ಕಾಲ್ಪನಿಕ ವೇತನ ಕುರಿತಾದ ದಾಖಲೆಗಳಲ್ಲಿನ ಗೊಂದಲಗಳಿಗೆ ಮಾಹಿತಿ ನೀಡಲು ವಿನಂತಿ

0
31
loading...

ಗದಗ 10:  ಕಾಲ್ಪನಿಕ ವೇತನ ಬಡ್ತಿಯು ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸಿಬ್ಬಂದಿಗಳ ಅನುದಾನರಹಿತ ಸೇವೆಯನ್ನು ವೇತನ, ರಜಾ, ಪಿಂಚಣಿ, ಇತರೆ ಸೌಲಭ್ಯಗಳಿಗೆ ಪರಿಗಣಿಸದೇ ಇರುವುದಕ್ಕೆ ಸಂಬಂಧಿಸಿದ ಈ ಸಮಸ್ಯೆಗೆ ನಿಖರವಾದ ದಾಖಲೆಗಳ ಕೊರತೆ ಎದ್ದುಕಾಣುತ್ತದೆ. ಆ ಹಿನ್ನಲೆಯಲ್ಲಿ ಮಾಹಿತಿ ಒದಗಿಸಲು ಕರ್ನಾಟಕ ರಾಜ್ಯ ಪದವಿಪೂರ್ವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರೊ. ಸತೀಶ ಪಾಸಿ ವಿನಂತಿಸಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಇತ್ತಿಚೆಗೆ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾಲ್ಪನಿಕ ಸಮಸ್ಯೆ ನಿವಾರಣಾ ಸಮಿತಿ ಸಭೆಯಲ್ಲಿ ನಿಖರವಾದ ಮಾಹಿತಿ ದೊರೆಯದ ಹಿನ್ನಲೆಯಲ್ಲಿ ಸಭೆ ನಿಧಿಷ್ಟ ನಿರ್ಣಯ ಕೈಗೊಳ್ಳಲು ವಿಫಲವಾಗಿದೆ ಎಂದು ತಿಳಿದುಬಂದಿದೆ ಆ ಹಿನ್ನಲೆಯಲ್ಲಿ 2014ರ ಜನೆವರಿಯಲ್ಲಿ ನಡೆದ ವಿದಾನ ಮಂಡಲ ಅಧಿವೇಶನದಲ್ಲಿ ಸಂದರ್ಭದಲ್ಲಿ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ನಿಯಂತ್ರಣ ವಿಧೇಯ 2014 ರ ಪರ್ಯಾಯ ಲೋಚನ ಅಂಗೀಕಾರ ಕುರಿತ ಚರ್ಚೆಗಳ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಆರ್.ವ್ಹಿ.ದೇಶಪಾಂಡೆಯವರು ಮಾಹಿತಿ ನೀಡಿ 315 ಅನುದಾನಿತ ಪದವಿ ಕಾಲೇಜುಗಳಲ್ಲಿ 3466 ಸಿಬ್ಬಂದಿ 10 ಇಂಜಿನೀಯರಿಂಗ್ 44 ಪಾಲಿಟೆಕ್ನಿಕ್‍ನ 1977 ಸಿಬ್ಬಂದಿ ಒಟ್ಟು  ಉನ್ನತ ಶಿಕ್ಷಣದಲ್ಲಿ 5416 ಜನ ಉಪನ್ಯಾಸಕರು ಹಾಗೂ ಶಿಕ್ಷಕೇತರರು, ಕೆಲಸ ಮಾಡುತ್ತಿದ್ದಾರೆ. ಹಾಗೂ ಪ್ರಾಥಮಿಕ, ಮಾದ್ಯಮಿಕ, ಪದವಿಪೂರ್ವ ಕಾಲೇಜುಗಳಲ್ಲಿ 62229 ಜನರು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ 4300 ಕೋಟಿಯಷ್ಟು ಸರ್ಕಾರಕ್ಕೆ ಹೊರೆ ಬೀಳುತ್ತದೆ ಎಂದು ಹೇಳಿರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಜೊತೆಗೆ ಜನೆವರಿಯಲ್ಲಿ 14 ಕ್ಕೂ ಹೆಚ್ಚು ಶಿಕ್ಷಕ ಸಂಘಟನೆಗಳು 280 ರಿಂದ 300 ಕೋಟಿ ಹಣ ನೀಡಿದರೆ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಯುವುದಾಗಿ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ಶಿಕ್ಷಕ ಸಂಘಟನೆ ಪ್ರತಿನಿಧಿಗಳು ಹಾಗೂ ಪದವೀಧರ ಪ್ರತಿನಿಧಿಗಳು ವಿದಾನಪರಿಷತ್ತಿನಲ್ಲಿ ವಿಧೇಯಕ ಪಾಸಾಗುವುದಕ್ಕೆ ಸಹಕರಿಸಿದ್ದನ್ನು ಸಹ ಇಲ್ಲಿ ಗಮನಿಸಬಹುದು ಹೀಗಾಗಿ ಹಲವಾರು ಗೊಂದಲಗಳು ಸೃಷ್ಠಿಯಾಗಿವೆ. ಆ ಹಿನ್ನಲೆಯಲ್ಲಿ ದಿ:26ರಂದು ನಡೆದ ಸಭೆಯಲ್ಲಿ ನಿರ್ಧಿಷ್ಟ ಮಾಹಿತಿ ತರಿಸಿಕೊಳ್ಳಲು ಪ್ರಾಥಮಿಕ ಹಂತದಿಂದ ಪದವಿ ಹಂತದಿಂದ ಪದವಿ ಹಂತದ ಶಿಕ್ಷಣ ಇಲಾಖೆಗಳಲ್ಲಿ ಮಾಹಿತಿ ನೀಡಲು ಸೂಚಿಸಿದ್ದಾಗಿಯೂ ಸಂಘದ ಗಮನಕ್ಕೆ ಬಂದಿದೆ ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಸಮಿತಿಯ ಅಧ್ಯಕ್ಷರಾದ ಬಸವರಾಜ ಹೊರಟ್ಟಿಯವರಿಗೆ ಮನವಿ ಸಲ್ಲಿಸಿ ನಿಖರವಾದ ದಾಖಲೆಗಳನ್ನು ನೀಡಲಾಗಿದೆ. ಕಾಲ್ಪನಿಕ ವೇತನಕ್ಕೆ ಅರ್ಹರಾಗುವ ಸಿಬ್ಬಂದಿಯು ತಮ್ಮ ನೋವು ಸಮಸ್ಯೆ ಮತ್ತು ಇನ್ನಿತರ ಮಾಹಿತಿ ಕುರಿತು ವಿವರಣೆ ನೀಡಲು ಬಸವರಾಜ ಹೊರಟ್ಟಿಯವರು ವಿವಿಧ ಸಂಘಟನೆಗಳಿಗೆ ಕರೆ ಸಹ ನೀಡಿದ್ದಾರೆ. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾಲ್ಪನಿಕ ವೇತನಕ್ಕೆ ಅರ್ಹರಾಗಿರುವ ಸಿಬ್ಬಂದಿ ಸಲಹೆ ಸೂಚನೆ ನೀಡಲು ಮಾಹಿತಿಯನ್ನು ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರ ಜನಸಂಪರ್ಕ ಕಛೇರಿ ಹಳೇ ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿರುವ ಕಛೇರಿಗೆ ಮಾಹಿತಿ ನೀಡಲು ಪ್ರೊ. ಸತೀಶ ಪಾಸಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

loading...

LEAVE A REPLY

Please enter your comment!
Please enter your name here