ಕೆಎಟಿ ಹೋರಾಟಕ್ಕೆ ಸ್ಪಂದಿಸಿದ ಸಂಸದ ಹುಕ್ಕೇರಿ

0
24
loading...

ಬೆಳಗಾವಿ:30 ಕೆಎಟಿ ಬೆಳಗಾವಿಯಲ್ಲಿ ಸ್ಥಾಪಿಸುವಂತೆ ಕೇಂದ್ರದ ಚಳಿಗಾಲದ ಸಂಸತ್‍ನ ಮಂಡಳದಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಇಂದಿಲ್ಲಿ ಹೇಳಿದರು.
ಅವರು ಶನಿವಾರ ನಗರದ ಕೋರ್ಟ ಆವರಣದಲ್ಲಿ ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ನಾನು ಎಲ್ಲ ರಾಜಕಾರಣಿಗಳಂತೆ ಭರವಸೆ, ಭಾಷಣ ಮಾಡುವುದು ಬೇಡವೆಂದು ಬೆಂಬಲ ಸೂಚಿಸಿಲು ಬಂದಿz್ದÉೀನೆ. ಕೆಎಟಿ ಬೆಳಗಾವಿಯಲ್ಲಿ ಸ್ಥಾಪಿಸಲು ಸಾಧ್ಯವಾ ಎಂಬೆಲ್ಲ ವಿಚಾರಗಳ ಬಗ್ಗೆ ನಿನ್ನೆಯೇ ಜಿಲ್ಲೆಯ ಹಿರಿಯ ನ್ಯಾಯವಾದಿಗಳಿಂದ ಮಾಹಿತಿ ಪಡೆದುಕೊಂಡಿz್ದÉೀನೆ. ಅಲ್ಲದೇ, ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಬೇಕೆಂದು ಪ್ರಶ್ನೆ ಪೆಟ್ಟಿಗೆಯಲ್ಲಿ ಪ್ರಶ್ನೆಯನ್ನು ಕೂಡ ಬರೆದು ಹಾಕಿz್ದÉೀ. ಲಾಟ್ರಿ ಮೂಲಕ ಚೀಟಿ ಎತ್ತುವುದರಿಂದ ಮೊದಲ ದಿನ ನನಗೆ ಮಾತನಾಡಲು ಅವಕಾಶ ಸಿಗಲಿಲ್ಲ.
ಆದರೂ, ಲೋಕಸಭೆ ಸ್ಪೀಕರ್ ಅವರನ್ನು ಸ್ವಯಂ ಭೇಟಿ ಮಾಡಿ ಬೆಳಗಾವಿ ನ್ಯಾಯವಾದಿಗಳು ಕೆಎಟಿಗಾಗಿ ನಡೆಸುತ್ತಿರುವ ಹೋರಾಟದ ಬಗ್ಗೆ ಮನವರಿ ಮಾಡಿಕೊಟ್ಟಿದ್ದರಿಂದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸ್ಪೀಕರ ಅವರು ಮಾಡಿಕೊಟ್ಟರು. ಬೆಳಗಾವಿಯಲ್ಲಿ ಕೆಎಟಿ ಸ್ಥಾಪಿಸಬೇಕೆಂಬ ವಿಚಾರವನ್ನು ಪ್ರಸ್ತಾಪ ಮಾಡಿz್ದÉೀನೆ. ಇದಕ್ಕೆ ಉತ್ತರಿಸಬೇಕಾಗಿದ್ದ ಕರ್ನಾಟಕದವರೇ ಆದ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡರು ಸದನದಲ್ಲಿ ಇರಲಿಲ್ಲ. ನನ್ನ ಪ್ರಶ್ನೆಗೆ ಸ್ಪೀಕರ್ ಅವರು ಕಾನೂನು ಸಚಿವರಿಂದ ಉತ್ತರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಉತ್ತರ ಕರ್ನಾಟಕದವರು ಬೇಡಿಕೆ ಈಡೇರಿಸಲು ಆಗ್ರಹಿಸಿ ಹೋರಾಟ ನಡೆಸುವುದು ಮತ್ತೇ ಸುಮ್ಮನಾಗುವುದು ಮಾಡುತ್ತಿz್ದÉೀವೆ. ಎಲ್ಲಿಯ ವರೆಗೆ ನಮ್ಮ ಬೇಡಿಕೆ ಈಡೇರುವುದಿಲ್ಲವೊ ಅಲ್ಲಿಯವರೆಗೆ ಹೋರಾಟದಿಂದ ಹಿಂದೆ ಸರಿಯಬಾರದು ಎಂದು ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.
ಇದೇ ಸಂದರ್ಭದಲ್ಲಿ ಖಾನಾಪುರ ಎಂಇಎಸ ಶಾಸಕ ಅರವಿಂದ ಪಾಟೀಲ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಹಾಗೂ ಎಬಿವಿಪಿ ಸಂಘಟನೆಗಳು ವಕೀಲರ ಹೋರಾಟಕ್ಕೆ ಬೆಂಬಲ ಸೂಚಿಸಿದವು.
ಮಾಜಿ ಅಧ್ಯಕ್ಷ ಎ.ಜಿ. ಮುಳವಾಡಮಠ, ರಮೇಶ ದೇಶಪಾಂಡೆ, ಆರ.ಸಿ. ಪಾಟೀಲ, ಪ್ರವೀಣ ಮೋತಿಮಠ, ಬಸವರಾಜ ಜಂಗನ್ನವರ, ಗಿರೀಜಾ ಪಾಟೀಲ, ಸರಿತಾ ಮಿರಜಕರ, ಬಿ.ಜೆ. ಗಂಗಾಯಿ, ಎ.ಆರ. ಪಾಟೀಲ, ಬಿ.ಐ. ಸುಲ್ತಾನಪುರಿ, ಎಸ.ಎಸ. ಕಿವಡಸನ್ನವರ, ತಿಮ್ಮಣ್ಣ ಸನದಿ, ಗುರುರಾಜ ಹುಳ್ಳೆರ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here