ಉಪವಿದ್ಯತ್ ಘಟಕ ಸ್ಥಾಪನೆಗೆ ಆದೇಶ : ಸ್ವಾಗತ

0
13
loading...

ನಿಪ್ಪಾಣಿ , 11: ಸ್ಥಳಿಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರಖಾನೆ ಸಾಮಥ್ರ್ಯ ವಿಸ್ತರಣೆ ಮತ್ತು ಉಪವಿದ್ಯುತ್ ಘಟಕ ಸ್ಥಾಪನೆಗೆ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ಮಧ್ಯಂತರ ತಡೆ ಆದೇಶ ನೀಡಿದ್ದಾರೆ ಎಂದು ಕಾರಖಾನೆ ಮಾಜಿ ಚೇರಮನ್ ಸುಕುಮಾರ ಪಾಟೀಲ ಬೂಧಿಹಾಳಕರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಆದೇಶದಿಂದಾಗಿ ರೈತರು 7 ಸಾವಿರ ರೂ.ಗಳ ಹೆಚ್ಚಿನ ಶೇರು ಮೊತ್ತವನ್ನು ಭರಿಸಬೇಕಾಗಿಲ್ಲ ಎಂದರು.
ನಿಯಮಾನುಸಾರ ಕಾರಖಾನೆ ವಾರ್ಷಿಕ ಸರ್ವ ಸಾಧಾರಣ ಸಭೆಯು ಸೆಪ್ಟಂಬರ್ 2014 ರಂದು ಜರುಗಿತ್ತು.ಸಾಮಥ್ರ್ಯ ವಿಸ್ತರಣೆ ಮತ್ತು ಉಪವಿದ್ಯುತ್ ಘಟಕ ಸ್ಥಾಪನೆಯಂತಹ ಅತ್ಯಂತ ಮಹತ್ವದ ವಿಷಯವಿದ್ದರೂ ಕೂಡ 19 ಜುಲೈ 2014 ರಂದೇ ತರಾತುರಿಯಲ್ಲಿ ವಿಶೇಷ ಸರ್ವ ಸಾಧಾರಣ ಸಭೆ ನಡೆಸಲಾಯಿತು.ಅಲ್ಲದೇ ಕಾನೂನುಬಾಹ್ಯವಾಗಿ ಸದಸ್ಯರ ಖೊಟ್ಟಿ ಹಾಜರಾತಿ ಸೃಷ್ಟಿಸಿ ವಿಷಯಕ್ಕೆ ಮಂಜೂರಾತಿ ಪಡೆಯಲಾಗಿದೆ.ಇದನ್ನು ಪ್ರಶ್ನಿಸಿ ಸಹಕಾರ ಸಂಘಗಳ ಕಾಯ್ದೆಯನ್ವಯ ಕೆಲ ಸದಸ್ಯರು ದಾವೆ ದಾಖಲಿಸಿದ್ದರು.2 ತಿಂಗಳುಗಳ ಕಾಲ ಜರುಗಿದ ವಿಚಾರಣೆಯಲ್ಲಿ ಕಾರಖಾನೆ ಚೇರಮನ್ ಬಾಬಾಸಾಹೇಬ ಸಾಸನೆ ಅವರು ಸೃಷ್ಟಿಸಿದ ಸದಸ್ಯರ ಖೊಟ್ಟಿ ಹಾಜರಾತಿ ಪುಸ್ತಕವನ್ನು ಸಾದರಪಡಿಸಲಾಗಿತ್ತು.ಅಲ್ಲದೇ ಕಳೆದ 3 ವರ್ಷಗಳಲ್ಲಿ ದಪ್ಪಟ್ಟುಗೊಂಡಿರುವ ಕಾರಖಾನೆ ವಾರ್ಷಿಕ ಬಡ್ಡಿ ವೆಚ್ಚ ಮತ್ತು ಕಬ್ಬು ನುರಿಸುವುದು ಹೆಚ್ಚಾಗದಿರುವುದನ್ನು ಕೂಡ ನ್ಯಾಯಾಲಯದ ಎದುರು ಪ್ರಸ್ತುತಪಡಿಸಲಾಗಿತ್ತು.19 ಜುಲೈ 2014ರ ವಿಶೇಷ ಸರ್ವ ಸಾಧಾರಣ ಸಭೆಯಲ್ಲಿ ಕೇವಲ 1400 ಸದಸ್ಯರು ಹಾಜರಿದ್ದರೂ,ಚೇರಮನ್ ಸಾಸನೆ ಅವರು 4915 ಸದಸ್ಯರು ಹಾಜರಿರುವ ಬಗ್ಗೆ ಖೊಟ್ಟಿ ದಾಖಲಾತಿಗಳನ್ನು ಜೋಡಿಸಿದ್ದಾರೆ.ಏಕೈಕ ಮಹಿಳಾ ಸದಸ್ಯೆಯೂ ಹಾಜರಿರದಿದ್ದರೂ ಕೂಡ 800ಕ್ಕೂ ಹೆಚ್ಚು ಮಹಿಳಾ ಸದಸ್ಯರ ಉಪಸ್ಥಿತಿ ತೋರಿಸಲಾಗಿದೆ.10 ಖೊಟ್ಟಿ ಹಾಜರಾತಿ ಪುಸ್ತಕಗಳನ್ನು ಜೋಡಿಸಿ ಸಭೆ ಕೋರಂ ಪೂರ್ಣಗೊಂಡಿರುವುದಾಗಿ ಬಿಂಬಿಸಲಾಗಿದೆ.ಸಾಮಥ್ರ್ಯ ವಿಸ್ತರಣೆ ಮತ್ತು ಉಪವಿದ್ಯುತ್ ಘಟಕ ಸ್ಥಾಪನೆ ಬಗ್ಗೆ ಮಾಹಿತಿ ನೀಡಲು ಸಂಪೂರ್ಣವಾಗಿ ನಿರಾಕರಿಸಲಾಗುತ್ತಿದೆ.ನಾವು ಮತ್ತೊಮ್ಮೆ ಸ್ಪಷ್ಟ ಪಡಿಸಲು ಇಚ್ಛಿಸುವುದೇನೆಂದರೆ,ಕಾರಖಾನೆ ಸಾಮಥ್ರ್ಯ ವಿಸ್ತರಣೆ ಮತ್ತು ಉಪವಿದ್ಯುತ್ ಘಟಕ ಸ್ಥಾಪನೆಗೆ ಯಾವ ಸದಸ್ಯರದ್ದೂ ವಿರೋಧವಿಲ್ಲ.ಆದರೆ ಈ ಕಾಮಗಾರಿ ಕೈಗೊಳ್ಳಲು ತೋರಿಸಲಾಗುತ್ತಿರುವ 128 ಕೋಟಿ ರೂ.ಗಳ ಮಿತಿಮೀರಿದ ಖರ್ಚಿಗೆ ಮಾತ್ರ ನಮ್ಮ ವಿರೋಧವಿದೆ. ಇದರಲ್ಲಿ 123 ಕೋಟಿ ರೂ.ಗಳನ್ನು ಬ್ಯಾಂಕ್ ಮತ್ತು ಶುಗರ್ ಡೆವಲ್ಪಮೆಂಟ್ ಫಂಡ್‍ನಿಂದ ಸಾಲ ತೆಗೆದುಕೊಳ್ಳಲಿದ್ದಾರೆ.ಇದರ ವಾರ್ಷಿಕ ಬಡ್ಡಿ ಈಗಿನ 9 ಕೋಟಿ ರೂ.ಗಳಿಂದ 20 ಕೋಟಿ ರೂ.ಗಳಿಗೆ ಏರಲಿದೆ.ಇಷ್ಟೊಂದು ಬಡ್ಡಿ ಮತ್ತು 113 ಕೋಟಿ ರೂ.ಗಳ ಸಾಲದ ಕಂತನ್ನು ಕಾರಖಾನೆ ತೀರಿಸುವುದಾದರೂ ಹೇಗೆ?ಕಾರಖಾನೆ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಸದಸ್ಯರು ಈ ಬಗ್ಗೆ ಗಮನ ಹರಿಸಬೇಕು.ಕಾರಖಾನೆ ಈ ಹಿಂದಿನ ಸಾಮಥ್ರ್ಯ ವಿಸ್ತರಣೆ ಕುರಿತು ಪರಿಶೀಲಿಸಿದಾಗ 1997 ರಲ್ಲಿ ಕೈಗೊಂಡ ವಿಸ್ತರಣೆಯಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ವತಃ ಚೇರಮನ್ ಅವರೇ 24-03-2007 ರ ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.ತದನಂತರ 2011 ರಲ್ಲಿ ಕೈಗೊಳ್ಳಲಾದ ವಿಸ್ತರಣೆ ಬಳಿಕಯೂ ಕೂಡ ಕಾರಖಾನೆ ವಾರ್ಷಿಕ ಕಬ್ಬು ನುರಿಸುವಲ್ಲಿ ಯಾವುದೇ ರೀತಿ ಹೆಚ್ಚಳ ಕಂಡುಬಂದಿಲ್ಲ.ಹೀಗಾಗಿ ಸಾಲದ ಕಂತು ಮತ್ತು ವಾರ್ಷಿಕ ಬಡ್ಡಿ ಹೇಗೆ ಭರಿಸಲಾಗುವುದು ಎಂಬ ಬಗ್ಗೆ ಆಡಳಿತ ಮಂಡಳಿ ಸದಸ್ಯರು ಖುದ್ದು ನ್ಯಾಯಾಲಯದ ಎದುರು ಮಂಡಿಸಿ ಸದಸ್ಯರ ಆತಂಕ ಕಡಿಮೆ ಮಾಡಬೇಕು ಎಂದು ವಿನಂತಿಸುತ್ತೇನೆ ಎಂದರು.ರಾಜು ಪೋವಾರ,ವಿಶ್ವನಾಥ ಕಿಲ್ಲೇದಾರ,ಬಚ್ಚಾರಾಮ ಸಾಂಡುಗೂಡೆ,ದಾದಾಸಾಹೇಬ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here