ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಪ್ರಥಮ ಬಹುಮಾನ ಹುಲಗೂರ ತಂಡಕ್ಕೆ

0
22
loading...

ಶಿಗ್ಗಾವಿಃ-ದಿ-23 ರ ಗುರುವಾರ ಎಂ.ಕೆ.ಬಿ.ಎಸ್. ಶಾಲೆ ನಂ 1 ಶಿಗ್ಗಾಂವ ಇದರ ಆಟದ ಮೈದಾನದಲ್ಲಿ ಜರುಗಿದ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಪ್ರಥಮ ಬಹುಮಾನ ಹುಲಗೂರ ಖಾದರಲಿಂಗ ತಂಡಕ್ಕೆ, ದ್ವಿತಿಯ ಗೌಡಗೇರಿ ತಂಡ, ತೃತಿಯ ನೆಲೋಗಲ್ ಹಾಗೂ ಬಸರಿಕಟ್ಟಿ ತಂಡಗಳು ಪಡೆದುಕೊಂಡಿವೆ.
ರಾಷ್ಟ್ರೀಯ ಏಕತಾ ದಿನ ಹಾಗೂ ಭಾರತ ಸಂವಿಧಾನ ದಿನದ ಪ್ರಯುಕ್ತ ಪ್ರಥಮ ಬಾರಿಗೆ ಮುಕ್ತ ಕಬ್ಬಡ್ಡಿ ಪಂದ್ಯಾವಳಿಯನ್ನು ಶ್ರೀ ಮಾರಿಕಾಂಬಾ ಟ್ರಸ್ಟ ಕಮಿಟಿ (ಕೊರಮ ಸಮಾಜ, ಆಮೆಚೂರಿ ಸಂಸ್ಥೆ ಹಾಗೂ ನಿರ್ಣಾಯಕ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ದಿ-20 ರ ಗುರುವಾರ ನಡೆಸಲಾಯಿತು. ಉತ್ತಮ ಹಿಡಿತಗಾರ ಶರಣ, ಹಾಗೂ ದಾಳಿಗಾರ ಆನಂದ ಗೋವಿಂದಪ್ಪನವರ, ಆಲರೌಂಡರ್‍ಆಗಿ ವಾಸು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಮಾರಿಕಾಂಬಾ ಟ್ರಸ್ಟ ಕಮಿಟಿ ಕೊರಮ ಸಮಾಜದ ಅಧ್ಯಕ್ಷರಾದ ಎಲ್ಲಪ್ಪ ಗದಗ, ಉಪಾಧ್ಯಕ್ಷ ಮರೆಪ್ಪ ಗದಗ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಅಶೋಕ ಜಿ ಕಾಳೆ, ಸದಸ್ಯರಾದ ಪ್ರಕಾಶ ತಡಸ, ಬಸವರಾಜ ಗದಗ, ಗಂಗಾಧರ ಅಂದಲಗಿ, ಶಿವು ಬೆಂಡಿಗೇರಿ, ದುರಗಪ್ಪ ಗದಗ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here