ಅಥನಿ ಜಿಲ್ಲಾ ಕೇಂದ್ರವಾಗಲಿ ; ಶಾಸಕ ಸವದಿ

0
36
loading...

ಅಥಣಿ 02: ಅಥಣಿ ಜಿಲ್ಲಾ ಕೇಂದ್ರವಾಗಬೇಕೆಂದು ಶಾಸಕ ಲಕ್ಷ್ಮಣ ಸವದಿ ಸರ್ಕಾರವನ್ನು ಒತ್ತಾಯಿಸಿದರು.ತಾಲೂಕಾ ಆಡಳಿತದಿಂದ ಏರ್ಪಡಿಸಿದ 59ನೇ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ. ಮಾತನಾಡುತ್ತ ಈಗಾಗಲೇ ಈ ವಿಷಯವನ್ನು ನಾನು ಸರ್ಕಾರದ ಮೇಲೆ ಒತ್ತಾಯ ಮಾಡಿದ್ದೇನೆ. ಅಥಣಿ ಜಿಲ್ಲಾ ಕೇಂದ್ರಕ್ಕೆ ಅಥಣಿ, ಕಾಗವಾಡ, ರಾಯಬಾಗ, ಕುಡಚಿ,  ತೇರದಾಳ ಮತ್ತು ಜಮಖಂಡಿ ವಿಧಾನಸಭಾ ಮತಕ್ಷೇತ್ರಗಳನ್ನು ನಮ್ಮ ಜಿಲ್ಲೆಯ ವ್ಯಾಪ್ತಿಗೆ ಸೇರಿಸಬೇಕೆಂದು ಆಗ್ರಹಿಸಿದರು. ಏಕೆಂದರೆ ಈ ಎಲ್ಲಾ ಮತಕ್ಷೇತ್ರಗಳು 40ಕಿ.ಮೀ ಅಂತರದಲ್ಲಿದ್ದು ಸೂಕ್ತ ಸ್ಥಳವಾಗಿರುವ ಅಥಣಿ ಜಿಲ್ಲಾಕೇಂದ್ರಕ್ಕೆ ಯೋಗ್ಯವಾಗಿದೆ.ಅಖಂಡ ಕರ್ನಾಟಕಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕರ್ನಾಟಕವನ್ನು ಒಡೆಯುವದೂ ಬೇಡ ನಮ್ಮ ಉತ್ತರ ಕರ್ನಾಟಕ ಆಗಿರಬಹುದು, ಹೈದ್ರಾಬಾದ ಕರ್ನಾಟಕ ಆಗಿರಬಹುದು ಅಭಿವೃದ್ಧಿಯಲ್ಲಿ ಇವುಗಳಿಗೆ ಅನ್ಯಾಯವಾಗಿದೆ.ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರ ಪ್ರಯತ್ನಿಸಬೇಕೆಂದು ಈ ವೇದಿಕೆಯ ಮೂಲಕ ಆಗ್ರಹಿಸುತ್ತೇನೆ.ಸಿದ್ರಾಮಯ್ಯ ಸರ್ಕಾರದ ಅವಧಿಯಲ್ಲಿ ಸುವರ್ಣಗ್ರಾಮೋದ್ಯಯದಂತ ಅನೇಕ ಯೋಜನೆಗಳನ್ನು ಕೈಬಿಟ್ಟಿದ್ದರಿಂದ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅಭಿವೃದ್ಧಿಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಚರ್ಚಿಸುವುದಕ್ಕಾಗಿಯೇ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಲಾಗಿದೆ. ಅಲ್ಲಿ ಸರ್ಕಾರ ಅಧಿವೇಶನ ನಡೆಸಿ ಈ ಭಾಗದ ಸಮಸ್ಯೆಗಳಿಗೆ ಚರ್ಚೆ ಮಾಡಿ ಒಂದು ಪರಿಹಾರ ಕೊಡಬೇಕು ಎಂದು ಅಗ್ರಹಿಸಿದರು.ಮುಖ್ಯ ಅತಿಥಿ ನ್ಯಾಯವಾದಿ, ನಾಟಕಕಾರ ಕೆ.ಎಲ್ ಕುಂದರಗಿ ಮಾತನಾಡಿ ಯಾವ ಭಾಷೆ ನಮ್ಮ ಹೃದಯಕ್ಕೆ ತಟ್ಟುತ್ತದೆಯೋ ಅದುವೇ ಕನ್ನಡ ಭಾಷೆ. ಶಾಸಕ ಉಮೇಶ ಕತ್ತಿಯವರ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿದರು. ಎಮ್.ಇ.ಎಸ್ ಶಾಸಕ ಸಂಭಾಜಿ ಪಾಟೀಲರವರ ಉದ್ಧಟತನದ ಹೇಳಿಕೆಗೆ ತಕ್ಕ ಪಾಠವನ್ನು ನಾವೆಲ್ಲ ಕನ್ನಡಿಗರೂ ಕಲಿಸಬೇಕಾಗಿದೆ ಎಂದು ಹೇಳುತ್ತ ಕನ್ನಡದ ವಿವಿಧ ಸಂಘಟನೆಗಳು ಗಡಿಭಾಗದ ಕನ್ನಡದ ಸ್ಥಿತಿಗತಿ ಕುರಿತು ಸರ್ವೇ ಮಾಡಬೇಕು ಎಂದು ಹೇಳುತ್ತ ಪಾಲಕರು ಮಕ್ಕಳಿಗೆ ಕನ್ನಡ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಕಲಿಯುವಂತೆ ಪ್ರೋತ್ಸಾಹ ಮಾಡಬೇಕೆಂದು ಹೇಳಿದರು.

ಇದೇವೇಳೆ ಅತಿಥಿಗಳಾದ ಅಪ್ಪಾಸಾಬ ಅಲಿಬಾದಿ, ವಾಮನ ಕುಲಕರ್ಣಿ, ಮಲ್ಲಿಕಾರ್ಜುನ ಕನಶೆಟ್ಟಿ, ಎಸ್.ಎಸ್ ಚೌಧರಿ ಮಾತನಾಡಿದರು.
ಈ ವೇಳೆ ತಾಲೂಕಾ ಆಡಳಿತದ ವತಿಯಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಸಾಹಿತಿ ವಾಮನ ಕುಲಕರ್ಣಿ ಮತ್ತು ಕರವೇ ಜಿಲ್ಲಾ ಕಾರ್ಯಾಧ್ಯಕ್ಷ ರಾವಸಾಬ ಐಹೊಳೆ ಸನ್ಮಾನ ಮಾಡಲಾಯಿತು.
ಅನಿಕೇತನ ಪ್ರೌಢ ಶಾಲೆಗೆ ಪ್ರೌಢ ಶಾಲೆಗೆ ಮತ್ತು ವಿದ್ಯಾವರ್ಧಕ ಪ್ರೌಢ ಶಾಲೆಗೆ , ಕೆ.ಎಲ್.ಇ ಆಂಗ್ಲ ಮಾಧ್ಯಮ ಮತ್ತು ಉಲ್ಫತ್ ಉರ್ದು ಶಾಲೆಗಳು ಒಳ್ಳೆಯ ರೂಪಕಗಳನ್ನು ನಿರ್ಮಿಸಿದ್ದಕ್ಕೆ ಅನುಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡಕೊಂಡವು. ಹಾಗೂ ಈ ಬಾರಿ ಕೃಷಿ ಇಲಾಖೆ ಸಿದ್ದಪಡಿಸಿದ ಕೃಷಿ ಮಾಹಿತಿಯ ರಥ ಮೆರವಣಿಗೆಯ ಆಕರ್ಷಣೆಯ ಕೇಂದ್ರವಾಗಿತ್ತು. ವಿವಿಧ ಕನ್ನಡ ಸಂಘಟನೆಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.
ತಹಶೀಲ್ದಾರ ಎಸ್.ಎಸ್ ಪೂಜಾರಿ, ಪುರಸಭೆ ಅಧ್ಯಕ್ಷ ದಿಲೀಪ ಲೋಣಾರಿ, ತಾ.ಪಂ ಅಧ್ಯಕ್ಷೆ ಭಾರತಿ ಕಾಂಬಳೆ, ಇಸ್ಮಾಯಿಲ್ ಗಡ್ಡೇಕರ, ಅಭಿಯಂತರ ಜಿ.ಎಸ್ ಬುರ್ಲಿ ಉಪಸ್ಥಿತರಿದ್ದರು. ಸ್ವಾಗತ ಬಿ.ಇ.ಓ ಎಸ್.ಎಸ್ ಚೌಧರಿ, ನಿರೂಪಣೆ ವಾಮನ ಕುಲಕರ್ಣಿ, ಕುಮಾರಿ ಲಕ್ಷ್ಮೀ ಲಂಗೋಟಿ ವಂದನಾರ್ಪಣೆ ಅರುಣ ಯಲಗುದ್ರಿ.
ಭವ್ಯ ಮೆರವಣಿಗೆ : ಬೆಳಿಗ್ಗೆ ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಭುವನೇಶ್ವರಿ ಮಾತೆಗೆ ಶಾಸಕ ಲಕ್ಷ್ಮಣ ಸವದಿ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾ¯ನೆ ನೀಡಿದರು. ನಂತರ ವಿವಿಧ ಶಾಲೆಯ ಮಕ್ಕಳು ಹಾಗೂ ಅವರು ನಿರ್ಮಿಸಿದ ವಿವಿಧ ರೂಪಕಗಳು ಅಂಬೇಡ್ಕರ ವೃತ್ತದಲ್ಲಿ ಸೇರಿ ಅಲ್ಲಿಂದ ಭವ್ಯ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆ ಮುಖ್ಯ ರಸ್ತೆಗಳಲ್ಲಿ ಹಾಯ್ದು ಭೋಜರಾಜ ಕ್ರೀಡಾಂಗಣದಲ್ಲಿ ಸಮಾರೋಪಗೊಂಡಿತು.

loading...

LEAVE A REPLY

Please enter your comment!
Please enter your name here