ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಆಗ್ರಹ : ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0
23
loading...

ಮುದ್ದೇಬಿಹಾಳ 27 : ಸಮಾಜದಲ್ಲಿ ಬೇರೂರಿರುವ ಬಾಲ ಕಾರ್ಮಿಕ ಪದ್ಧತಿಯನ್ನು ಹೋಗಾಲಡಿಸಬೇಕು.ಮಕ್ಕಳಿಗೆ ತಮ್ಮ ಬಾಲ್ಯವನ್ನು ಸರಿಯಾಗಿ ಅನುಭವಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ಪ್ರಗತಿಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ಓಂಶಾಂತಿಯಿಂದ ಆರಂಭಗೊಂಡ ಪ್ರತಿಭಟನಾ ಹಾಗೂ ಜಾಗೃತಿ ಮೂಡಿಸುವ ಆಂದೋಲನ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳು,ಅವರ ಬಾಲ್ಯವನ್ನು ಸದ್ಯದ ಸಮಾಜ ಕಸಿದುಕೊಳ್ಳುವ ರೀತಿಯನ್ನು ರೂಪಕ,ಬೀದಿ ನಾಟಕದ ಮೂಲಕ ಪ್ರದರ್ಶನ ನಡೆಸಲಾಯಿತು.
ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತದಲ್ಲಿ ಹಾಯ್ದು ಮಿನಿವಿಧಾನಸೌಧ ತಲುಪಿದ ಸಂಘಟನೆಗಳ ಮುಖಂಡರು, ಬಳಿಕ ತಹಸೀಲ್ದಾರ್‍ಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೀಚ್ಸ್ ಸಂಸ್ಥೆಯ ನಿರ್ದೇಶಕ ಕೆ.ಬೂದೆಪ್ಪ, ಜಿಲ್ಲೆಯಲ್ಲಿರುವ ಹಾಗೂ ತಾಲೂಕಿನಲ್ಲಿ,ಪಟ್ಟಣದಲ್ಲಿ ಚಹಾ ಹೊಟೇಲ್‍ಗಳಲ್ಲಿ,ಕಟ್ಟಡ ಕಟ್ಟುವರ ಕೈಯ್ಯಲ್ಲಿ,ಬೀದಿ ಬದಿ ವ್ಯಾಪಾರ ನಡೆಸುವರ ಬಳಿ ಚಿಕ್ಕ ಮಕ್ಕಳನ್ನು ದುಡಿಮೆಗೆ ತೊಡಗಿಸಲಾಗುತ್ತಿದೆ.ಸಂಬಂದಿಸಿದ ಇಲಾಖೆಯವರು ಈ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಮುಮzಗುತ್ತಿಲ್ಲ ಎಂದು ದೂರಿದರು.
ಅಲ್ಲದೇ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ದೌರ್ಜನ್ಯಗಳ್ನು ತಡೆಯಲು ಈಚೆಗೆ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ಸಮರ್ಪಕ ಜಾರಿಗೆ ಮಾಡುವುದು,ಬಾಲ್ಯವಿವಾಹ ನಿಷೇಧ ಕಾಯಿದೆಯ ಮ್ತು ಡಾ.ಶಿವರಾಜ ಪಾಟೀಲ ಅವರು ಸೂಚಿಸಿದ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು,ಆರ್‍ಟಿಇ ಕಾಯದೆ ಸಮರ್ಪಕ ಅನುಷ್ಠಾನ,ಮಕ್ಕಳ ಸಹಾಯವಾಣಿ ಸೇವೆಯನ್ನು ಬಲಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಮಲ್ಲಿನಾಥ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಇದಕ್ಕೂ ಮುನ್ನ ಪ್ರಭಾರಿ ಬಿಇಓ ಎಸ್.ಬಿ.ಚಲವಾದಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.ಎಸಿಡಿಪಿಓ ಸುಮಿತ್ರಾ ಸರಗಣಾಚಾರಿ,ವಿವಿಧ ಸಮಸ್ಥೆಗಳ ಪ್ರಮುಖರಾದ ಬಸವರಾಜ,ಅಂಥೋನಿ,ಅಶೋಕ ಯರಗಟ್ಟಿ,ಗಂಗಾ ತೋಟ,ಹರ್ಷಾ ಶೇಳಕೆ,ಸಂತೋಷ ಢವಳಗಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತರಯ,ರೀಚ್ಸ್ ಸಂಸ್ಥೆಯ ಪದಾಧಿಕಾರಿಗಳು ಇದ್ದರು.

loading...

LEAVE A REPLY

Please enter your comment!
Please enter your name here