ಖೊಟ್ಟಿ ಜಾತಿಯಿಂದ ನೌಕರ ಪಡೆದವರ ತನಿಖೆಗೆ ತಾರಾ ಒತ್ತಾಯ

0
16
loading...

ಬೆಳಗಾವಿ:04 ಖೊಟ್ಟಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಿ ಸರಕಾರ ನೌಕರಿ ಪಡೆದವರ ವಿರುದ್ಧ ಕ್ರೀಮಿನಲ್ ಕೆಸ್ ದಾಖಲು ಮಾಡಬೇಕೆಂದು ವಿಧಾನ ಸಭೆ ಸದಸ್ಯೆ, ಚಿತ್ರ ನಟಿ ತಾರಾ ಅನುರಾಧ ಇಂದಿಲ್ಲಿ ಹೇಳಿದರು.
ಅವರು ಸೋಮವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ನಕಲಿ ಪ್ರಮಾಣ ಪತ್ರ ನೀಡಿ ಚಿಕ್ಕ ಚಿಕ್ಕ ಅಟೆಂಡರ, ಜವಾನ ಹುದ್ದೆಗಳನ್ನು ಪಡೆಯುತ್ತಿರುವುದು ತೀರಾ ಕಡಿಮೆ. ಆದರೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕುಳಿತಿರುವ ಅಧಿಕಾರಿಗಳು ಸಹ ಖೊಟ್ಟಿ ದಾಖಲೆ ಪ್ರಮಾಣ ಪತ್ರ ನೀಡಿ ಸರಕಾರಿ ಸೇವೆಯಲ್ಲಿರುವುದು ಗಮನಕ್ಕೆ ಬಂದಿದೆ. ಇದನ್ನು ಸಿಓಡಿ ತನಿಖೆ ನಡೆಸಿ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.
ಖೊಟ್ಟಿ ಪ್ರಮಾಣ ಪತ್ರ ನೀಡಿ ನೌಕರಿ ಪಡೆಯುತ್ತಿರುವುದರಿಂದ ನಿಜವಾದ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದವರಿಗೆ ಅನ್ಯಾಯವಾಗುತ್ತಿದೆ. ಇದು ಪ್ರತಿಯೊಂದು ಇಲಾಖೆಯಲ್ಲಿ ಇಂಥ ಹಗರಣಗಳು ಬೆಳಕಿಗೆ ಬಂದಿದ್ದು ಶೀಘ್ರವೇ ಇದನ್ನು ಸಿಓಡಿ ತನಿಖೆ ನಡೆಸಿ ಆರೋಪಿಗಳ ವಿರುದ್ದ ಶಿಸ್ತು ಬದ್ಧ ಕ್ರಮ ಜರುಗಿಸಬೇಕೆಂದು ತಾರಾ ಹೇಳಿದರು.
ವಿವಿಧ ಸರಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆದಾರರು ಕಾರ್ಯನಿರ್ವಹಿಸುತ್ತಿದ್ದು ರಾಜ್ಯದಲ್ಲಿ ಅವರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಮಾನವೀಯತೆ ದೃಷ್ಠಿಯಿಂದ 10ವರ್ಷಗಳ ಮೇಲ್ಪಟ್ಟು ಕಾರ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆದಾರರನ್ನು ಖಾಯಂಗೊಳಿಸಬೇಕೆಂದು ತಾರಾ ಸರಕಾರಕ್ಕೆ ಸೂಚಿಸಿದರು.

“ಗಡಿನಾಡಿನ ಬೆಳಗಾವಿಯಲ್ಲಿ ಮರಾಠಿಗರ ಸಂಖ್ಯೆ ಹೆಚ್ಚಿದ್ದು ಅವರ ಬಗ್ಗೆ ತುಂಬಾ ಗೌರವವಿದೆ. ಆದರೆ ಕೆಲವು ಮುಗ್ಧ ಮರಾಠಿಗರನ್ನು ಮುಂದಿಟ್ಟುಕೊಂಡು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಎಮ್‍ಇಎಸ್ ನಾಯಕರುಗಳು ಬಳಸಿಕೊಳ್ಳುತ್ತಿರುವುದು ಖಂಡನೀಯ.
ಕರ್ನಾಟಕ ಸರಕಾರ ನೀಡುತ್ತಿರುವ ಸಕಲ ಸೌಕರ್ಯ ಪಡೆದು ಕನ್ನಡ ನಾಡಿಗೆ ದ್ರೋಹ ಬಗೆಯುವದು ಸರಿಯಲ್ಲ. ಕನ್ನಡ ನಾಡಿನಲ್ಲಿ ಬದುಕಿದ್ದಾರೆ. ಭಾಷಾ ತಾರತಮ್ಯ ಮಾಡದೆ ಎಲ್ಲರೂ ಸಹಕಾರದಿಂದ ಹೊಂದಿಕೊಂಡು ಬದುಕಬೇಕೆಂದು ತಾರಾ ಹೇಳಿದರು.”

ಕರ್ನಾಟಕ ರಾಜ್ಯ ಅಖಂಡವಾಗಿರಬೇಕು ಸಹೋದರ ಉಮೇಶ ಕತ್ತಿ ಅವರು ಪ್ರತ್ಯೇಕ ರಾಜ್ಯದ ಕೂಗೂ ಹಾಕುತ್ತಿರುವದು ಒಳ್ಳೆಯದಲ್ಲ. ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ಸರಕಾರದ ಗಮನಕ್ಕೆ ತಂದು ಈ ಭಾಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕೇವಲ ರಾಜಕಾರಣಿಗಳು ಹಾಗೂ ಚಲನ ಚಿತ್ರ ನಟಿಯರು ದಕ್ಷಿಣ ಕರ್ನಾಟಕದ ಸಮಸ್ಯೆಯಿದ್ದರೆ ಒಗ್ಗಟ್ಟಾಗಿ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದ ಸಮಸ್ಯೆಯ ಬಗ್ಗೆ ನಿರ್ಲಕ್ಷ ತೋರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಉತ್ತರ ಕರ್ನಾಟಕದಲ್ಲಿ ಯಾವ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಬೇಕೆಂಬುದನ್ನು ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಚರ್ಚೆ ನಡೆಸಿ ಈ ಭಾಗದ ಅಭಿವೃದ್ಧಿಗಾಗಿ ಶ್ರಮಿಸುವುದಕ್ಕೆ ತಾವು ಸಿದ್ದರಿರುವುದಾಗಿ ಖಚಿತಪಡಿಸಿದರು.

loading...

LEAVE A REPLY

Please enter your comment!
Please enter your name here