ಬಸ್ ನಿಲ್ದಾಣ ಕಾಮಗಾರಿಗೆ ಶಾಸಕಿ ಜೊಲ್ಲೆ ಚಾಲನೆ

0
28
loading...

ನಿಪ್ಪಾಣಿ 02:  ಸ್ಥಳೀಯ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶನಿವಾರದಂದು ಭೂಮಿಪೂಜೆ ನೇರವೇರಿಸುವುದರೊಂದಿಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನಿಪ್ಪಾಣಿ ಬಸ್ ನಿಲ್ದಾಣ ಜಿಲ್ಲೆಯ ಅತ್ಯಂತ ಮಹತ್ವದ ಮತ್ತು ಉಭಯ ರಾಜ್ಯಗಳನ್ನು ಸಂಧಿಸುವ ಕೊಂಡಿಯಾಗಿದೆ.ಹೀಗಾಗಿ 5.60 ಕೋಟಿ ರೂ.ಗಳ ವೆಚ್ಚದಲ್ಲಿ ಮುಂದಿನ 40 ವರ್ಷಗಳ ಕಾಲಾವಧಿ ಗಮನದಲ್ಲಿರಿಸಿಕೊಂಡು ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ.ಈ ಮೊದಲು ತಯಾರಿಸಲಾಗಿದ್ದ ನೀಲಿನಕ್ಷೆ  ಕೆಲ ತಪ್ಪುಗಳಿಂದ ಕೂಡಿತ್ತು.ಈ ಬಗ್ಗೆ ಸಾರಿಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರೀಷ್ಕøತ ನೀಲಿನಕ್ಷೆಯನ್ನು ಸಿದ್ಧಪಡಿಸಲಾಗಿದೆ.ಅದರಂತೆ ಚಿಕ್ಕೋಡಿ ರಸ್ತೆ ಕಡೆಯಿಂದ ನಿಲ್ದಾಣದ ಪ್ರವೇಶದ್ವಾರ ಮತ್ತು ಕೊಲ್ಲಾಪುರ ರಸ್ತೆಯೆಡೆ ಹೊರಹೋಗುವ ದ್ವಾರ ನಿರ್ಮಿಸಲಾಗುವುದು.ಏಕಕಾಲಕ್ಕೆ 26 ಬಸ್‍ಗಳ ನಿಲುಗಡೆ ಮಾಡಲು ಸಾಧ್ಯವಾಗಲಿದೆ. ಮುಂದಿನ ಕಾಲಾವಧಿಯಲ್ಲಿ ನಿಲ್ದಾಣ ವಿಸ್ತರೀಕರಣ ದೃಷ್ಟಿಕೋನದಿಂದ ವರ್ಕಶಾಪ್ ಮತ್ತು ಡಿಪೋಅನ್ನು ಇತರೆಡೆ ಸ್ಥಳಾಂತರಿಸಲಾಗುವುದು.ಆ ಜಾಗದಲ್ಲಿ ಗ್ರಾಮೀಣ ಪ್ರದೇಶಗಳ ಬಸ್ ನಿಲುಗಡೆ ಮಾಡಲಾಗುವುದು.ನೂತನ ಬಸ್ ನಿಲ್ದಾಣದಲ್ಲಿ ಎಲ್ಲ ರೀತಿ ಮೂಲಭೂತ ಸೌಲಭ್ಯಗಳನ್ನು ಶೌಚಾಲಯ,ಉಪಹಾರಗೃಹ,ನೀರು,ಸ್ವಾಗತಕಕ್ಷೆ,ಪ್ರತ್ಯೇಕ ಮಹಿಳಾ ಕೊಠಡಿ ಹೀಗೆ ನಾಗರೀಕರು ಮತ್ತು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಿಕೊಡಲಾಗುವುದು. ನವೆಂಬರ್ 2015 ಕ್ಕೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಮಾಡಲಾಗುವುದು.ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಹಿರಿಯ ಅಧಿಕಾರಿ ಬಿ.ವಿ.ಶ್ರೀನಿವಾಸ,ಕಾರ್ಯಕಾರಿ ಅಭಿಯಂತ ಪ್ರಕಾಶ ಕಬಾಡಿ,ಸಹಾಯಕ ಅಭಿಯಂತ ಶ್ರೀನೀವಾಸ ವೃತ್ತಿಕೊಪ್ಪ,ಡಿಪೋ ಮ್ಯಾನೇಜರ್ ಎಂ.ಎಸ್.ಲಾಟಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here