ಲೋಕಾಯುಕ್ತ ದಾಳಿ : ಅಧಿಕಾರಿ ವಿಚಾರಣೆ

0
9
loading...

ಚಿಕ್ಕೋಡಿ 19: ಇಲ್ಲಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ವಿ.ಶ್ರೀನಿವಾಸ ಅವರ ಬಾಡಿಗೆ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಮುಂಜಾನೆ 6 ಗಂಟೆಗೆ ಲೋಕಾಯುಕ್ತ ಸಿಪಿಆಯ್ ಗೋಪಾಲಕೃಷ್ಣಗೌಡಾ ನೇತೃತ್ವದಲ್ಲಿ 9 ಜನ ಲೋಕಾಯುಕ್ತ ಪೊಲೀಸರು ಚಿಕ್ಕೋಡಿಯ ನಿವಾಸದ ಮೇಲೆ ದಾಳಿ ನಡೆಸಿ ಸುಮಾರು 3 ಗಂಟೆಗಳ ಕಾಲ ದಾಖಲೆಗಳನ್ನು ಪರಶೀಲನೆ ನಡೆಸಿ ಸಾರಿಗೆ ಸಂಸ್ಥೆಯ ಡಿಸಿ ಶ್ರೀನಿವಾಸ ಅವರನ್ನು ವಿಚಾರಣೆ ನಡೆಸಿದರು.
ಡಿಸಿ ಅವರಿಗೆ ಸೇರಿದ ಒಂದು ಲ್ಯಾಪ್ ಟ್ಯಾಪ್ ಹಾಗೂ ಡೈರಿಯನ್ನು ಲೋಕಾಯುಕ್ತ ಪೊಲೀಸರು ವಶಕೆ ಪಡೆದುಕೊಂಡು ಪಟ್ಟಣದ ಹೊರಭಾಗದಲ್ಲಿರುವ ವಿಭಾಗೀಯ ಕಛೇರಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿದರು.
ಬಿ.ವಿ.ಶ್ರೀನಿವಾಸ ಅವರಿಗೆ ಸೇರಿದ ಮೈಸೂರು ನಿವಾಸ ಹಾಗೂ ತೋಟದ ಮನೆಯ ಮೇಲೆ ಎಕ ಕಾಲಕ್ಕೆ ದಾಳಿ ನಡೆಸಿರುವುದಾಗಿ ಲೋಕಾಯುಕ್ತ ಪೊಲೀಸರು ತಿಳಿಸಿದರು.

loading...

LEAVE A REPLY

Please enter your comment!
Please enter your name here