ನಿಡಸೋಸಿ-ಸಂಕೇಶ್ವರ ರಸ್ತೆ ಕಾಮಗಾರಿಗೆ ಮಾಜಿ ಸಂಸದ ರಮೇಶ ಕತ್ತಿ ಚಾಲನೆ

0
26
loading...

ಸಂಕೇಶ್ವರ 06 : ಪ್ರಸಕ್ತ ಸಾಲಿನ ರಸ್ತೆ ಸುಧಾರಣೆ ಯೋಜನೆಯಡಿ ನಿಡಸೋಸಿಯಿಂದ ಸಂಕೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ 2.05 ಕೋಟಿ ವೆಚ್ಚದ ಸುಮಾರು 6 ಕಿ.ಮೀ. ರಸ್ತೆ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು, ಪ್ರಥಮ ಹಂತವಾಗಿ 80 ಲಕ್ಷ ಮೊತ್ತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಅವರು ಇಂದು ಬುಧವಾರ ಇಲ್ಲಿಗೆ ಸಮೀಪದ ನಿಡಸೋಸಿ ಗ್ರಾಮದಲ್ಲಿ ಲೋಕೋಪಯೋಗಿ ಹಾಗೂ ಬಂದರು ಒಳನಾಡು ಜಲಸಾರಿಗೆ ಇಲಾಖೆಯಿಂದ ಮಂಜೂರಾದ ನಿಡಸೋಸಿಯಿಂದ ಸಂಕೇಶ್ವರ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಥಮ ಹಂತದ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡುತ್ತ,  ಎರಡನೆಯ ಹಂತವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಇನ್ನೂಳಿದ 1.25 ಕೋಟಿ ವೆಚ್ಚದ ಕಾಮಗಾರಿ ಮಂಜೂರಾಗಿ ಕೈಗೆತ್ತಿಕೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದರು.
ಅಲ್ಲದೇ ಧಾರ್ಮಿಕ ಹಾಗೂ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಿಡಸೋಸಿ ಗ್ರಾಮವು ಬೆಳವಣಿಗೆ ಹೊಂದುತ್ತ ಸಾಗಿದ್ದು, ಸಂಚಾರ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿಡಸೋಸಿಯಿಂದ ಕ್ರಾಸವರೆಗೆ ಅಂದಾಜು 1.7 ಕಿ.ಮೀ ಕೈಗೆತ್ತಿಕೊಂಡಿದ್ದ 1.60 ಕೋಟಿ ವೆಚ್ಚದ ದ್ವಿಪಥ ರಸ್ತೆ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು ಬರುವ ಜನೇವರಿಯಲ್ಲಿ ಪೂರ್ಣಗೊಳ್ಳಲಿದೆ.
ಈಗಾಗಲೇ ರಸ್ತೆ ಅಗಲೀಕರಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ಈ ಕಾಮಗಾರಿಯಲ್ಲಿ ಸೇತುವೆ, ರಸ್ತೆ ವಿಭಜಕ, ಬೀದಿದೀಪ ಅಳವಡಿಕೆ ಕಾರ್ಯವನ್ನೊಳಗೊಂಡಿದ್ದು ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವದೆಂದು ಹೇಳಿದರು.
ಮುಂದುವರೆದ ಅವರು, ರಸ್ತೆ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ತ್ವರಿತವಾಗಿ ಕೈಕೊಳ್ಳುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚಿದರಲ್ಲದೇ, ನಿಡಸೋಸಿ ಗ್ರಾಮದಲ್ಲಿ ನಿರ್ಮಾಣಗೊಂಡ ಪ್ರವಾಸಿ ಮಂದಿರ, ನಿಡಸೋಸಿ-ಅಕ್ಕಿವಾಟ ರಸ್ತೆಗೆ ನಿರ್ಮಿಸಲಾಗಿರುವ ಸೇತುವೆ ಹಾಗೂ ಗ್ರಾಮದಲ್ಲಿ ಕೈಕೊಂಡ ಇನ್ನೀತರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಾಮರ್ಶೆ ನಡೆಸಿದರು. ಅಲ್ಲದೇ ಮುಂದಿನ ದಿನಗಳಲ್ಲಿ ಕೈಕೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ವಿವರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಹಿರಾಶುಗರ ಚೇಅರಮನ್ ಶಿವನಾಯಿಕ ನಾಯಿಕ, ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ದುಂಡಪ್ಪಾ ಹೆದ್ದೂರಿ, ಜಿ.ಪಂ. ಸದಸ್ಯೆ ತನುಜಾ ಜಾಧವ, ಸುಭಾಷ ಪಾಟೀಲ, ದುಂಡಪ್ಪಾ ಗಳಗಿ, ತಾ.ಪಂ. ಸದಸ್ಯ ದುರದುಂಡಿ ಕೆಂಗಾರ, ನಿಜಲಿಂಗನಗೌಡ ಪಾಟೀಲ, ಶಿವಾನಂದ ಕರೋಶಿ ಗ್ರಾ.ಪಂ. ಅಧ್ಯಕ್ಷೆ ಸರೋಜನಿ ಸೂಜಿ, ಉಪಾಧ್ಯಕ್ಷ ಶಾಂತಿನಾಥ ಖಾನಾಪೂರೆ, ಶಿವಾನಂದ ಪದ್ಮಣ್ಣವರ, ಶಂಕರ ಮಾದನ್ನವರ,  ಗಜಾನನ ಬಾಡ, ಅಕ್ಕಪ್ಪ ಪದ್ಮಣ್ಣವರ, ಬಸವಣ್ಣಿ ನಾಗನೂರಿ, ಚನ್ನಮಲ್ಲ ವಾಣಿ, ದುಂಡಪ್ಪಾ ದಾದುಗೋಳ, ಮಲ್ಲಪ್ಪಾ ನಿಂಗನೂರಿ, ಸುಜಾತಾ ಕಮ್ಮಾರ, ಶೋಭಾ ಪಾಟೀಲ, ಪಾರ್ವತಿ ಮಠದ, ರಾಜೇಶ್ವರಿ ದಾದುಗೋಳ, ರೇಣುಕಾ ಮಾತಂಗಿ, ಛಾಯಾ ಕುಂಬಾರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here