ಕಳ್ಳ ಸಾಗಾಟ : ಶ್ರೀ ಗಂಧದ ತುಂಡು ವಶ : ಕಳ್ಳನ ಬಂಧನ

0
16
loading...

ಮುಂಡಗೋಡ 20: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಒಬ್ಬ ಆರೋಪಿ ಸಮೇತ ಸುಮಾರು ಒಂದು ಲಕ್ಷ (100000)ರೂ ಮೌಲ್ಯದ ಸುಮಾರು 40 ಕೆಜಿ ತೂಕದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡ ಘಟನೆ ರವಿವಾರ ರಾತ್ರಿ ಕಾತೂರ ವಲಯ ಅರಣ್ಯ ಪ್ರದೇಶದ ಪಾಳಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಓರಲಗಿ ಗ್ರಾಮದ ಅರಣ್ಯದಲ್ಲಿ ನಡೆದಿದೆ.
ಖಚಿತಮಾಹಿತ ಪಡೆದ ಅರಣ್ಯ ಸಿಬ್ಬಂದಿ ರಾತ್ರಿ ಸುಮಾರು 9 ಗಂಟೆಗೆ ಕಾರ್ಯಚರಣೆ ನಡೆಸಿ ಶ್ರೀಗಂಧ ವಶಪಡಿಸಿಕೊಂಡು ಮದಾರಸಾಬ ಹಸನಸಾಬ ಮಳ್ನಾಡಡ (ಕಮರಿಸಿಕೊಪ್ಪ ) ಎಂಬ ಆರೋಪಿಯನ್ನು ಬಂದಿಸಿದ್ದಾರೆ, ಇನ್ನೊಬ್ಬ ಅರೋಪಿ ಇಸ್ಮಾಯಿಲ್ ಜಾಫರಸಾಬ ನಾಶಿಪುಡಿ ಪರಾರಿಯಾಗಿದ್ದಾನ್ನೆಲಾಗಿದೆ
ವಲಯ ಅರಣ್ಯಾಧಿಕಾರಿ ತಗ್ಗಿನಮನಿ ಮಾರ್ಗದರ್ಶನದಲ್ಲಿ ಕ್ಷೇತ್ರದ ವನಪಾಲಕ ಡಿ.ಎಸ್‍ಆಗೇರ, ಅರಣ್ಯರಕ್ಷಕರಾದ ಮಂಜುನಾಥ ದೊಡ್ಡಣವರ, ಮಂಜುನಾಥ ಎನ್ ಗೌಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here