ಸಾಗವಾನಿ ಮರಗಳ ಮಾರಣ ಹೋಮ

0
20
loading...

ಮುಂಡಗೋಡ: ಲಕ್ಷಾಂತರ ಮೌಲ್ಯದ ಬೃಹತ ಗಾತ್ರದ 5 ಸಾಗವಾನಿ ಮರಗಳ ಮಾರಣ ಹೋಮವಾದ ಘಟನೆ ತಾಲೂಕಿನ ಕಾತೂರ ವಲಯ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಆಂಚಿನ ರಾಮಾಪುರ ಅರಣ್ಯದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಈ ಕೃತ್ಯ ನಡೆದಿದ್ದು, ಬುಧವಾರ ಬೆಳಗ್ಗಿನ ಜಾವ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂಧಿಗಳು ಸ್ಥಳಕ್ಕೆ ಬೇಟಿ ನೀಡಿ ತರಾ ತುರಿಯಲ್ಲಿ ಪ್ರಕರಣ ದಾಖಲಿಸಿ ಬುಡಚಿ ಮೇಲೆ ಪ್ರಕರಣದ ಸಂಖ್ಯೆ ಬರೆದು ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದ್ದಾರಲ್ಲದೆ,  ಈ ಕೃತ್ಯ ನಡೆದಿರುವ ಬಗ್ಗೆ ಯಾವುದೇ ಕುರುಗಳು ಪತ್ತೆಯಾಗದಂತೆ ಸ್ಥಳದಲ್ಲಿ ಕಾಡುಗಳ್ಳರು ಬಿಟ್ಟು ಹೋದಂತಹ ಟೊಂಗೆ, ಘಂಟಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಕಡಿಯಲಾದ ಮರಗಳನ್ನು ಸ್ಥಳದಲ್ಲಿಯೇ ಗರಗಸದಿಂದ ತುಂಡರಿಸಿ ಸಾಗಿಸಿದ ಸಾಕಷ್ಟು ಕುರುಹುಗಳಿವೆ. ಹಗಲು ರಾತ್ರಿ ನಿರಂತರ ನೂರಾರು ವಾಹನಗಳು ಸಂಚರಿಸುವ ಹೆದ್ದಾರಿ ಪಕ್ಕ ದಲ್ಲಿಯೇ ಇಂತಹ ಕೃತ್ಯ ನಡೆದಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿ ನಿರ್ಲಕ್ಷೆ ಎತ್ತಿ ತೋರುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ವಲಯ ಅರಣ್ಯಾಧಿಕಾರಿ ರಮೇಶ ತೆಗ್ಗಿನಮನಿ ಅವರನ್ನು ಪ್ರಶ್ನಿಸಿದಾಗ, ಈ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ತಕ್ಷಣ ಪತ್ತೆ ಹಚ್ಚಿ ಪ್ರಕರಣದಲ್ಲಿ ಭಾಗಿಯಾದವರನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆ ಭಾಗದ ಉಪ ವಲಯ ಅರಣ್ಯಾಧಿಕಾರಿಗೆ ಸೂಚಿಸಲಾಗಿದ್ದು, ಒಂದಾನು ವೇಳೆ ಪ್ರಕರಣ ಪತ್ತೆ ಹಚ್ಚುವಲ್ಲಿ ವಿಪಲರಾದರೆ ಸ್ಥಳೀಯ ಉಪ ವಲಯ ಅರಣ್ಯಾಧಿಕಾರಿಯನ್ನು ಹೊಣೆಂiÀiನ್ನಾಗಿಸಿ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here