ಕುಡಿಯುವ ನೀರಿಗಾಗಿ ಜಲಕುಂಭ ನಿರ್ಮಿಸುವುದಾಗಿ ಕತ್ತಿ ಭರವಸೆ

0
35
loading...

ಹುಕ್ಕೇರಿ06:ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಜಿ.ಪಂ ಅನುದಾನದಲ್ಲಿ ತಾಲೂಕಿನ ವಿವಿದೆಡೆ ಕೊಳವೆ ಭಾಂವಿ ಕೊರೆಸಿ ಪೈಪಲೈನ ಮತ್ತು ಜಲಕುಂಭ ನಿರ್ಮಿಸುತ್ತಿದ್ದೇವೆಂದು ಮಾಜಿ ಸಂಸದ ರಮೆಶ ಕತ್ತಿ ತಿಳಿಸಿದರು.
ಅವರು ಇಂದು ದಿ.5ರಂದು ಮುಂಜಾನೆ 11-30 ಕ್ಕೆ ತಾಲೂಕಿನ ಹಂದಿಗೂಡ ಗ್ರಾಮದಲ್ಲಿ 12 ಲಕ್ಷ ರೂ ಮೊತ್ತದ ಸಿ.ಸಿ.ರೋಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ತೋಟಪಟ್ಟಿ ಏರಿಯಾದಲ್ಲಿ ಇರುವ ಹತ್ತಾರು ಕುಟುಂಬಗಳಿಗಾಗಿ ಹಾಗೂ ಹರಿಜನ ಕಾಲೊನಿಯಲ್ಲಿ ಈ ಕಾಮಗಾರಿ ಕೈಗೊಂಡಿದ್ದು,ಅಮ್ಮಣಗಿ ಗ್ರಾಮದ ಡಬ್ಬುಗೋಳ,ಖಾನಾಪೂರೆ ತೋಟದ ಏರಿಯಾದಲ್ಲಿ ಕೊರೆದ ಕೊಳವೆ ಭಾಂವಿ ಯಶಸ್ವಿಯಾಗಿದ್ದು ಇದೀಗ ಅಂಬೇಡ್ಕರ ಕಾಲೋನಿಯ ನಿವಾಸಿಗಳಿಗಾಗಿ ಈ ಕೊಳವೆ ಭಾಂವಿ ಕೊರೆಯಲು ಪೂಜೆ ನೆರವೇರಿಸಿದ್ದಾಗಿ ತಿಳಿಸಿದರು.ಶಾಸಕ,ಸೋದರ ಉಮೇಶ ಕತ್ತಿ ಅವರ ನೆರವಿನಿಂದ ಹುಕ್ಕೇರಿಯ ಪಶು ಆಸ್ಪತ್ರೆಯಲ್ಲಿ ಗಿರಿರಾಜ ತಾಯಿ ಕೋಳಿ ಸಾಕಾಣಿಕಾ ಕೇಂದ್ರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ 5 ಕೋಟಿ ರೂ ಗಳ ಮೊತ್ತದ ಸಿಮೆಂಟ್ ಕಾಂಕ್ರೀಟ್ ರೋಡ್,ಸಮುದಾಯ ಭವನ,ರಾಜ್ಯದ ಮುಖ್ಯ ರಸ್ತೆಗಳ ಡಾಂಬರೀಕರಣದ ಕಾಮಗಾರಿಗಳ ಭೂಮಿ ಪೂಜಾ ನೆರವೇರಿಸಿದ್ದು,ಅವುಗಳನ್ನು ಸಮರ್ಪಕವಾಗಿ ಪೊರೈಸಿಕೊಳ್ಳುವುದು ಜನಪ್ರತಿನಿಧಿಗಳ ಮತ್ತು ಜನರ ಕರ್ತವ್ಯವೆಂದರು.
ಗೌಡವಾಡ,ನಿಡಸೋಸಿ,ಬುಗಟಿಆಲೂರ,ಕೋಣಕೇರಿ, ಶಿಪ್ಪೂರ,ಮಸೋಬಾ ಹಿಟ್ನಿ ಗ್ರಾಮದ ಎಸ್.ಸಿ ಕಾಲನಿಯಲ್ಲಿ ಸಿ.ಸಿ ರೋಡ,ಲೋಕೋಪಯೋಗಿ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಮತ್ತು ಇತರ ರಸ್ತೆಗಳ ಸುಧಾರಣಾ ಯೋಜನೆಯಡಿ ಸಂಕೇಶ್ವರ-ಯಾದಗೂಡ ಗೇಟ್,ಕೋಣಕೇರಿ-ಬುಗಟಿಆಲೂರ ರಸ್ತೆ,ನಾಗನೂರ ಕೆ.ಎಸ್‍ನಲ್ಲಿ ಹಾಲಸಿದ್ದನಾಥ ಭವನ ನಿರ್ಮಾಣ ಸೇರಿದಂತೆ ಒಟ್ಟು 16 ಕಾಮಗಾರಿಗಳ ಭೂಮಿ ಪೂಜೆ ಹಮ್ಮಿಕೊಂಡಿದ್ದಾಗಿ ನುಡಿದರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ ಅವರು ಆ ಕುರಿತು ಗ್ರಾಮಸ್ಥರು ನಿಗಾವಹಿಸಬೇಕೆಂದರು.
ಈ ಸಂದರ್ಭದಲ್ಲಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಬಿ.ಬಿ.ಮಂಜರಗಿ,ಹೀರಾ ಶುಗರ್ಸನ ಅಧ್ಯಕ್ಷ ಶಿವನಾಯಿಕ ನಾಯಿಕ,ಸಂಗಮ ಶುಗರ್ಸ ಅಧ್ಯಕ್ಷ ರಾಜೇಂದ್ರ ಪಾಟೀಲ,ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಸುಭಾಷ ಪಾಟೀಲ,ಜಿ.ಪಂ.ಸದಸ್ಯರಾದ ಮಕ್ಬೂಲ್ ಮುಲ್ಲಾ,ತನುಜಾ ಜಾಧವ,ತಾ.ಪಂ ಸದಸ್ಯ ಕಾಡಪ್ಪ ಕರಡಿ, ಪಿ.ಡಬ್ಲು.ಡಿ ಯ ಸಹಾಯಕ ಕಾರ್ಯಕಾರಿ ಅಭಿಯಂತರ ವ್ಹಿ.ಎನ್.ಪಾಟೀಲ,ಸಹಾಯಕ ಅಭಿಯಂತರ ಶಾಂತಾರಾಮ ಎಂಟೆತ್ತಿನವರ,ಕಿರಿಯ ಅಭಿಯಂತರ ಪಿ.ಆರ್.ಕಾಮತ,ಗುತ್ತಿಗೆದಾರರಾದ ಚಂದ್ರಶೇಖರ ಪಾಟೀಲ,ಸಂಜೀವ ಕಂಠಿ, ಕೆ.ದೊರೆಸ್ವಾಮಿ ಗ್ರಾ.ಪಂ ಸದಸ್ಯ ಪ್ರಭುಗೌಡ ಪಾಟೀಲ,ಅಶೋಕಗೌಡ ಪಾಟೀಲ,ಬಸಗೌಡ ದೇಸಾಯಿ,ನಿಡಸೋಸಿ ಗ್ರಾ.ಪಂ ಅಧ್ಯಕ್ಷೆ ಸರೋಜಿನಿ ಸೂಜಿ,ನಿಜಲಿಂಗ ಪಾಟೀಲ,ಸತ್ತೆಪ್ಪಾ ನಾಯಿಕ,ಪಟ್ಟಣ ಪಂಚಾಯತಿ ಅಧ್ಯಕ್ಷೆ ಶೋಭಾ ನಾಯಿಕ,ಉಪಾಧ್ಯಕ್ಷ ಶಹಜಾನ ಬಡಗಾಂವಿ,ಸದಸ್ಯರುಗಳಾದ ಜಯಗೌಡ ಪಾಟೀಲ,ವಿರೇಶ ಗಜಬರ, ಬಸಗೌಡ ಪಾಟೀಲ,ಮಾರುತಿ ಪವಾರ, ಹೈದರಬೇಗ ಇನಾಮದಾರ,ಕಾಡಪ್ಪ ಬೇವಿನಕಟ್ಟಿ,ಸಿದ್ದಪ್ಪ ಘಸ್ತಿ, ವಸಂತ ಬೇವಿನಕಟ್ಟಿ, ಮಯೂರ ಘಸ್ತಿ, ಮೊದಲಾದವರು ಸೇರಿದಂತೆ ನೂರಾರು ಧುರೀಣರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here