ತುಂಗಭದ್ರಾ ನದಿನೀರು ಕಲುಷಿತ ಕರವೇ ಪ್ರತಿಭಟನೆ.

0
20
loading...

ಕೊಪ್ಪಳ,ಅ,17: ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾದ ಕುಡಿಯಲೂ ಸಹಾ ಯೋಗ್ಯವಲ್ಲದ ರೀತಿಯಲ್ಲಿ ಕಲುಷಿತವಾದ ಹಾಗೂ ಹರಿಸು ಬಣ್ಣಕ್ಕೆ ತಿರುಗಿರುವ ತುಂಗಭದ್ರಾ ನದಿಯನ್ನು ಶುದ್ಧೀಕರಣ ಮಾಡುವುದರೊಂದಿಗೆ ತ್ಯಾಜ್ಯವನ್ನು ನೇರವಾಗಿ ನದಿಗೆ ಹರಿಬಿಟ್ಟು ನದಿಯ ನೀರು ಕಲುಷಿತವಾಗುವುದಕ್ಕೆ ಕಾರಣವಾದ ನದಿಪಾತ್ರದಲ್ಲಿರುವ ಕಾರ್ಖಾನೆಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು ಕರವೇ (ಪ್ರವೀಣಕುಮಾರ ಶೆಟ್ಟಿ)ಬಣ ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಕೊಪ್ಪಳ, ರಾಯಚೂರು, ಬಳ್ಳಾರಿ ತ್ರಿವಳಿ ಜಿಲ್ಲೆಗಳಿಗೆ ಕೃಷಿ ಭೂಮಿ ಸೇರಿದಂತೆ ಇಲ್ಲಿನ ಜನರಿಗೆ ಜೀವಜಲವಾಗಿರುವ ತುಂಗಭದ್ರ ನದಿಯು ‘’ಗಂಗಾಸ್ನಾನ-ತುಂಗಾ ಪಾನ’’ ಎನ್ನುವ ನಾನ್ನುಡಿಯಂತೆ ಜೀವ ರಕ್ಷಕ ಜ¯ವಾಗಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟಿನಿಂದ ಮೂರು ಜಿಲ್ಲೆಗಳಿಗೆ ನೀರು ಪೂರೈಸುತ್ತಿದ್ದು ಕಳೆದ ಮೂರು ದಿನಗಳಿಂದ ಆಣೆಕಟ್ಟಿನ ನೀರು ಹಸಿರು ಬಣ್ಣಕ್ಕೆ ಬಂದಿದ್ದು ನೀರಿನಲ್ಲಿರುವ ಜಲಚರಗಳು ಸಾಯುತ್ತಿವೆ. ಇದೇ ನೀರನ್ನು ಅವಲಂಬಿಸಿರುವ ಕೊಟ್ಯಾಂತರ ಜನರಿಗೆ ಕುಡಿಯುವ ನೀರಿನ ಕ್ಷಾಮವು ತಲೆದೋರಿದೆ. ಸುತ್ತಲೂ ಸಂಪದ್ಬವರಿತ ನೀರಿನ ಹರಿವಿದ್ದರೂ ಕುಡಿಯುವ ನೀರಿಗೆ ಬರ ಕಾಡುತ್ತಿದೆ.ರೈತರು ಹೊಲಗದ್ದೆಗಳಿಗೆ ಈ ನೀರನ್ನು ಹರಿಸಿದಾಗ ಬೆಳೆಗಳಿಗೆ ವಿವಿದ ರೀತಿಯ ರೋಗ ಬಾಧೆಗಳು ಬರುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯಾಧ್ಯಕ್ಷ ಆರ್.ವಿಜಯ ಕುಮಾರ್, ಕಾರ್ಯಕರ್ತರಾದ
ಗಿರಿಶಾನಂದ ಜ್ಞಾನಸುಂದರ್, ಮೊದ್ದೀನ್    , ಅರ್ಜುನ ನಾಯಕ, ದಯಾನಂದ ಸ್ವಾಮಿ ಬೀಬಿಜಾನ್,    ನವಾಬ್ , ರಮೇಶ ನಾಯಕ್, ಮಾರುತಿ ಹಡಪದ, ಶಂಕರ್ ಪೂಜಾರ್,ಅಂಜಿ ಭೋವಿ,ಭೀಮಪ್ಪ ಹೊಸಕನಕಾಪುರ     ಬಸವರಾಜ,ಲಕ್ಷ್ಮಣ ಯಾದವ್,ಹನುಮಂತ ಬೂದುಗುಂಪಾ, ಭೀಮ್ ಸಿಂಗ್,ಲಕ್ಷ್ಮಮ್ಮ, ಎಂ.ಕಾರ್ತೀಕ್      ಹುಲುಗಪ್ಪ, ಖಾದರ್ ಸಾಬ್,ಶರಣಪ್ಪ ಪಲ್ಲವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here