ಗುಂಡಾ ಕಾಯ್ದೆ ಅನುಷ್ಠಾನಕ್ಕೂ ಮುನ್ನ ಸಂಪೂರ್ಣ ಮಾಹಿತಿ ಕಲೆಹಾಕಿ `ಗುಂಡಾ ಕಾಯ್ದೆ ಅನುಷ್ಠಾನ’ ಕುರಿತು ಕಾರ್ಯಾಗಾರದಲ್ಲಿ ನ್ಯಾ. ಜಿ. ಪದ್ಮರಾಜ

0
31
loading...

ಬೆಳಗಾವಿ,ಅ.11: ಗುಂಡಾ ಕಾಯ್ದೆ ಅನುಷ್ಠಾನಕ್ಕೂ ಮುಂಚೆ ಪ್ರತಿಯೊಬ್ಬ ಪೆÇಲೀಸ್ ಅಧಿಕಾರಿ ನಿಯಮಗಳ ಕುರಿತು ಕಡ್ಡಾಯವಾಗಿ ಸಂಪೂರ್ಣ ಪೂರ್ವ ಮಾಹಿತಿ ಹೊಂದಿರಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಿ. ಪದ್ಮರಾಜ ಹೇಳಿದರು.
ಶುಕ್ರವಾರ ಜಿಲ್ಲಾ ಪೆÇಲೀಸ್ ಭವನದಲ್ಲಿ ಉತ್ತರ ವಲಯದ ಪೆÇಲೀಸ್ ಅಧಿಕಾರಿಗೆ ಆಯೋಜಿಸಿದ್ದ `ಗುಂಡಾ ಕಾಯ್ದೆ ಅನುಷ್ಠಾನ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗುಂಡಾ ಕಾಯ್ದೆ ಬಳಕೆ ಮತ್ತು ಅನುಷ್ಠಾನ ವಿಷಯವಾಗಿ ಸುಪ್ರೀಂ ಕೋರ್ಟ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪೆÇಲೀಸ್ ಇಲಾಖೆ, ಜಿಲ್ಲಾಡಳಿತ, ಕೋರ್ಟ್ ಸೇರಿದಂತೆ ಸಂಬಂಧಿತ ಇಲಾಖೆಗಳ ನಡುವೆ ಸಮನ್ವಯತೆ ಇರಬೇಕು. ಕಾಯ್ದೆ ಅನುಷ್ಠಾನದಲ್ಲಿ ಪೆÇಲೀಸ್ ಇಲಾಖೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಹಕಾರ ಅತ್ಯಗತ್ಯ. ಗುಂಡಾ ಕಾಯ್ದೆಯಡಿಯಲ್ಲಿ ಅಪರಾಧಿ ಮತ್ತು ಆರೋಪಿಗಳನ್ನು ಗುರುತಿಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದರು.
ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಪಾಲನೆ ಮತ್ತು ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಬೆಳಗ್ಗೆ 9.30ಗಂಟೆಯಿಂದ ಸಂಜೆ 5 ಗಂಟೆ ವರೆಗೆ ನಡೆದ ಕಾರ್ಯಾಗಾರದಲ್ಲಿ ಇನ್ನೊರ್ವ ಅತಿಥಿ ಹೈಕೋರ್ಟ್ ಹಿರಿಯ ಸರ್ಕಾರಿ ವಕೀಲ ಇಂದ್ರೇಶ ಕಾನೂನು ಬಳಕೆ, ನಿಯಮ ಮತ್ತು ವಿಶೇಷ ಅಧಿಕಾರಗಳ ಕುರಿತು ಉಪನ್ಯಾಸ ನೀಡಿದರು. ಉತ್ತರ ವಲಯ ಪೆÇಲೀಸ್ ಮಹಾನಿರೀಕ್ಷಕ ಭಾಸ್ಕರರಾವ್ ಉಪಸ್ಥಿತರಿದ್ದರು. ಉತ್ತರ ವಲಯದ ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳ ಎಲ್ಲ ಎಸ್‍ಪಿ, ಡಿಸಿಪಿ, ಡಿಎಸ್‍ಪಿ ಮತ್ತು ಪೆÇಲೀಸ್ ನಿರೀಕ್ಷಕರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here