ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಃ ಸಂತೋಷ ಜಕ್ಕಪ್ಪನವರ

0
53
loading...

ಗದಗ 13: ಯಾವುದೇ ಕ್ರೀಡೆಯಾಗಿರಲಿ ಅಲ್ಲಿ ಸ್ಪರ್ಧಾಳುಗಳು ಸಮಾನ ಮನಸ್ಸಿನಿಂದ ಮತ್ತು ಕ್ರೀಡಾಮನೋಭಾವದಿಂದ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಧಾರವಾಡ ಲೋಕಸಭಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ ಜಕ್ಕಪ್ಪನವರ ನುಡಿದರು.

ಅವರು ತಾಲೂಕಿನ ನಾಡಕವಿಯ ಹುಟ್ಟೂರಾದ ಹುಯಿಲಗೋಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಯುವಕ ಮಂಡಳಿ ಶ್ರೀ ದುರ್ಗಾದೇವಿ ಜೀರ್ಣೋದ್ಧಾರ ಸೇವಾ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರ ಸಂಯೋಗದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ದೇಹದಾಡ್ರ್ಯ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಅಶೋಕ ಬೆಳಗಟ್ಟಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡೆಗಳು ಮೇಲಿಂದ ಮೇಲೆ ನಡೆದರೆ ಯುವಕರಿಗೆ ಒಂದು ಉತ್ತಮ ಸ್ಪೂರ್ತಿ ನೀಡಿದಂತಾಗುತ್ತದೆ ಎಂದು ನುಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂತಹ ವಿದೇಶ ಕ್ರೀಡೆಗಳು ನಡೆದರೆ ಅದರಲ್ಲಿರುವ ರೀತಿ ನೀತಿಗಳು ಮತ್ತು ನಿಯಮಗಳು ನಮ್ಮ ದೈಹಿಕ ಶಿಕ್ಷಕರಿಗೆ ಮತ್ತು ಯುವ ಜನರಿಗೆ ತಿಳಿಯುತ್ತವೆ. ಅದರಂತೆಯೇ ಉತ್ತಮ ದೇಹಾರೋಗ್ಯ ಹೊಂದಲು ಇಂತಹ ಕ್ರೀಡೆಗಳ ಅವಶ್ಯಕತೆ ಇದೆ ಎಂದು ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ ಕಾಳೆಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವೇದಿಕೆಯ ಮೇಲೆ ಮಾಜಿ ಸೈನಿಕರಾದ ಎಂ.ಎಂ.ಕಡಿಯವರ, ಗ್ರಾಮ ಪಂಚಾಯತ ಸದಸ್ಯರಾದ ಟಿಪ್ಪುಸಾಬ ನದಾಫ್, ರಮೇಶ ಬೆಳಗಟ್ಟಿ, ಸುಧೀಂದ್ರ ಗುಡಿ, ಕನಕಪ್ಪ ಉರಕನವರ, ಶರಣಪ್ಪ ಕಡಿಯವರ, ಮುತ್ತಣ್ಣ ಮುಶಿಗೇರಿ, ಪವನ ನವಲೆಕರ, ರಾಜೇಶ ಮುಟಗಾರ, ಬಸಯ್ಯ ಪಸಗಿಮಠ, ಕೊಟ್ರೇಶ ಕಡಿಯವರ, ರವಿ ಕರಬಸಣ್ಣವರ, ಸಣ್ಣಮಲಕಪ್ಪ ಕಾಳೆ, ಫಕೀರಪ್ಪ ಜಂಬಲದಿನ್ನಿ, ಮನೋಹರ ಕಡಿಯವರ ಹಾಗೂ ಅಂಬೇಡ್ಕರ ಯುವಕ ಮಂಡಳಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮೊದಲಿಗೆ ಶರೀಪ ಬಿಳೆಯಲಿ ತಂಡದವರಿಂದ ಕ್ರಾಂತಿ ಗೀತೆಗಳು ಮತ್ತು ಕುಮಾರ ಗವಿಸಿದ್ದಯ್ಯ ಹಳ್ಳಿಕೇರಿಮಠ ಇವರಿಂದ ಜಾನಪದ ಕಾರ್ಯಕ್ರಮ ಮೂಡಿಬಂದವು. ದೇಹದಾಡ್ರ್ಯ ಸ್ಪರ್ಧೆಯ ನಿರ್ಣಾಯಕರಾಗಿ ಶ್ರೀಯುತ ಶಂಕರ ಶಿಂಧೆ, ವಾಸುದೇವ ಹುಣಸೀಮರದ, ಬಸಯ್ಯ ಪಸಗಿಮಠ ಕಾರ್ಯನಿರ್ವಹಿಸಿದರು.
ಬಸವರಾಜ ಈರಣ್ಣವರ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರೆ. ಮಿಲಿಂದ ಕಾಳೆ ವಂದಿಸಿದರು.

loading...

LEAVE A REPLY

Please enter your comment!
Please enter your name here