ಸರಕಾರದ ಭ್ರಷ್ಟ ಆಡಳಿತವನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ

0
18
loading...

 

ನಿಪ್ಪಾಣಿ  31:  –  ಸಮರ್ಪಕ ವಿದ್ಯುತ್ ಪೊರೈಕೆ,ಪಡಿತರ ಚೀಟಿ ವಿತರಣೆ ಹಾಗೂ ನಿಪ್ಪಾಣಿ ತಾಲೂಕು ಘೊಷಣೆ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ 16 ತಿಂಗಳ ರಾಜ್ಯ ಸರಕಾರದ ಭ್ರಷ್ಟ ಆಡಳಿತವನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ವತಿಯಿಂದ ಬುಧವಾರದಂದು ತೀವ್ರ ಪ್ರತಿಭಟನೆ ನಡೆಸಲಾಯಿತು.ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ.ತಿಂಗಳೊಳಗಾಗಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಶಹರ ಹಾಗೂ ಗ್ರಾಮೀಣ ಬಿಜೆಪಿ ಘಟಕದ ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.ಮೆರವಣಿಗೆಯುದ್ದಕ್ಕೂ ರಾಜ್ಯ ಸರಕಾರದ ವಿರುದ್ಧದ ಘೋಷಣೆಗಳು ಮುಗಿಲು ಮುಟ್ಟಿದ್ದವು.ಹೆಸ್ಕಾಂ ಕಚೇರಿ ಮತ್ತು ತಹಸೀಲ್ದಾರ ಕಚೇರಿಗಳಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ,ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಜನರ ವಿಶ್ವಾಸದ್ರೋಹ ಮಾಡಿದೆ.24 ಗಂಟೆಗಳ ಕಾಲ ವಿದ್ಯುತ್ ಪೊರೈಕೆ ಭರವಸೆ ನೀಡಿದ್ದರೂ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಕೇವಲ 3 ಗಂಟೆಗಳ ಕಾಲ ಥ್ರೀಫೇಸ್ ವಿದ್ಯುತ್ ಪೊರೈಸಿ ರೈತರಿಗೆ ಅನ್ಯಾಯವೆಸಗಲಾಗಿದೆ.ಉಸುಕಿನ ಮೇಲೆ ನಿರ್ಬಂಧ ಹ್ಭೆರಿದ್ದರಿಂದ ಬಡ ಜನರು ಮನೆ ನಿರ್ಮಿಸುವುದು ದುಸ್ತರವಾಗಿದೆ.ಅನೇಕರ ಪಡಿತರ ಚೀಟಿ ಬಂದ್ ಮಾಡಲಾಗಿದ್ದು,ಅನ್ಯಭಾಗ್ಯ ಯೋಜನೆ ಹಳ್ಳ ಹಿಡಿದಿದೆ.ಸೀಮೆಎಣ್ಣೆಯನ್ನೂ ನೀಡಲಾಗುತ್ತಿಲ್ಲ.ನಿಪ್ಪಾಣಿ ತಾಲೂಕು ಮಾಡುವ ನಿಟ್ಟಿನಲ್ಲಿಯೂ ಕೂಡ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು.ಮಾಜಿ ಶಾಸಕ ಸುಭಾಷ ಜೋಶಿ ಮಾತನಾಡಿ,ಸಿಎಂ ಮತ್ತು ವಿದ್ಯುತ್ ಸಚಿವರ ಮಧ್ಯದ ಕಲಹಕ್ಕೆ ಸಾಮಾನ್ಯ ನಾಗರೀಕರು ಬೆಲೆ ತೇರಬೇಕಾಗಿದೆ.ತಮ್ಮಲ್ಲಿಯ ಮತಬೇಧಗಳನ್ನು ಬದಿಗಿಟ್ಟು ಸಮರ್ಪಕ ವಿದ್ಯುತ್ ಮತ್ತು ಪಡಿತರ ಚೀಟಿ ವಿತರಣೆಗೆ ಗಮನ ಹರಿಸಬೇಕು.ತಪ್ಪಿದ್ದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.ಹಾಲಸಿದ್ಧನಾತ ಕಾರಖಾನೆ ವೈಸ್ ಚೇರಮನ್ ರಾಜು ಪಾಟೀಲ,ಜಯವಂತ ಭಾಟ್ಲೆ,ಪವನ ಪಾಟೀಲ,ನಗರಸಭೆ ಅಧ್ಯಕ್ಷೆ ಭಾರತಿ ಘೊರ್ಪಡೆ,ಸ್ಥಾಯಿ ಸಮಿತಿ ಅಧ್ಯಕ್ಷ ದೀಪಕ ಮಾನೆ,ನಗಸರಭೆ ಸದಸ್ಯ ದತ್ತಾ ಜೋತ್ರೆ,ವಿಜಯ ಟವಳೆ,ಅಪ್ಪಾಸಾಹೇಬ ಜೊಲ್ಲೆ,ಜಯಾನಂದ ಜಾಧವ,ಪ್ರಣವ ಮಾನವಿ ಮತ್ತು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here