188 ನೇ ಕೂಗು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತಿಚೆಗೆ ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಡೆದ ಹಲ್ಲೆ ಪ್ರಕರ್ಣಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಹಂಚಿಕೊಳ್ಳುತ್ತ ಘಟನೆಯ ವಾಸ್ಥವತೆಯ ಬಗ್ಗೆ ವಿಷಾಧ ವ್ಯಕ್ತ ಪಡಿಸಿ ಖಂಡಿಸಿದರು. ಪತ್ರಕರ್ತರ ಮೇಲೆ ರಾಜ್ಯದಲ್ಲಿ ಹಲವಾರು ಪೋಲಿಸ್ ಪ್ರಕರಣಗಳು ದಾಖಲಾಗಿದ್ದನ್ನು ನಾವು ನೋಡಿದ್ದೇವೆ ಕೂಡಲೇ ರಾಜ್ಯದಲ್ಲಿ ಪತ್ರಕರ್ತರ ಮೇಲೆ ಆದ ಪೋಲಿಸ್ ಕೇಸ್‍ಗಳನ್ನು ಹಿಂಪಡೆಯಬೇಕು ಅನ್ಯಾಯಕ್ಕೊಳಗಾದ ಪತ್ರಕರ್ತರಿಗೆ ಸರ್ಕಾರದಿಂದ ಪರಿಹಾರ ದೊರೆಯಬೇಕು. ಸೂಕ್ತ ಸ್ವತಂತ್ರವಿಲ್ಲದೇ ಅಡ್ಡಾಡುವ ಪರಿಸ್ಥಿತಿ ತಲೆದೋರಿದ್ದು ಸಾವನ್ನು ಬೆನ್ನ ಹಿಂದೆ ಕಟ್ಟಿಕೊಂಡು ಸಮಾಜ ತಿದ್ದುವ ಪತ್ರಕರ್ತರ ರಕ್ಷಣೆಗೆ ಸರ್ಕಾರ ರಾಷ್ಟ್ರ ಮಟ್ಟದಲ್ಲಿ ಪತ್ರಕರ್ತರ ರಕ್ಷಣಾ ಸಮಿತಿ ರಚಿಸಿ ರಕ್ಷಣೆ ಮಾಡಲಿ ಜೊತೆಗೆ ಪತ್ರಕರ್ತರಿಗೆ ಬೇಕಾಗುವ ಮೂಲಭೂತ ಸೌಲಭ್ಯಗಳನ್ನು ಸಮಪರ್ಕವಾಗಿ ಪೂರೈಸಿ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ವಾಯ್. ಎನ್. ಪಾಪಣ್ಣವರ ಮಾತನಾಡಿ, ನಾಡರಕ್ಷಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಕಾಳಜಿಯೊಂದಿಗೆ ನೆಲ, ಸಂಸ್ಕøತಿ ಬಗ್ಗೆ ಅರಿವು ಹೊಂದಬೇಕು. ಜನಪದ ನಾಶವೆಂದರೆ ಮಾನವೀಯ ಮೌಲ್ಯಗಳ ನಾಶವಾಗಿದ್ದು ಪಕೃತಿಯೊಂದಿಗಿನ ಸಂಬಂಧಗಳನ್ನು ಬೆಸೆಯುವುದಾಗಿದೆ. ನನ್ನವರು ನಮ್ಮವರೊಂದಿಗೆ ಎಂಬ ಭಾವ ಬದುಕಿನ ಭಾವನೆ ಜನಪದವಾಗಿದೆ. ಜನಪದ ತಿರುಳಿನ ಅರ್ಥ ಜಾಗೃತವಾದರೆ ಜಗವೇ ಜಾಗೃತವಾದಂತೆ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯೊಂದಿಗೆ ಸಮಾಜದಲ್ಲಿ ಭಾವನಾತ್ಮಕವಾಗಿ ಬೆರೆಯುವುದನ್ನು ರೂಢಿಸಿಕೊಂಡು ಸಮಾಜದ ಸಂಘಜೀವಿಯಾಗಿ ಬದುಕಬೇಕೆಂದು ಸಲಹೆ ನೀಡಿದರು.
ಪ್ರೊ. ಎಚ್. ಆರ್. ದೊಡ್ಡಮನಿ ಮಾತನಾಡಿ ಜಾಗತೀಕರಣದಲ್ಲಿ ದೂರವಾಗಿರುವ ಸಂಬಂಧ ಸಂಕೋಲೆಗಳ ಮಹತ್ವ ಸಾರುವ ಜನಪದ ಉಪನ್ಯಾಸ ಮಾನವರು ನಾವೆಂದು ಸಾರಿ ಹೇಳುತ್ತದೆ. ಮಾನವೀಯ ಮೌಲ್ಯವನ್ನು ಸಾರುವುದರೊಂದಿಗೆ ಸಮಾಜವನ್ನು ತಿದ್ದುವ ಕೂಗು ಕಾರ್ಯಕ್ರಮ ಪ್ರಶಂಸನೀಯವಾಗಿದ್ದು ಕಾರ್ಯಕ್ರಮದ ನಿರಂತರ ಸೇವೆಗೆ ನಾವುಗಳೆಲ್ಲ ಬದ್ಧರಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರೊ. ಎಸ್. ಆರ್. ಗೋದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಪದ ಸಾಹಿತ್ಯ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮುಕ್ತ ಸಂವಾದ ನಡೆಯಿತು. ಪ್ರಾರಂಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಪ್ರೊ. ಜಿ. ಆರ್. ವೀರಾಪೂರ ಸ್ವಾಗತಿಸಿದರೆ, ಪ್ರೊ. ಜಿ. ಎನ್. ನಾಯಕ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಪ್ರೊ. ಎಸ್. ಎಸ್. ಗೋದಿ, ಪ್ರೋ. ಎಸ್. ಆರ್. ಐಹೊಳೆ, ಪ್ರೊ. ಪಿ. ಸಿದ್ದಪ್ಪ, ಪ್ರೋ. ವೀಣಾ ಬಗರೆ, ಪ್ರೊ. ಎಂ. ಎಸ್. ಕೋರಿ, ಪ್ರೊ. ಎಸ್. ಎಸ್. ಗೌಡರ, ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here