ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಪ್ರಾರಂಭ : ಪೋತದಾರ

0
23
loading...

ಬೆಳಗಾವಿ 27 : ತಾಲೂಕಿನ ಕಾಕತಿ ಗ್ರಾಮದಲ್ಲಿರುವ ಮಾರ್ಕಂಡೇಯ ಸಹಕಾರಿ ಸಕ್ಕರೆ ಕಾರ್ಖಾನೆಯು 2015 ನೇ ಸಾಲಿನಲ್ಲಿ ಕಬ್ಬು ನುರಿಸಲಿರುವ ಹಿನ್ನೆಲೆಯಲ್ಲಿ ಶೇರ್ ಬಂಡವಾಳದಿಂದ ಹಣ ಸಂಗ್ರಹಿಸಲು ಕಾರ್ಖಾನೆ ಮುಂದಾಗಿದ್ದು 4 ಸಾವಿರ ರೂ. ಶೇರ್ ಬೆಲೆ ನಿಗದಿಪಡಿಸಲಾಗಿದೆÉ ಎಂದು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅವಿನಾಶ ಪೆÇೀತದಾರ ತಿಳಿಸಿದರು.
ಬುಧವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇರ್ ಸದಸ್ಯತ್ವ ಪಡೆಯಲು ಡಿ.31 ರವರೆಗೆ ಅವಕಾಶ ಇದೆ ಎಂದರು. ಆರಂಭದಲ್ಲಿ ಶೇರ್ ಖರೀದಿದಾರರಿಗೆ ಹೆಚ್ಚಿನ ಹೊರೆ ನೀಡಲಾಗಿಲ್ಲ. 2000 ಶೇರ್ ಹಣದಲ್ಲಿ 1000 ರೂ ತುಂಬಿ ಶೇರ್ ಮಾಡಿದವರು ಇನ್ನುಳಿದ ಹಣ ತುಂಬಬೇಕು. ಹೊಸದಾಗಿ ಸದಸ್ಯರಾಗ ಬಯಸುವವರು ಪ್ರವೇಶ ಹಾಗೂ ಶೇರ್ ಫೀ ಸೇರಿ 4100 ರೂ ತುಂಬಿ ಶೇರ್‍ದಾರರಾಗಬೇಕು ಎಂದು ವಿವರಿಸಿದರು.
ಕಾರ್ಖಾನೆಯ ಶೇ. 90 ರಷ್ಟು ಕಾಮಗಾರಿ ಮುಗಿದಿದೆ. ಪ್ರಖ್ಯಾತ ಕಂಪನಿಗಳ ಟರ್ಬೈನ್, ಬಾಯ್ಲರ್ ಹೈಡ್ರೋಲಿಕ್ ಡ್ರೈವ್, ಸೆಂಟ್ರಿಫ್ಯೂಗಲ್ ಪಂಪ್‍ಗಳು ಈಗಾಗಲೇ ಬಂದಿವೆ. ಕಾಮಗಾರಿಗಳಲ್ಲಿ ಬಾಕಿ ಉಳಿದ ಅಲ್ಪಸ್ವಲ್ಪ ಕೆಲಸಗಳನ್ನು ಈ ವರ್ಷ ಪೂರ್ಣಗೊಳಿಸಲಾಗುವುದು. ಮೊದಲು ಪ್ರಾಯೋಗಿಕವಾಗಿ ಕಾರ್ಖಾನೆ ಆರಂಭಿಸಿ, ನಂತರ ಪೂರ್ಣ ಪ್ರಮಾಣದಲ್ಲಿ ಕಬ್ಬು ನುರಿಸುವ ಕಾರ್ಯ ನಡೆಯಲಿದೆ ಎಂದರು. ಕಾರ್ಖಾನೆಯಲ್ಲಿ 14 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದ್ದು, ಮೊದಲ ಹಂತದಲ್ಲಿ 7 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಚಿಂತನೆ ಇದೆ ಎಂದರು.
ಕಾರ್ಖಾನೆ ಪ್ರಗತಿ ಕಾಮಗಾರಿಗಳಿಗೆ ನವದೆಹಲಿಯ ಎನ್‍ಸಿಡಿಸಿಯಿಂದ 22.43 ಕೋಟಿ ರೂಪಾಯಿ ಹೆಚ್ಚಿನ ಅವಧಿ ಸಾಲದ ಮಂಜೂರಾತಿ ದೊರಕಿದೆ. ಇದರ ಮೊದಲಿನ ಕಂತಾಗಿ 7.48 ಕೋಟಿ ರೂ.ಗಳನ್ನು 22-1-2011ರ ಪ್ರಕಾರ ಬಿಡುಗಡೆ ಮಾಡಿದ್ದಾರೆ. ಎರಡನೇಯ ಹಾಗೂ ಕೊನೆಯ ಕಂತಿನ 14.95 ಕೋಟಿ ರೂ. ಹಣ ನವೆಂಬರ್ 13, 2014 ರಂದು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಯಲ್ಲಪ್ಪ ಕಾಂಬಳೆ, ನೀಲಿಮಾ ಪಾವಸೆ, ತಾನಾಜಿ ಪಾಟೀಲ, ಮನೋಹರ ಹುಕ್ಕೇರಿಕರ, ಸುರೇಶ ಡುಕ್ರೆ ಎಂ. ಡಿ. ಮಲ್ಲೂರ, ಉಪಾಧ್ಯಕ್ಷ ಯಲ್ಲೋಜಿರಾವ ಪಿಂಗಟ, ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here