ಬೆಟಸೂರ ಮಠದ ಪುಣ್ಯಾರಾಧನೆ ಮತ್ತು ಪಲ್ಲಕ್ಕಿ ಉತ್ಸವ

0
27
loading...

ಸವದತ್ತಿ 03: ಪಟ್ಟಣದ ಸುಕ್ಷೇತ್ರ ಬೆಟಸೂರ ಮಠದಲ್ಲಿ ಅಕ್ಟೋಬರ 28 ರಿಂದ ನವಂಬರ 1 ರವರೆಗೆ ಜಾತ್ರಾ ಕಾರ್ಯಕ್ರಮಗಳು ಮತ್ತು ಪಲ್ಲಕ್ಕಿ ಉತ್ಸವ ಜರುಗಿದವು. ಸ್ವಾದಿಮಠದ ಶಿವಬಸವ ಮಹಾಸ್ವಾಮಿಗಳು, ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳು ಮತ್ತು ಬೆಟಸೂಕ ಮಠದ ಅಜ್ಜಯ್ಯ ಮಹಾಸ್ವಾಮಿಗಳ ನೇತ್ರದಲ್ಲಿ ಲಿಂ. ಗುರುಸಿದ್ಧೇಶ್ವರ ಮಹಾಸ್ವಾಮಿಗಳ, ಅಂದಾನೇಶ್ವರ ಮಹಾಸ್ವಾಮಿಗಳ ಮತ್ತು ಬೆಟಸೂರ ಮಠದ ಉಭಯ ಪಟ್ಟಾಧ್ಯಕ್ಷರ ಪುಣ್ಯಾರಾಧನೆಜರುಗಿದವು.

ಸ್ಥಳೀಯ ಶಾಸಕ ಆನಂದ ಮಾಮನಿ, ವಿರುಪಾಕ್ಷ ಮಾಮನಿ, ಮಾಜಿ ಶಾಸಕ ರಾಜಣ್ಣ ಮಾಮನಿ ಮಹಾಮಠದ ಪಲ್ಲಕ್ಕಿ ಉತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
5 ದಿನಗಳ ನಿರಂತರ ಪ್ರಾತ:ಕಾಲ ಕರ್ತೃಗದ್ದುಗೆಗೆ ರುದ್ರಾಭಿಷೇಕ ಮತ್ತು ನಿಜಗುಣರ ಶಾಸ್ತ್ರ, ಬಸವೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆದವು.
ರಬಕವಿ ಆನಂದಾಶ್ರಮದ ಪ್ರಭುಸ್ವಾಮಿಗಳಿಂದ 5 ದಿವಸ ಪ್ರವಚನ ಕಾರ್ಯಕ್ರಮ ನಡೆಯಿತು. ಜಾತ್ರೆಯ ಕೊನೆಯ ಭಕ್ತಾದಿಗಳಿಗೆ ಮಹಾಪ್ರಸಾಸ ವಿತರಿಸಲಾಯಿತು.
ತಾಲೂಕಿನ ಯಡ್ರಾಂವಿ, ಬೆಟಸೂರ, ಉಳ್ಳಿಗೇರಿ, ಕರೀಕಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿದ ಭಜನಾ ಮಂಡಳಗಳು, ಬ್ಯಾಂಡ, ಡೊಳ್ಳಿನ ಮಜಲು, ಲೇಜೀಮು, ಜಾಂಜಪಥಾಕ ಮುಂತಾಹ ವಾದ್ಯವೈಭವಗಳೊಂದಿಗೆ ಪಲ್ಲಕ್ಕಿ ಉತ್ಸವ ಜರುಗಿತು. ಬಿ.ಬಿ. ಗೊರವನಕೊಳ್ಳ, ವಾಯ್.ಎಂ. ಯಾಕೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು.

loading...

LEAVE A REPLY

Please enter your comment!
Please enter your name here