ಮಾನಭಂಗಕ್ಕೆ ಯತ್ನಿಸಿದ ಮಜ್ಜಗಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯ

0
25
loading...

ಬೆಳಗಾವಿ,ನ.23: ಮಹಿಳಾ ಅಧಿಕಾರಿ ಮೇಲೆ ಮಾನಭಂಗಕ್ಕೆ ಯತ್ನಿಸಿದ ಹೆಸ್ಕಾಂ ಕಾರ್ಯನಿರ್ವಾಕ ಇಂಜಿನಿಯರ್ ತುಕಾರಾಮ್ ಮಜ್ಜಗಿ ಅವರನ್ನು ಪೊಲೀಸ್‍ರು ಬಂಧಿಸಿದೇ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ಇಟ್ಟಿರುವದನ್ನು ಖಂಡಿಸಿ ಹಾಗೂ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ಮಹಿಳಾ ಸೇವಾ ಸಂಘದ ಕಾರ್ಯಕರ್ತರು ರವಿವಾರ ನಗರದ ಕೆಎಲ್‍ಇ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಆರೋಪಿ ಮಜ್ಜಿಗೆಯ ಮೇಲೆ ನೊಂದ ಮಹಿಳೆ ಅತ್ಯಾಚಾರಕ್ಕೆ ಯತ್ನದ ಲಿಖಿತ ದೂರು ದಾಖಲಿಸಿ 4 ದಿನಗಳೂ ಕಳೆದರೂ ಬೆಳಗಾವಿ ಮಾಳ ಮಾರುತಿ ಪೊಲೀಸ್‍ರು ಪ್ರಕರಣಕ್ಕೆ ಸಂಬಂಧಿಸಿದ ಮಜ್ಜಿಗೆ ಸೇರಿ 2 ಆರೋಪಿಗಳನ್ನು ವಿಚಾರಣೆ ನಡೆಸಿಯೂ ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸದೇ ಮೊದಲು ಜಿಲ್ಲಾಸ್ಪತ್ರೆಯಲ್ಲಿ ಈಗ ಕೆಎಲ್‍ಇ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ಇಟ್ಟಿರುವದು ಖಂಡನೀಯವಾಗಿದೆ. ವಿಚಾರಣೆ ನಡೆಸಿದ ನಂತರವೂ ಇದುವರೆಗೂ ತುಕಾರಾಮ್‍ನನ್ನು ಬಂಧಿಸಿಲ್ಲ ಎಂದು ಪೊಲೀಸ್‍ರು ಹೇಳುತ್ತಿರುವದು ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತಿದೆ. ಹಾಗೂ ತುಕಾರಾಮ್ ಆರೋಗ್ಯ ಸ್ಥಿತಿಯಲ್ಲಿದ್ದು ಪ್ರಕರಣ ಮುಚ್ಚಿ ಹಾಕಲು ಆರೋಪಿಗೆ ಪೊಲೀಸ್‍ರು ಸಾಥ್ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.
ತುಕಾರಾಮ್ ಮಜ್ಜಿಗೆ ಓರ್ವ ಆರೋಪಿಯಾಗಿದ್ದರೂ ಆತನಿಗೆ ಪೊಲೀಸ್‍ರು ಆಸ್ಪತ್ರೆಯಲ್ಲಿ ಮೊಬೈಲ್ ಬಳಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಅವರಿಗೆ ದಿನನಿತ್ಯ ಇಲಾಖೆಯ ಅಧಿಕಾರಿಗಳಿಗೆ ಭೇಟಿ ಮಾಡುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ತುಕಾರಾಮ್ ಈ ಪ್ರಕರಣವನ್ನು ಆಸ್ಪತ್ರೆಯಲ್ಲೇ ಇದ್ದುಕೊಂಡು ಈ ಪ್ರಕರಣವನ್ನು ಮುಚ್ಚಿಹಾಕುವ ಸಾಧ್ಯತೆ ಇರುವದರಿಂದ ಈ ಕಾಮಪಿಶಾಚಿಯನ್ನು ತಕ್ಷಣ ಬಂದಿಸಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ನೊಂದ ಮಹಿಳೆಗೆ ನ್ಯಾಯ ಒದಗಿಸಿಕೊಡುವಂತೆ ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಹಿಳೆಯರ ಮೇಲಿ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸ್‍ರು ಸಾಮಾನ್ಯ ಜನರಿಗೂ ಇದೇ ರೀತಿಯ ಸಡಲಿಕೆಯನ್ನು ನೀಡಿದರೇ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುವದರಲ್ಲಿ ಸಂಶಯವಿಲ್ಲ. ಮಹಿಳೆಯರ ರಕ್ಷಣೆ ವಿಷಯದಲ್ಲಿ ಕರ್ನಾಟಕ ಸರಕಾರಕ್ಕೆ ಕಟ್ಟ ಹೆಸರು ಬರುವ ಮೊದಲೇ ನೊಂದ ಮಹಿಳಾ ಅಧಿಕಾರಿಗೆ ನ್ಯಾಯ ಒದಗಿಸಿಕೊಡದೇ ಇದ್ದಲ್ಲಿ ಮಹಿಳಾ ಕುಲಕ್ಕೆ ಘೋರ ಅನ್ಯಾಯ ಮಾಡಿದಂತಾಗುತ್ತದೆ. ಕಾರಣ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತುಕಾರಾಮ್ ಮಜ್ಜಿಗೆಯನ್ನು ಜೈಲಿಗಟ್ಟಿ ಕಠಿಣ ಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ಅಧ್ಯಕ್ಷೆ ಸೀಮಾ ಇನಾಮ್‍ದಾರ್ ವಹಿಸಿದ್ದರು. ಸಂಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here