ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ

0
28
loading...

ಮರಿಯಮ್ಮನಹಳ್ಳಿ ಅ 10: ಹದಿಹರೆಯದ ವಯಸ್ಸು ಲಗಾಮು ಇಲ್ಲದ ಕುದುರೆಯಿದ್ದಂತೆ, ಅದನ್ನು ಹರೆಯ ವಯಸ್ಸಿನಲ್ಲಿ ಹತೋಟಿಯಲ್ಲಿಡದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಕನ್ನಡ ಉಪನ್ಯಾಸಕ ಪ್ರಶಾಂತ್ ನೀರಗಂಟಿ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿಯ ಪ್ರಿಯದರ್ಶಿನಿ ಸ್ವತಂತ್ರ ಪ ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರದಲ್ಲಿ ಉಪನ್ಯಾಸ ನೀಡುತ್ತಾ ವಿಶೇಷವಾಗಿ ಈ ವಯಸ್ಸಿನಲ್ಲಿ ಯುವಕರ ಮನಸ್ಸು ಚಂಚಲದಿಂದ ಕೂಡಿರುತ್ತದೆ. ಏಕಾಗ್ರತೆಯ ಕೊರತೆ ಹೆಚ್ಚಿದ್ದು, ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಪ್ರಬಲ ಆಸೆ ಹಾಗೂ ಹಠ. ಅನ್ಯ ಲಿಂಗದ ಆಕರ್ಷಣೆ, ಮೊಂಡುತನದ ಧೋರಣೆ ಕಂಡುಬರುತ್ತದೆ. ಆದಕಾರಣ ಯುವಕರು ಮನಸ್ಸಿನ ನಿಗ್ರಹ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಉಪನ್ಯಾಸಕ ಹೆಚ್‍ಎಂ ರಾಜಶೇಖರ ಮಾತನಾಡಿ, ಮನಸ್ಸಿನ ಮೇಲೆ ಹತೋಟಿ ಇದ್ದಾಗ ಮಾತ್ರ ಇದ್ದಾಗ ಮಾತ್ರ ಇದ್ದಾಗ ಮಾತ್ರ ಇದ್ದಾಗ ಮಾತ್ರ ಸಾಧನೆಗೆಳು ಪರಿಗಣನೆಗೆ ಬರುತ್ತವೆ. ಕಾರಣ ಯುವಕರು ಸಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಂಡು ಹರೆಯದ ವಯಸ್ಸನ್ನು ಉತ್ಸಾಹಪೂರ್ವಕವಾಗಿ ಕಳೆಯಿರಿ ಎಂದು ಸಲಹೆ ನೀಡಿದರು. ಇತ್ತೀಚೆಗಿನ ಯುವ ಜನಾಂಗ ಸಿನಿಮಾ ಹಾಗೂ ಟಿ ವಿ ಧಾರಾವಾಹಿಗಳ ಪ್ರಭಾವಕ್ಕೊಳಗಾಗಿ ಗುಂಪುಗಾರಿಕೆ, ಡೇಟಿಂಗ್ ಹಾಗೂ ಇನ್ನಿತರೆ ಕೆಟ್ಟ ಚಟಗಳಿಗೆ ಒಳಗಾಗುತ್ತಿದ್ದಾರೆ. ಕಾರಣ ಆದಷ್ಟು ಯುವಕರು ಈ ರೀತಿಯ ಹೊರಗಿನ ಒತ್ತಡಕ್ಕೆ ಒಳಗಾಗದೇ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ಎಂ.ಅಶೋಕ, ಕಾರ್ಯಕ್ರಮಾಧಿಕಾರಿ ಪಿ. ರಾಮಚಂದ್ರ, ಉಪನ್ಯಾಸಕ ಎಸ್ ನವೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಬಿರಾರ್ಥಿ ಶ್ರೀಲಕ್ಷ್ಮಿ ನಿರೂಪಿಸಿ, ಸಿಮ್ರಾನ್ ಸ್ವಾಗತಿಸಿದರು. ಶಿಬಿರಾರ್ಥಿಗಳಾದ ಎಂ ಅನುಷಾ ಪ್ರಾರ್ಥಿಸಿ, ಜಿ ಅಕ್ಷತಾ ದೈನಂದಿನ ಚಟುವಟಿಕೆಗಳ ವರದಿಯನ್ನು ವಾಚಿಸಿದರು.

loading...

LEAVE A REPLY

Please enter your comment!
Please enter your name here