ಭ್ರಷ್ಠ ಅಧಿಕಾರಿಗಳನ್ನು ಬಿಟ್ಟು ನಿಷ್ಠವಂತರನ್ನು ಅಮಾನತು ಮಾಡಿರುವದು ಅನ್ಯಾಯ

0
26
loading...

ಕುಷ್ಟಗಿ:ನ:17 ತಾಲೂಕಿನಲ್ಲಿ ಎಷ್ಟೋ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಭಷ್ಠಾಚಾರವನ್ನು ಮಾಡಿದ್ದಾರೆ, ಮಾಡುತಿದ್ದಾರೆ, ಮತ್ತು ಭ್ರಷ್ಠಾಚಾರವನ್ನು ಮಾಡಿ ಹೊಗಿದ್ದಾರೆ, ಅಂತಹ ಭ್ರಷ್ಠ ಅಧಿಕಾರಿಗಳನ್ನು ಬಿಟ್ಟು ನಿಷ್ಠಾವಂತಿಕೆಯಿಂದ ಜನರ ಸೇವೆ ಮಾಡುತ್ತಿರುವ ತುಗ್ಗಲದೋಣಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯನ್ನು
ಅಮಾನತ್ತು ಮಾಡಿರುವದು ಬಹಳ ಅನ್ಯಾಯ ಎಂದು ತುಗ್ಗಲಡೋಣಿ ಗ್ರಾಮದ ಗ್ರಾಮಸ್ಥರು, ಗ್ರಾಮ ಘಟಕದ [ನಾರಾಯಣ ಗೌಡ ಬಣ]ಕರವೇ ಕಾರ್ಯರ್ತರು, ಗ್ರಾಮ ಪಂಚಾಯತ್ ಅದ್ಯಕ್ಷರು, ಕೆಲ ಸದಸ್ಯರು ಹಾಗೂ ತಾ.ಪಂ ಸದಸ್ಯ ಶರಣು ತಳ್ಳಿಕೇರಿ ಇವರ ನೇತೃತ್ವದಲ್ಲಿ ಧಿಡೀರನೆ ತಾಲೂಕು ಪಂಚಾಯತ್ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರಟಿಭಟನೆ ನೆಡೆಸಿದರು.

ನಂತರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ ಬದಿ ಇವರ ಮೂಲಕ ಜಿಲ್ಲಾ ಪಂಚಾಯತ್ ಇ.ಓ ಕೃಷ್ಣ ಉದಪುಡಿ ಅವರಿಗೆ ಅಮಾನತ್ತು ಮಾಡಿದ ತುಗ್ಗಲದೋಣಿ ಗ್ರಾ.ಪಂ ಅಭಿವೃದ್ಧಿ ಅಧಿಕಾಯಾದ ಶಂಕ್ರಪ್ಪ ಅರ್ಜುನಪ್ಪ ಇವರ ಅಮಾನತ್ತು ಆದೇಶವನ್ನು ಕೂಡಲೆ ಹಿಂಪಡೆಯಬೇಕು ಎಂದು ಮನವಿ ಸಲ್ಲಿಸಿದರು.
ಪಿ.ಡಿ.ಓ ಶಂಕ್ರಪ್ಪ ಇವರು ಯಾವುದೇ ತಪ್ಪು ಮಾಡಿದೇ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಅಮಾನತ್ತು ಮಾಡಿರುವದು ತುಂಬಾ ನೋವಿನ ಸಂಗತಿ. ಪ್ರತಿ ದಿನ ಗ್ರಾಮ ಪಂಚಾಯತಿಗೆ ಹೋಗಿ ಜನರ ಸಮಸ್ಯೆಯನ್ನು ಆಲಿಸಿ ಸ್ಪಂದನೆ ಮಾಡುವಂತ ವ್ಯಕ್ತಿಯಾಗಿದ್ದಾರೆ. ತಾಲೂಕು ಪಂಚಾಯತಿಗೆ ಎಲ್ಲಾ ಯೋಜನೆಯ ಪ್ರಗತಿ ವರದಿಗಳನ್ನು ಸರಿಯಾದ ಸಮಯಕ್ಕೆ ಸಲ್ಲಿಸುತ್ತಿದ್ದು ಯಾವುದೇ ಯೋಜನೆಗಳಲ್ಲಿ ಕುಂಠಿತವಾಗಿಲ್ಲ. ಜಿಲ್ಲಾ ಪಂಚಾಯತ್ ಅಧಿಕಾಗಳಾದ ತಾವುಗಳು ಸರಿಯಾದ ರೀತಿಯಲ್ಲಿ ಶಂಕ್ರಪ್ಪನವರ ಕಾರ್ಯವೈಕರಿಯನ್ನು ಪರಿಸಿಲನೆ ಮಾಡಿ ಒಂದು ವೇಳೆ ಅವರಲ್ಲಿ ತಪ್ಪುಗಳು ನಡೆದಿದ್ದರೆ ಕ್ರಮಕೈಗೊಳ್ಳ ಬಹುದು. ಅಲ್ಲಿ ಹೊರೆಗೂ ಅಮಾನತ್ತು ಮಾಡಿದ ಆದೇಶವನ್ನು ಹಿಂಪಡೆಯಬೇಕು. ಆದರೆ ಒಂದು ವೇಳೆ ಇವರ ಅಮಾನತ್ತಿನ ಆದೇಶವನ್ನು ಹಿಂಪಡೆಯದಿದ್ದರೆ ಗ್ರಾಮ ಪಂಚಾಯತ ಕಛೇರಿ ಮುಂದೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂಧರ್ಭದಲ್ಲಿ ಗ್ರಾ.ಪಂ ಅದ್ಯಕ್ಷ ಹನಮಂತ ಬನ್ನಟ್ಟಿ, ಗ್ರಾ.ಪಂ ಉಪಾದ್ಯಕ್ಷ ಹನಮಂತ, ಗ್ರಾಮ ಘಟಕದ ಕರವೆ ಅದ್ಯಕ್ಷ ಅಂದನಪ್ಪ ಅಂಗಡಿ, ಗೌರವ್ವದ್ಯಕ್ಷ ಮಲನಗೌಡ ಪಾಟೀಲ, ಬಸವರಾಜ, ಶರೀಫ್ ಸಾಬ, ಹುಸೇನಸಾಬ, ಮುತ್ತುರಾಜ ಕುಂಬಾರ, ಪರಸಪ್ಪ ಭಜೇತ್ರಿ, ಪರಸಪ್ಪ, ದೇವೇಂದ್ರಪ್ಪ, ಯಮನೂರಪ್ಪ, ಶರಣವ್ವ, ಮತ್ತು ಹಲವಾರಿ ಗ್ರಾಮದ ನಾಗರಿಕರು ಉಪಸ್ಥರಿದ್ದರು.

loading...

LEAVE A REPLY

Please enter your comment!
Please enter your name here