ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ,ಯಲಬುರ್ಗಾದಲ್ಲಿ ಅಂಗನವಾಡಿ ಕಾರ್ಯಕರ್ತರಿಂದ ಪ್ರತಿಭಟನೆ

0
25
loading...

ಯಲಬುರ್ಗಾ,ಸೆ,24;ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ ತಾಲೂಕ ಶಿಶು ಅಭಿವೃದ್ದಿ ಇಲಾಖೆಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರತಿಭಟನಾಕಾರರು ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲೆ ವೇತನ ಪಾವತಿ ಮಾಡಬೇಕು. ಅಡುಗೆ ಕೇಂದ್ರಕ್ಕೆ ಪೂರೈಕೆ ಮಾಡುವ ಸೌದೆ ಹಣ ಸಕಾಲದಲ್ಲಿ ಪಾವತಿಸಬೇಕು.ಅಂಗನವಾಡಿಗಳಿಗೆ ಪೂರೈಕೆ ಮಾಡುವ ಆಹಾರ ಧಾನ್ಯಗಳ ತೂಕ ಕಡಿಮೆ ಇದ್ದು ಸಮರ್ಪಕವಾಗಿ ಪೂರೈಕೆ ಮಾಡಬೇಕು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು, ಅಂಗನವಾಡಿಯಲ್ಲಿ ಎನೆ ಸಮಸ್ಯೆ ಬಂದರು ಸಭೆಯನ್ನು ಕರೆದು ತ್ವರಿತವಾಗಿ ಇತ್ಯರ್ಥ ಪಡಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕರ್ತೆಯರಿಗೆ ಬೇರೆ ಇಲಾಖೆಯ ಕೆಲಸ ವಹಿಸಬಾರದು, ಅಂಗನವಾಡಿ ಬಾಡಿಗೆ ಹಣವನ್ನು ನೀಡಬೇಕು, ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಬಾರದು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಂಘದ ಪಧಾಧಿಕಾರಿಗಳು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಜಿಲ್ಲಾ ಪ್ರಧಾನಕಾರ್ಯದರ್ಶಿ ಕಲಾವತಿ, ಸಿಐಟಿಯು ಜಿಲ್ಲಾ ಮುಖಂಡ ಗೌಸಸಾಬ, ಡಿವಾಯ್‍ಎಪ್‍ಐ ಸಂಚಾಲಕ ರಜಾಕ್ ಇಲಕಲ್, ತಾಲೂಕ ಅದ್ಯಕ್ಷೆ ಸುನಿತಾ ಹುರಳಿ, ಶಾಂತ ಸಜ್ಜನ, ಚಿನ್ನಕ್ಕ ವದ್ನಾಳ, ರಾಷಿದ ಖಾಜಿ, ಇಮಾಮ ಸಿನ್ಹಿ, ಮತ್ತಿತರರು ಇದ್ದರು.

loading...

LEAVE A REPLY

Please enter your comment!
Please enter your name here